ಚಾಮರಾಜನಗರ: ಕೆಸರಿನ ಆವಣದಲ್ಲಿ ಜ್ವರ ತಪಾಸಣೆ ಮಾಡಿಸಿಕೊಳ್ಳಲು ಬರುವವರ ಪಡಿಪಾಟಲು ಬಗ್ಗೆ ಈಟಿವಿ ಭಾರತ ವರದಿ ಬಿತ್ತರಿಸಿದ 1 ತಾಸಿನಲ್ಲೇ ಕೆಸರು ರೋಗಕ್ಕೆ ನಗರಸಭೆ ಮುಲಾಮು ಹಚ್ಚಿದೆ.
ಹೌದು, ನಗರದ ಪೇಟೆ ಪ್ರೈಮರಿ ಶಾಲೆಯ ಜ್ವರ ತಪಾಸಣೆ ಕೇಂದ್ರದ ಆವರಣ, ಎರಡು ದಿನ ಸುರಿದ ಜೋರು ಮಳೆಗೆ ರಾಡಿ ಎದ್ದು ಕೆಸರು ಗದ್ದೆಯಾಗಿತ್ತು. ಗರ್ಭಿಣಿಯರು, ಹೊರ ಜಿಲ್ಲೆಯಿಂದ ಬಂದವರು ಕೆಸರು ತುಳಿದು ಜಾರಿ ಬೀಳುವ ಆತಂಕದಲ್ಲೇ ತಪಾಸಣ ಕೇಂದ್ರಕ್ಕೆ ತೆರಳುತ್ತಿದ್ದುದರ ಕುರಿತು ನಿನ್ನೆ ಮಧ್ಯಾಹ್ನ ಈಟಿವಿ ಭಾರತ ವರದಿ ಬಿತ್ತರಿಸಿತ್ತು.
ಚಾಮರಾಜನಗರ ಜ್ವರ ತಪಾಸಣಾ ಕೇಂದ್ರಕ್ಕೆ 'ಕೆಸರು' ರೋಗ
ವರದಿ ಗಮನಿಸಿದ ನಗರಸಭೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಕೆಸರನ್ನು ಹೊರಹಾಕಿ ಮಣ್ಣನ್ನು ಸುರುವಿದ್ದಾರೆ. ತಾತ್ಕಾಲಿಕವಾಗಿ ಕೆಸರು ತುಳಿದು ತಪಾಸಣಾ ಕೇಂದ್ರಕ್ಕೆ ಹೋಗುವುದನ್ನು ತಪ್ಪಿಸಿದ್ದಾರೆ. ಜೊತೆಗೆ, ತಪಸಣಾ ಕೇಂದ್ರದ ಆವರಣದಲ್ಲೂ ರಾಡಿ ಆಗುವುದನ್ನು ತಪ್ಪಿಸಿದ್ದಾರೆ.