ಚಾಮರಾಜನಗರ: ಬೆಂಗಳೂರಿನಲ್ಲಿ ಟೆಕ್ಕಿಯೊಬ್ಬರಿಗೆ ಕೊರೊನಾ ಸೋಂಕು ತಗಲಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಜಿಲ್ಲೆಯ ಡಿಎಸ್ಒ ಡಾ.ನಾಗರಾಜ್ ಜಿಲ್ಲೆಯ ಜನರಿಗೆ ಆತಂಕ ಬೇಡ ಎಂದಿದ್ದಾರೆ.
ಕೇರಳದಲ್ಲಿ ಮೂರು ಪ್ರಕರಣಗಳು ಪತ್ತೆಯಾದ ಬಳಿಕ ಯಾವುದೇ ಪ್ರಕರಣ ವರದಿಯಾಗಲ್ಲ. ಹೀಗಾಗಿ ಕಳೆದ ಮೂರು ದಿನಗಳ ಹಿಂದೆಯಷ್ಟೇ ಬಂಡೀಪುರ ಗಡಿಯಲ್ಲಿ ತಪಾಸಣೆ ಮಾಡುವುದನ್ನು ನಿಲ್ಲಿಸಲಾಗಿದೆ. ಕೇರಳದಲ್ಲಿ ಬಾಧಿತರಾಗಿದ್ದ ಮೂವರಿಂದ ಇನ್ನಿತರರಿಗೆ ವೈರಸ್ ಹರಡಿಲ್ಲ ಎಂದರು.
ಒಂದು ವೇಳೆ ಕೇರಳದಲ್ಲಿ ಕೊರೊನಾ ಸಂಶಯಾಸ್ಪದ ಪ್ರಕರಣ ವರದಿಯಾದರೆ ಜಿಲ್ಲೆಯಲ್ಲಿ ಹೆಲ್ತ್ ಅಲರ್ಟ್ ಘೋಷಿಸಲಾಗುತ್ತದೆ. ಜಿಲ್ಲಾಸ್ಪತ್ರೆ, ಕೊಳ್ಳೇಗಾಲ ಹಾಗೂ ಗುಂಡ್ಲುಪೇಟೆ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್ಗಳನ್ನು ತೆರೆದಿದ್ದೇವೆ ಎಂದು ಮಾಹಿತಿ ನೀಡಿದರು.
ಆದಷ್ಟು ಕೆಮ್ಮುವುದು, ಸೀನುವಾಗ ಕರವಸ್ತ್ರ ಬಳಸುವುದು, ಆಗಾಗ್ಗೆ ಕೈ ಸ್ವಚ್ಛಗೊಳಿಸಿಕೊಳ್ಳುವುದು ಸೇರಿದಂತೆ ಪ್ರಾಥಮಿಕ ಎಚ್ಚರಿಕೆಯಲ್ಲಿ ಜನರಿರಬೇಕು ಎಂದು ಅವರು ಸಲಹೆ ನೀಡಿದ್ದಾರೆ.