ETV Bharat / state

ಚಾಮರಾಜನಗರದಲ್ಲಿ ಕೊವ್ಯಾಕ್ಸಿನ್ ಕೊರತೆ... ಎರಡನೇ ಡೋಸ್​ಗೆ ಕಾಯುತ್ತಿದ್ದಾರೆ ಸಾವಿರಾರು ಮಂದಿ..! - chamrajnagar people waits for 2nd dose

ಚಾಮರಾಜನಗರದಲ್ಲಿ ಕೊವ್ಯಾಕ್ಸಿನ್ ಅಲಭ್ಯತೆಯ ಸಮಸ್ಯೆ ತಲೆದೋರಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದ್ದು, ಜನ 2ನೇ ಡೋಸ್​ ಪಡೆಯಲು ಕಾದು ಕುಳಿತಿದ್ದಾರೆ.

covaxin
covaxin
author img

By

Published : Apr 28, 2021, 9:59 PM IST

ಚಾಮರಾಜನಗರ: ಭಾರತ್ ಬಯೋಟೆಕ್​ನ ಕೊವ್ಯಾಕ್ಸಿನ್ ಸಮರ್ಪಕವಾಗಿ ಜಿಲ್ಲೆಗೆ ಸರಬರಾಜು ಆಗದ ಹಿನ್ನೆಲೆಯಲ್ಲಿ ಕೊರತೆ ಕಾಣಿಸಿಕೊಂಡಿದೆ ಎಂದು ಈಟಿವಿ ಭಾರತಕ್ಕೆ ಉನ್ನತ ಮೂಲಗಳು ತಿಳಿಸಿವೆ.

ದೇಶದಲ್ಲಿ ಈಗಾಗಲೇ ನೀಡಲಾಗುತ್ತಿತುವ ಕೋವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ಲಸಿಕೆಗಳಲ್ಲಿ ಕೋವಿಶೀಲ್ಡ್ ಮಾತ್ರ ಜಿಲ್ಲೆಗೆ ಪೂರಕವಾಗಿ ಸರಬರಾಜಾಗುತ್ತಿದ್ದು ಕೊವ್ಯಾಕ್ಸಿನ್ ಅಲಭ್ಯತೆಯ ಸಮಸ್ಯೆ ತಲೆದೋರಿದೆ.

ಜಿಲ್ಲೆಯಲ್ಲಿ ಈಗಾಗಲೇ 1,46,526 ಮಂದಿಗೆ ಲಸಿಕೆ ವಿತರಿಸಲಾಗಿದ್ದು ಇವರಲ್ಲಿ 1,20,264 ರಷ್ಟು ಮಂದಿಗೆ ಕೋವಿಶೀಲ್ಡ್ ನೀಡಿದ್ದು, 24,260 ಮಂದಿಗೆ ಕೊವ್ಯಾಕ್ಸಿನ್ ವಿತರಿಸಲಾಗಿದೆ. ಆದರೆ, ಕೆಲದಿನಗಳಿಂದ ಕೊವ್ಯಾಕ್ಸಿನ್ ಪೂರೈಕೆಯೇ ಆಗದಿರುವುದರಿಂದ ಸಾವಿರಾರು ಮಂದಿಗೆ ಇನ್ನೂ ಎರಡನೇ ಡೋಸ್ ಕೊಟ್ಟಿಲ್ಲ ಎಂದು ಹೆಸರು ಹೇಳಲಿಚ್ಛಿಸಿದ ವೈದ್ಯರೊಬ್ಬರು ಈಟಿವಿ ಭಾರತಕ್ಕೆ ಸ್ಪಷ್ಟಪಡಿಸಿದ್ದಾರೆ.

5-6 ಸಾವಿರ ಮಂದಿಗೆ ಎರಡನೇ ಡೋಸ್ ಕೊಡಬೇಕಿದ್ದು ವಿವಿಧ ಸೆಂಟರ್​ಗಳಲ್ಲಿ 2730 ಡೋಸ್ ಅಷ್ಟೇ ಇದ್ದು ಅದು ಕೂಡ ಒಂದೇ ಸೆಂಟರ್​ನಲ್ಲಿ ಇಲ್ಲದಿರುವುದರಿಂದ ಎರಡನೇ ಡೋಸ್ ನೀಡಲಾಗುತ್ತಿಲ್ಲ. ಜಿಲ್ಲೆಯ ಎಲ್ಲಾ ಲಸಿಕಾ ಕೇಂದ್ರಗಳಲ್ಲೂ ಈಗ ಕೋವಿಶೀಲ್ಡ್ ನೀಡಲಾಗುತ್ತಿದ್ದು ಜಿಲ್ಲೆಯಲ್ಲಿ ಇನ್ನು 6610 ಡೋಸ್ ಕೋವಿಶೀಲ್ಡ್ ಇದ್ದು ಸಮರ್ಪಕವಾಗಿ ಪೂರೈಕೆಯಾಗುತ್ತಿದೆ.

ಇದು ಕೇವಲ ಜಿಲ್ಲೆಯ ಸಮಸ್ಯೆಯಲ್ಲ, ರಾಜ್ಯದಲ್ಲೇ ಈ ಸಮಸ್ಯೆ ಉದ್ಭವಿಸಿದ್ದು ಶೀಘ್ರದಲ್ಲೇ ಲಸಿಕೆ ಒದಗಿಸುವ ಭರವಸೆ ನೀಡುವ ವಿಶ್ವಾಸ ಆರೋಗ್ಯ ಇಲಾಖೆಯದ್ದಾದರೇ ಎರಡನೇ ಡೋಸ್ ಪಡೆಯಲು ನಿತ್ಯ ಅಲೆದಾಟುತ್ತಿರುವ ನೂರಾರು ಮಂದಿ ಔಷಧಿ ಸಿಗದೇ ಆತಂಕದಲ್ಲಿದ್ದಾರೆ.

ಲಸಿಕೆ ಅಲಭ್ಯತೆ ಕುರಿತು ಡಿಎಚ್ಒ ರವಿ ಅವರನ್ನು ಸಂಪರ್ಕಿಸಲು ಪ್ರಯತ್ನಿಸಲಾಯಿತಾದರೂ ಸಂಪರ್ಕಕ್ಕೆ ಸಿಗಲಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.