ETV Bharat / state

ಕೇರಳ ಗಡಿಯಿಲ್ಲಿಲ್ಲ ನಿರ್ಬಂಧ: ಸರ್ಕಾರದ ಮಾರ್ಗಸೂಚಿಗಾಗಿ ಕಾಯುತ್ತಿರುವ ಆರೋಗ್ಯ ಇಲಾಖೆ

ಕೋವಿಡ್-19 ಪ್ರಕರಣಗಳ ಉಲ್ಬಣವಾಗುತ್ತಿರುವ ಹಿನ್ನೆಲೆಯಲ್ಲಿ ಕೇರಳ ಗಡಿಯಲ್ಲಿ ಯಾವುದೇ ನಿರ್ಬಂಧಗಳನ್ನು ಹೇರಿಲ್ಲ. ಇದರಿಂದ ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಗಳು ರಾಜ್ಯ ಸರ್ಕಾರದ ಕೋವಿಡ್​ ಮಾರ್ಗಸೂಚಿಗಾಗಿ ಕಾಯುತ್ತಿದ್ದಾರೆ.

Covid Guideline
ಕೇರಳ ಗಡಿಯಿಲ್ಲಿಲ್ಲ ನಿರ್ಬಂಧ: ಸರ್ಕಾರದ ಮಾರ್ಗಸೂಚಿಗಾಗಿ ಕಾಯುತ್ತಿರುವ ಆರೋಗ್ಯ ಇಲಾಖೆ
author img

By ETV Bharat Karnataka Team

Published : Dec 19, 2023, 1:51 PM IST

ಕೇರಳ ಗಡಿಯಿಲ್ಲಿಲ್ಲ ನಿರ್ಬಂಧ: ಸರ್ಕಾರದ ಮಾರ್ಗಸೂಚಿಗಾಗಿ ಕಾಯುತ್ತಿರುವ ಆರೋಗ್ಯ ಇಲಾಖೆ

ಚಾಮರಾಜನಗರ: ''ಚಾಮರಾಜನಗರ ಜಿಲ್ಲೆಯಲ್ಲಿ ಶೂನ್ಯ ಕೋವಿಡ್ ಪ್ರಕರಣಗಳಿದ್ದು, ಕಠಿಣ ಸಂದರ್ಭ ಎದುರಿಸಲು ಜಿಲ್ಲಾ‌ ಆರೋಗ್ಯ ಇಲಾಖೆಯ ಸನ್ನದ್ಧವಾಗಿದೆ'' ಎಂದು ಡಿಎಚ್ಒ ಡಾ. ಚಿದಂಬರ ಹೇಳಿದರು.

ಕೇರಳದಲ್ಲಿ ರೂಪಾಂತರಿ ಕೋವಿಡ್​ ಪ್ರಕರಣ ಕಾಣಿಸಿಕೊಂಡಿರುವ ಹಿನ್ನೆಲೆ, ಚಾಮರಾಜನಗರದಲ್ಲಿ ಮಾಧ್ಯಮವರೊಂದಿಗೆ ಮಾತನಾಡಿದ ಅವರು, ''ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಬಂದ ಬಳಿಕ ಕೇರಳ ಗಡಿಯಲ್ಲಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಜಿಲ್ಲೆಯಲ್ಲಿ ಶೂನ್ಯ ಕೋವಿಡ್ ಪ್ರಕರಣ ಇರುವುದರಿಂದ ಆತಂಕ ಪಡುವ ಅಗತ್ಯವಿಲ್ಲ'' ಎಂದರು.

''ಮುಂದಿನ ದಿನಗಳಲ್ಲಿ ಕೋವಿಡ್​ ಕಾಣಿಸಿಕೊಂಡರೆ, ಅದನ್ನು ಎದುರಿಸಲು ಎಲ್ಲಾ ರೀತಿಯಲ್ಲೂ ನಾವು ಸನ್ನದ್ದರಾಗಿದ್ದೇವೆ. ಆಮ್ಲಜನಕ ಮತ್ತು ಬೆಡ್​ಗಳಿಗೆ ಸಂಬಂಧಿಸಿದಂತೆ ಮಾಕ್ ಡ್ರಿಲ್ ಕೂಡ ನಡೆಸಿದ್ದು, ಹಾಸಿಗೆಗಳು, ಐಸೋಲೇಷನ್ ವಾರ್ಡ್​ಗಳು, ಔಷಧ ದಾಸ್ತಾನು ನಮ್ಮಲ್ಲಿ ಸಾಕಷ್ಟಿದೆ'' ಎಂದು ಅವರು ತಿಳಿಸಿದ್ದಾರೆ.

''ಸರ್ಕಾರದ ಗೈಡ್​ಲೈನ್ಸ್ ಬಂದ ಬಳಿಕ ಪರೀಕ್ಷೆಗಳು, ಪತ್ತೆ ಹಚ್ಚುವ ಕಾರ್ಯ, ಐಸೋಲೆಟೆಡ್ ಮಾಡಲಾಗುವುದು, ಯಾರೂ ಕೂಡ ಆತಂಕ ಪಡಬಾರದು ಎಂದು ಮನವಿ ಮಾಡಿದರು. ಪ್ರಸ್ತುತ ನಮ್ಮ ಜಿಲ್ಲೆಯಲ್ಲಿ 1,049 ಆಮ್ಲಜನಕ ಸಿಲಿಂಡರ್, 4 ಪಿಎಸ್ಐ ಪ್ಲಾಂಟ್, ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ 2, ಪೈಪ್ ಲೈನ್ ಆಕ್ಸಿಜನ್ ವ್ಯವಸ್ಥೆ 4 ಆಸ್ಪತ್ರೆಗಳಲ್ಲಿವೆ. ಒಂದು ವೇಳೆ ಕೊರತೆಯಾದರೂ ತ್ವರಿತ ಪೂರೈಕೆಗೆ ಎಲ್ಲಾ ತಯಾರಿ ನಡೆಸಲಾಗಿದೆ'' ಎಂದು ಮಾಹಿತಿ ನೀಡಿದ್ದಾರೆ.

ಇನ್ನೂ ಚಾಮರಾಜನಗರ ಜಿಲ್ಲೆ ಕೇರಳ ಗಡಿಯನ್ನು ಹಂಚಿಕೊಂಡಿದ್ದು, ಮೂಲೆಹೊಳೆ ಚೆಕ್ ಪೋಸ್ಟ್​ನಲ್ಲಿ ಸದ್ಯ ಯಾವುದೇ ತಪಾಸಣೆ ಮಾಡುತ್ತಿಲ್ಲ. ಕೇರಳದಿಂದ ಬರುತ್ತಿರುವವರಿಗೆ ಮುಕ್ತ ಪ್ರವೇಶವಿದ್ದು, ಇದುವರೆಗೂ ಕೂಡ ಯಾವುದೇ ತಪಾಸಣೆ, ಪರೀಕ್ಷಾ ಕಾರ್ಯ ಆರಂಭವಾಗಿಲ್ಲ.

ಇದನ್ನೂ ಓದಿ: JN.1 ತಳಿ ಮೇಲೆ ಕಣ್ಗಾವಲಿಡಿ, ಕೋವಿಡ್​ ಏರಿಕೆ ಕಾಣದಂತೆ ಜಾಗ್ರತೆ ವಹಿಸಿ; ರಾಜ್ಯಗಳಿಗೆ ಕೇಂದ್ರದ ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.