ETV Bharat / state

ಇದೇ 7 ರಿಂದ 10ರವರೆಗೆ ಚಾಮರಾಜನಗರ ದಸರಾ.. ಎರಡು ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ - ಶ್ರೀ ಚಾಮರಾಜೇಶ್ವರ ದೇವಸ್ಥಾನ

ಅಕ್ಟೋಬರ್ 7 ರಿಂದ 10 ರವರೆಗೆ ನಡೆಯಲಿರುವ ಚಾಮರಾಜನಗರ ಜಿಲ್ಲಾ ದಸರಾ ಮಹೋತ್ಸವ ಹಾಗೂ ಜಿಲ್ಲೆಗೆ ರಾಷ್ಟ್ರಪತಿ ರಾಮ್​ ನಾಥ್​ ಕೋವಿಂದ್​ ಭೇಟಿ ಹಿನ್ನೆಲೆ ನಗರದ ಪ್ರಮುಖ‌ ರಸ್ತೆಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ.

ಚಾಮರಾಜನಗರ ದಸರಾ
ಚಾಮರಾಜನಗರ ದಸರಾ
author img

By

Published : Oct 5, 2021, 1:08 PM IST

Updated : Oct 5, 2021, 1:50 PM IST

ಚಾಮರಾಜನಗರ: ಜಿಲ್ಲಾಡಳಿತ ಹಾಗೂ ಮೈಸೂರು ದಸರಾ ಮಹೋತ್ಸವ ಸಮಿತಿ ಸಹಯೋಗದೊಂದಿಗೆ ಅಕ್ಟೋಬರ್ 7 ರಿಂದ 10 ರವರೆಗೆ ಚಾಮರಾಜನಗರ ಜಿಲ್ಲಾ ದಸರಾ ನಡೆಯಲಿದ್ದು, ಎರಡು ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ಅಕ್ಟೋಬರ್ 7ರ ಬೆಳಗ್ಗೆ 10.15ಕ್ಕೆ ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯದೊಂದಿಗೆ ಚಾಮರಾಜನಗರ ದಸರಾ ಮಹೋತ್ಸವಕ್ಕೆ ಸಚಿವ ಎಸ್. ಟಿ.ಸೋಮಶೇಖರ್ ಚಾಲನೆ ನೀಡಲಿದ್ದಾರೆ. ಸಂಜೆ 5.30ಕ್ಕೆ ಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಆವರಣದಲ್ಲಿ ದಸರಾ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.

ಚಾಮರಾಜನಗರ ದಸರಾ ಮಹೋತ್ಸವ
ಚಾಮರಾಜನಗರ ದಸರಾ ಮಹೋತ್ಸವ

ಚಾಮರಾಜೇಶ್ವರ ದೇವಾಲಯದ ಆವರಣದ ಬಳಿ ನಿರ್ಮಿಸಲಾಗಿರುವ ಮುಖ್ಯ ವೇದಿಕೆಯಲ್ಲಿ ಸಂಜೆ 4 ರಿಂದ ರಾತ್ರಿ 9.45 ರವರೆಗೆ ಹಾಗೂ ಜಿಲ್ಲಾಡಳಿತ ಭನವದಲ್ಲಿರುವ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ಮಧ್ಯಾಹ್ನ 2 ರಿಂದ ರಾತ್ರಿ 9.50 ಗಂಟೆಯವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಇದನ್ನೂ ಓದಿ: ರಾಷ್ಟ್ರಪತಿ ಭೇಟಿ ಹಿನ್ನೆಲೆ ಹಳೆ ರಸ್ತೆಗೆ ಹೊಸ ಬಣ್ಣ..PWD ವಿರುದ್ಧ ಸಾರ್ವಜನಿಕರ ಆಕ್ರೋಶ

ಸಿ.ಎಂ. ನರಸಿಂಹಮೂರ್ತಿ ತಂಡದಿಂದ ಜಾನಪದ ಗಾಯನ, ಮಜಾ ಭಾರತ ಕಲಾವಿದರಿಂದ ಹಾಸ್ಯ ಸಂಜೆ, ಉಮ್ಮತ್ತೂರು ಬಸವರಾಜು ಅವರಿಂದ ಮಿಮಿಕ್ರಿ, ಆದಿವಾಸಿ ಕಲಾವಿದರಿಂದ ನೃತ್ಯ ಸೇರಿದಂತೆ ಈ ಬಾರಿ ಸ್ಥಳೀಯ ಕಲಾವಿದರಿಗಷ್ಟೇ ಪ್ರಾತಿನಿಧ್ಯ ಕೊಟ್ಟು ಆಕರ್ಷಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಚಾಮರಾಜನಗರದ ಪ್ರಮುಖ ರಸ್ತೆಗಳ ಸ್ವಚ್ಛತೆ, ವಿಭಜಕಗಳಿಗೆ ಬಣ್ಣ

ರಸ್ತೆಗಳ ಅಂದಕ್ಕೆ ಡಬಲ್ ಧಮಾಕ

ಇದೇ 7 ರಂದು ಚಾಮರಾಜನಗರ ಮೆಡಿಕಲ್ ಕಾಲೇಜು ಆಸ್ಪತ್ರೆ ಉದ್ಘಾಟನೆಗೆ ರಾಷ್ಟ್ರಪತಿ ಮತ್ತು ಸಿಎಂ ಆಗಮನದ ಹಿನ್ನೆಲೆಯಲ್ಲಿ ಚಾಮರಾಜನಗರ-ಸಂತೇಮರಹಳ್ಳಿ ರಸ್ತೆ, ಮೈಸೂರು ರಸ್ತೆ, ಗುಂಡ್ಲುಪೇಟೆ ವೃತ್ತದಿಂದ ಎಡಪುರ, ಐಬಿ ರಸ್ತೆವರೆಗಿನ ರಸ್ತೆ ವಿಭಜಕಗಳಿಗೆ ಬಣ್ಣ ಬಳಿದು, ಸ್ವಚ್ಛಗೊಳಿಸಲಾಗುತ್ತಿದೆ‌. ಜಿಲ್ಲಾ ದಸರಾ ಆರಂಭವಾಗುವ ಕಾರಣ ಚಾಮರಾಜನಗರದ ಪ್ರಮುಖ‌ ರಸ್ತೆ, ಜಿಲ್ಲಾಡಳಿತ ಭವನ, ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗಳಿಗೆ ವಿದ್ಯುತ್ ದೀಪಗಳನ್ನು ಅಳವಡಿಸಲಾಗುತ್ತಿದ್ದು, ಜಿಲ್ಲಾ ದಸರಾ ಹಾಗೂ ರಾಷ್ಟ್ರಪತಿ ಪ್ರವಾಸ ಎರಡೂ ಕಾರ್ಯಕ್ರಮಗಳಿಗಾಗಿ ರಸ್ತೆಗಳ ಅಂದ ಹೆಚ್ಚಿಸಲಾಗುತ್ತಿದೆ.

ಇದನ್ನೂ ಓದಿ: Mysuru Dasara: ನಾಡಹಬ್ಬ ದಸರಾಗೆ ಸರ್ಕಾರದ ಮಾರ್ಗಸೂಚಿ ಹೀಗಿದೆ..

ನಗರಸಭೆ ವಿರುದ್ಧ ಆಕ್ರೋಶ

ರಸ್ತೆಗಳ ಸ್ವಚ್ಛತೆಗಿಳಿದಿರುವ ನಗರಸಭೆ ಸಿಬ್ಬಂದಿ ವಿರುದ್ಧ ಸಂತೇಮರಹಳ್ಳಿ ವೃತ್ತದಲ್ಲಿ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಒಂದು ದಿನವೂ ಮನೆ ಮುಂದಿನ ಕಸ ತೆಗೆಸದ ನಗರಸಭೆ ಅಧಿಕಾರಿಗಳು ಈಗ ತರಾತುರಿಯಾಗಿ ಸ್ವಚ್ಛತೆಗಿಳಿದಿದ್ದಾರೆ. ಗಣ್ಯ ವ್ಯಕ್ತಿಗಳು ಬಂದರೇ ಮಾತ್ರವೇ ನಗರ ಸ್ವಚ್ಛವಾಗಿರಬೇಕೇ? ಇಲ್ಲಿನ ಜನರು ಹೇಗಾದರೂ ಬದುಕಬಹುದೇ? ಎಂದು ಕಿಡಿಕಾರಿ ಅಸಮಾಧಾನ ಹೊರಹಾಕಿದ್ದಾರೆ.

Last Updated : Oct 5, 2021, 1:50 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.