ಚಾಮರಾಜನಗರ : ಕಡಿಮೆ ಬಡ್ಡಿದರದಲ್ಲಿ ಸಾಲ ಪಡೆಯಬಹುದೆಂದು ವ್ಯಕ್ತಿಯೊಬ್ಬರು ಸೈಬರ್ ಖದೀಮರ ಜಾಲಕ್ಕೆ ಬಿದ್ದ ಘಟನೆ ಚಾಮರಾಜನಗರ ತಾಲೂಕಿನ ಕುಮಚಹಳ್ಳಿ ಗ್ರಾಮದಲ್ಲಿ ನಡೆದಿದೆ. ನಾಗಮಲ್ಲಪ್ಪ ಎಂಬುವರು ವಂಚನೆಗೊಳಗಾಗಿದ್ದವರು.
50 ಪೈಸೆ ಬಡ್ಡಿದರದಲ್ಲಿ ಸಾಲ ಕೊಡುವುದಾಗಿ ಲೈಟ್ ಸ್ಟೀಮ್ ಎಂಬ ಕಂಪನಿ ಹೆಸರಿನಲ್ಲಿ ವ್ಯಕ್ತಿವೋರ್ವ ವಾಟ್ಸ್‌ಆ್ಯಪ್ ಮೂಲಕ ನಾಗಮಲ್ಲಪ್ಪ ಅವರನ್ನು ಪರಿಚಯ ಮಾಡಿಕೊಂಡಿದ್ದಾನೆ. ಬಳಿಕ ಆತ ತನ್ನ ಬಣ್ಣ ಬಣ್ಣದ ಮಾತಿನಿಂದ 1.75 ಲಕ್ಷ ರೂ. ಕಮಿಷನ್ ಕಟ್ಟಿದರೆ, ಸಾಲ ಸಿಗುವುದಾಗಿ ನಂಬಿಸಿ ತನ್ನ ಖಾತೆಗೆ ಲಕ್ಷಾಂತರ ರೂ. ಹಣ ಹಾಕಿಸಿಕೊಂಡಿದ್ದಾನೆ. ಹಣ ಹಾಕಿದ ಬಳಿಕ ತಾನು ಮೋಸ ಹೋಗಿರುವುದು ನಾಗಮಲ್ಲಪ್ಪ ಅವರಿಗೆ ಗೊತ್ತಾಗಿದೆ.
ಇದನ್ನೂ ಓದಿ: ನಾವು ಕರ್ನಾಟಕದ ಕನ್ನಡಿಗರಲ್ಲ, ಗೋವಾ ಕನ್ನಡಿಗರು ; ಗೋವಾ ಕನ್ನಡ ಮಹಾಸಂಘದ ಗೌರವಾಧ್ಯಕ್ಷ ಸಿದ್ದಣ್ಣ ಮೇಟಿ ಹೇಳಿಕೆ
ತಕ್ಷಣ ಎಚ್ಚೆತ್ತು ನಾಗಮಲ್ಲಪ್ಪ ಚಾಮರಾಜನಗರ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ಪಡೆದ ಸಿಇಎನ್ ಪಿಐ ಮಹಾದೇವಶೆಟ್ಟಿ ನೇತೃತ್ವದ ತಂಡ ವಂಚಕನ ಅಕೌಂಟ್ ಅನ್ನು ಫ್ರೀಜ್ ಮಾಡಿಸಿದ್ದಾರೆ. ಬಳಿಕ ಕೋರ್ಟ್ನಿಂದ ಆದೇಶ ತಂದು ಪೊಲೀಸರು ಸಂತ್ರಸ್ತ ಗ್ರಾಹಕನಿಗೆ ಹಣ ವಾಪಸ್ ಕೊಡಿಸಿದ್ದಾರೆ.