ETV Bharat / state

ಮಹಾರಾಜರಿಗೂ ಮಾಸ್ಕ್, ಗೊಂಬೆಗಳ ನಡುವೆ ಅಂತರ: ನವರಾತ್ರಿ ವೈಭವದಲ್ಲಿ ಕೊರೊನಾ ಜಾಗೃತಿ - Corona Awareness in Dasara festival

ಕಳೆದ 80 ವರ್ಷಗಳಿಂದ ಗುಂಡ್ಲುಪೇಟೆಯ ಕೆಎಸ್ಎನ್ ಶಾಲೆ ಎದುರುಗಿನ ವಿ.ಆರ್.ಸುಬ್ಬರಾವ್ ಅವರ ಮನೆಯಲ್ಲಿ ಬೊಂಬೆ ಪ್ರದರ್ಶನ ಮಾಡುತ್ತಿದ್ದು , ಈ ಬಾರಿ ಗೊಂಬೆಗಳ ಮೂಲಕವೇ ಮಹಾಮಾರಿ ಕೊರೊನಾ ವಿರುದ್ಧ ಜಾಗೃತಿ ಮೂಡಿಸುತ್ತಿದ್ದಾರೆ.

Chamarajnagar
ಗೊಂಬೆಗಳ ನಡುವೆ ಅಂತರ: ನವರಾತ್ರಿ ವೈಭವದಲ್ಲಿ ಕೊರೊನಾ ಜಾಗೃತಿ...
author img

By

Published : Oct 18, 2020, 11:17 AM IST

ಚಾಮರಾಜನಗರ: ಗಾಂಭೀರ್ಯವದನರಾದ ನಾಲ್ವಡಿ ಅವರಿಗೂ ಮಾಸ್ಕ್, ಲಾಫಿಂಗ್ ಬುದ್ಧನ ಕೈಯಲ್ಲಿ ಸ್ಯಾನಿಟೈಸರ್, ಪ್ರತಿ ಗೊಂಬೆಗಳ ನಡುವೆ ಸಾಮಾಜಿಕ‌ ಅಂತರ ಬಿಂಬಿಸಿ ನವರಾತ್ರಿಯಲ್ಲಿ ಕೊರೊನಾ ಜಾಗೃತಿಗೆ ಮುಂದಾಗಿದೆ ಈ ಕುಟುಂಬ.

ಗೊಂಬೆಗಳ ನಡುವೆ ಅಂತರ: ನವರಾತ್ರಿ ವೈಭವದಲ್ಲಿ ಕೊರೊನಾ ಜಾಗೃತಿ...

ಹೌದು, ಕಳೆದ 80 ವರ್ಷಗಳಿಂದ ಗುಂಡ್ಲುಪೇಟೆಯ ಕೆಎಸ್ಎನ್ ಶಾಲೆ ಎದುರಿಗಿನ ವಿ.ಆರ್.ಸುಬ್ಬರಾವ್ ಅವರ ಮನೆಯಲ್ಲಿ ಬೊಂಬೆ ಪ್ರದರ್ಶನ ಮಾಡುತ್ತಿದ್ದು , ಈ ಬಾರಿ ಗೊಂಬೆಗಳ ಮೂಲಕವೇ ಮಹಾಮಾರಿ ಕೊರೊನಾ ವಿರುದ್ಧ ಜಾಗೃತಿ ಮೂಡಿಸುತ್ತಿದ್ದಾರೆ. ಸುಬ್ಬರಾವ್ ಮನೆಯಲ್ಲಿ ಕಳೆದ 8 ದಶಕಗಳಿಂದ ನವರಾತ್ರಿ ಪ್ರಯುಕ್ತ 10 ದಿನಗಳ ಕಾಲ ಬೊಂಬೆ ಕೂರಿಸುವ ಪದ್ಧತಿ ನಡೆದು ಬಂದಿದ್ದು, ಪ್ರತಿವರ್ಷವೂ ಒಂದು ಕಲ್ಪನೆಯೊಂದಿಗೆ ವೈಭವ ರೂಪು ತಾಳುತ್ತದೆ. ಕಾರ್ಗಿಲ್ ಯೋಧರಿಗೆ ನಮನ, ಶ್ರೀನಿವಾಸ ಕಲ್ಯಾಣ, ನಲಿ - ಕಲಿ, ಪ್ರವಾಸಿ ತಾಣಗಳು, ಮದುವೆ ಮನೆ ಸಂಭ್ರಮ, ಹಳ್ಳಿ ಜೀವನ ಹೀಗೆ ವಿಭಿನ್ನ ಕಲ್ಪನೆ ಮತ್ತು ಅಷ್ಟೇ ಆಕರ್ಷಣೀಯವಾದ ಪ್ರದರ್ಶನ ಈ ಬಾರಿ ಕೊರೊನಾ ಜಾಗೃತಿಗೆ ಮೀಸಲಾಗಿದೆ.

ಮಿನಿಯೇಚರ್​​ಗಳು ಸೇರಿದಂತೆ 5 ಸಾವಿರಕ್ಕೂ ಹೆಚ್ಚು ಗೊಂಬೆಗಳನ್ನು ಕೂರಿಸುವ ಸುಬ್ಬರಾಬ್ ಹಾಗೂ ಉಮಾರಾವ್ ದಂಪತಿ ಈ ಬಾರಿ "ಮಾಸ್ಕ್ ಧರಿಸಿ- ಕೊರೊನಾ ಓಡಿಸಿ", "ಸಾಮಾಜಿಕ ಅಂತರ ಇರಲಿ", "ಸ್ಯಾನಿಟೈಸರ್ - ಮಾಸ್ಕ್ ಅಷ್ಟೇ ಮದ್ದು" ಎಂಬ ಭಿತ್ತಿಪತ್ರಗಳನ್ನು ಅಂಟಿಸಿ, ಪ್ರತಿ ಗೊಂಬೆಗಳ ಸಾಲಿನಲ್ಲಿ ಸ್ಯಾನಿಟೈಸರ್, ಆಯುರ್ವೇದ ಮಾತ್ರೆಗಳನ್ನು ಇಟ್ಟಿದ್ದಾರೆ. ಪ್ರತಿಸಾಲಿನ ಮುಖ್ಯ ಗೊಂಬೆಗಳಿಗೆ ಮಾಸ್ಕ್ ಹಾಕಿರುವುದು ಗಮನ ಸೆಳೆಯಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.