ETV Bharat / state

ಜನಪ್ರತಿನಿಧಿಗಳೇ ಇಲ್ನೋಡಿ... ಚಾಮರಾಜನಗರ ರಸ್ತೆಗಳಲ್ಲಿ ಕಾಯುತ್ತಿದ್ದಾನೆ ಯಮರಾಯ! - kannada news

ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ರಸ್ತೆಗಳು ಸಂಪೂರ್ಣ ಗುಂಡಿಮಯವಾಗಿದ್ದು, ವಾಹನ ಸವಾರರು ಸಂಚಾರಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಮತಕ್ಕಾಗಿ ನಾವು ಬೇಕು. ಆದರೆ, ಅಭಿವೃದ್ಧಿಗೆ ಮಾತ್ರ ಬರುವುದಿಲ್ಲ ಎಂದು ಜನಪ್ರತಿನಿಧಿಗಳ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕುತ್ತಿದ್ದಾರೆ. .

ಮ್ಯಾನ್​ಹೋಲ್
author img

By

Published : Jun 10, 2019, 11:19 AM IST

ಚಾಮರಾಜನಗರ: ಚಾಮರಾಜನಗರ ಜಿಲ್ಲಾ ಕೇಂದ್ರದ ಮುಖ್ಯರಸ್ತೆಗಳು ಹಾಗೂ ಜಿಲ್ಲೆಯಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದು, ಸಂಚಾರ ದುಸ್ತರವಾಗಿದೆ. ಅಲ್ಲದೆ ಹೆದ್ದಾರಿಯಲ್ಲೇ ಮ್ಯಾನ್​ಹೋಲ್​ ಬಾಯ್ತೆರೆದು ಅಪಾಯಕ್ಕೆ ಆಹ್ವಾನಿಸುತ್ತಿವೆ. ನ್ಯಾಯಾಲಯ ಮತ್ತು ಜೋಡಿ ರಸ್ತೆಯ ಇಕ್ಕೆಲಗಳಲ್ಲಿ ಮರಳಿನ ರಾಶಿ ತುಂಬಿದೆ.

ಕಿತ್ತು ಹೋದ ರಸ್ತೆ

ಸುಗಮ ಸಂಚಾರಕ್ಕೆ ಸಂಪರ್ಕ ಕಲ್ಪಿಸಬೇಕಾದ ರಸ್ತೆಗಳ ದುಸ್ಥಿತಿಯಿಂದ ಅಪಘಾತಗಳ ಸಂಖ್ಯೆ ಅಧಿಕವಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಮಧ್ಯದಲ್ಲೇ ಮ್ಯಾನ್​ಹೋಲ್ ತೆರೆದುಕೊಂಡಿದೆ. ಅಲ್ಲದೆ, ನ್ಯಾಯಾಲಯ ರಸ್ತೆ, ಕರಿನಂಜನಪುರಕ್ಕೆ ತೆರಳುವ ರಸ್ತೆ, ಅಂಗಡಿ ಬೀದಿ ರಸ್ತೆಗಳಲ್ಲಿಯೂ ಅದೇ ಸಮಸ್ಯೆ ಎದ್ದು ಕಾಣುತ್ತಿದೆ. ಇದರಿಂದ ವಾಹನ ಸವಾರರು ಸಂಚರಿಸಲು ಹೆದರುವಂತಾಗಿದೆ.

ರಸ್ತೆಗಳ ರಿಪ್ಲೆಕ್ಟರ್​ಗಳ ಮೇಲೆ ಕಾರುಗಳು ಚಲಿಸಿದರೇ ಕಿತ್ತು ಬರುವಷ್ಟರ ಮಟ್ಟಿಗೆ ಗುಣಮಟ್ಟ ಕಾಯ್ದುಕೊಂಡಿದ್ದಾರೆ. ಇದು ಗುತ್ತಿಗೆ ಪಡೆದ ಗುತ್ತಿಗೆದಾರರ ಕೆಲಸವನ್ನು ಎತ್ತಿ ತೋರಿಸುತ್ತದೆ. ಅಷ್ಟೇ ಅಲ್ಲದೆ, ರಸ್ತೆ ಬದಿಯಲ್ಲಿ ಮರಳು ಹರಡಿರುವ ಕಾರಣ ಹೆಚ್ಚಾಗಿ ಬೈಕ್​ಗಳು ಸ್ಕಿಡ್​ ಆಗುತ್ತಿವೆ. ಆದ್ದರಿಂದ ದ್ವಿಚಕ್ರ ವಾಹನ ಸವಾರರು ಜೀವ ಪಣಕಿಟ್ಟು ವಾಹನ ಚಲಾಯಿಸುವಂತಾಗಿದೆ.

ಈ ಕುರಿತು ಸಾಮಾಜಿಕ ಕಾರ್ಯಕರ್ತ ಸಿ.ಎಂ.ಕೃಷ್ಣಮೂರ್ತಿ ಮಾತನಾಡಿ, ಕಳಪೆ ಕಾಮಗಾರಿಯೇ ಇದಕ್ಕೆಲ್ಲಾ ಕಾರಣ. ಇದರ ಬಗ್ಗೆ ಯಾವೊಬ್ಬ ಅಧಿಕಾರಿಗಳು ಗಮನ ಕೊಡುತ್ತಿಲ್ಲ. ರಸ್ತೆಗಳೆಲ್ಲ ಹದಗೆಟ್ಟು ಹಳ್ಳಕೊಳ್ಳಗಳಾಗಿವೆ. ಆದರೂ ಜನಪ್ರತಿನಿಧಿಗಳು, ಜಿಲ್ಲಾ ವಸ್ತುವರಿ, ಸಂಸದರು ಕೂಡಲೇ ಸಮಸ್ಯೆಗೆ ಪರಿಹಾರ ಕೊಡಬೇಕು. ಈ ಕಳಪೆ ಕಾಮಗಾರಿಗೆ ಕಾರಣರಾಗಿರುವ ಗುತ್ತಿಗೆದಾರರ ಮೇಲೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷೆಗೊಳಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಕರಿನಂಜನಪುರದ ರಸ್ತೆಯಲ್ಲಿನ ಮ್ಯಾನ್​ಹೋಲ್ ಬಾಯ್ತೆರೆದು 15 ದಿನಗಳಾಗಿದೆ. ರಂಜಾನ್ ದಿನ ಬೈಕ್ ಒಂದು ಸಿಕ್ಕಿಕೊಂಡಿತ್ತು. ಅದನ್ನು ಎಳೆಯಲು ಹೋಗಿ ಬಿದ್ದಿದ್ದೆ. ಬಳಿಕ, ಒಂದು ಕಡ್ಡಿಗೆ ಬಟ್ಟೆ ಸಿಕ್ಕಿಸಿ ಗುಂಡಿಗೆ ನೆಟ್ಟಿದ್ದೇನೆ ಎಂದು ವೃದ್ಧರಾದ ಚೆಟ್ಟಿಯಾರ್ ದೂರುತ್ತಾರೆ. ಮಳೆಗಾಲ ಈಗಾಗಲೇ ಆರಂಭವಾಗಿದ್ದು, ಇನ್ನೂ ಹೆಚ್ಚಿನ ಅನಾಹುತಗಳು ಸಂಭವಿಸುವ ಸಾಧ್ಯತೆ ಇದೆ. ಈಗಲಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಮ್ಯಾನ್​ಹೋಲ್​ಗಳಿಗೆ ಕಾಯಕಲ್ಪ ನೀಡಬೇಕು. ಕಿತ್ತುಹೋದ ರಸ್ತೆಗಳಿಗೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತಾರೆ.

Intro:ಅಧಿಕಾರಿಗಳೇ ಗಮನಿಸಿ: ಚಾಮರಾಜನಗರ ರಸ್ತೆಗಳಲ್ಲಿ ಕಾಯುತ್ತಿದ್ದಾನೆ ಯಮರಾಯ!

ಚಾಮರಾಜನಗರ: ಕಾರು ಚಲಿಸಿದರೇ ಕಲ್ಲೆಸೆದಂತೆ ಹಾರುವ ರಸ್ತೆ ರಿಫ್ಲೆಕ್ಟರ್ ಗಳು, ರಾ.ಹೆದ್ದಾರಿಯಲ್ಲೇ ಬಾಯ್ದೆರೆದ ಮ್ಯಾನ್ ಹೋಲ್, ಕೋರ್ಟ್ ಮತ್ತು ಜೋಡಿ ರಸ್ತೆಯ ಇಕ್ಕೆಲದಲ್ಲಿ ಮರಳ ರಾಶಿ...

Body:ಹೌದು, ಇದು ಯಾವುದೋ ಹಳ್ಳಿಯ ಇಲ್ಲವೇ ಪಟ್ಟಣದ ಕಥೆಯಲ್ಲ. ಜಿಲ್ಲಾಕೇಂದ್ರದ ರಸ್ತೆಗಳ ದುಸ್ಥಿತಿ.‌ ರಾ.ಹೆದ್ದಾರಿ ನಡುವಲ್ಲೇ ಮ್ಯಾನ್ ಹೋಲ್ ತೆರೆದಿದ್ದರೇ, ನ್ಯಾಯಾಲಯ ರಸ್ರೆ, ಕರಿನಂಜನಪುರಕ್ಕೆ ತೆರಳುವ ರಸ್ತೆ, ಅಂಗಡಿ ಬೀದಿ ರಸ್ತೆಗಳಲ್ಲಿನ ಮ್ಯಾನ್ ಹೋಲ್ ಗಳು ಬಾಯ್ದೆರದು ಅಪಾಯಕ್ಕೆ ಆಹ್ವಾನಿಸುತ್ತಿವೆ.

ನ್ಯಾಯಾಲಯದ ಸಿಸಿ ರಸ್ತೆಯಲ್ಲಿನ ರಿಪ್ಲೆಕ್ಟರ್ ಗಳ ಮೇಲೆ ಕಾರುಗಳು ಚಲಿಸಿದರೇ ಕಿತ್ತು ಬರುವಷ್ಟರ ಮಟ್ಟಿಗೆ ಸಂಬಂಧಿಸಿದ ಗುತ್ತಿಗೆದಾರರು ಗುಣಮಟ್ಟ ಕಾಯ್ದುಕೊಂಡಿದ್ದಾರೆ. ಇನ್ನು, ರಸ್ತೆ ಬದಿಯಲ್ಲಿ ಮರಳು ಹರಡಿದ್ದು ಭಾರೀ ವಾಹನಗಳು ಬಂದಾಗ ಬೈಕ್ ಲೇನ್ ಮೇಲೆ ದ್ವಿಚಕ್ರ ವಾಹನ ಸವಾರರು ಜೀವ ಪಣಕಿಟ್ಟು ವಾಹನ ಚಲಾಯಿಸಬೇಕಿದೆ.

ಈ ಕುರಿತು ಸಾಮಾಜಿಕ ಕಾರ್ಯಕರ್ಯ ಸಿ.ಎಂ.ಕೃಷ್ಣಮೂರ್ತಿ ಮಾತನಾಡಿ, ಕಾಮಗಾರಿ ಕಳಪೆಯಿಂದ ಕೂಡಿದ್ದು ಈ ಕುರಿತು
ಸಚಿವ ಪುಟ್ಟರಂಗಶೆಟ್ಟಿ, ಅಧಿಕಾರಿಗಳೂ ಗಮನ ನೀಡುತ್ತಿಲ್ಲ. ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷೆಗೊಳಪಡಿಸಬೇಕು ಎಂದು ಆಗ್ರಹಿಸುತ್ತಾರೆ.

ಕರಿನಂಜನಪುರದ ರಸ್ತೆಯಲ್ಲಿನ ಮ್ಯಾನ್ ಹೋಲ್ ಬಾಯ್ದೆರೆದು ೧೫ ದಿನಗಳಾಗುತ್ತ ಬಂದಿದೆ. ನಾನೇ ರಂಜಾನ್ ದಿನ ಬೈಕ್ ಒಂದು ಸಿಕ್ಕಿಕೊಂಡ ವೇಳೆ ಎಳೆಯಲು ಹೋಗಿ ಬಿದ್ದಿದ್ದೆ. ಬಳಿಕ, ಒಂದು ಕಡ್ಡಿಗೆ ಬಟ್ಟೆ ಸಿಕ್ಕಿಸಿ ಗುಂಡಿಗೆ ನೆಟ್ಟಿದ್ದೇನೆ ಎನ್ನುತ್ತಾರೆ ವೃದ್ಧರಾದ ಚೆಟ್ಟಿಯಾರ್.

Conclusion:ಮಳೆಯೂ ಕೂಡ ಆರಂಭವಾಗಿದ್ದು ಹೆಚ್ಚಿನ ಅನಾಹುತವಾಗುವ ಮುನ್ಮ
ಇನ್ನಾದರೂ
ಸಂಬಂಧಪಟ್ಟ ಅಧಿಕಾರಿಗಳು ಮ್ಯಾನ್ ಹೋಲ್ ಗಳು, ರಸ್ತೆ ರಿಫ್ಲೆಕ್ಟರ್ ಗಳನ್ನು ಅಳವಡಿಸಿ ರಸ್ತೆ ಇಕ್ಕೆಲದಲ್ಲಿರುವ ಮರಳು ತೆಗೆಸಲಿ ಎಂದು ಸಾರ್ವಜನಿಕರು ಒತ್ತಾಯಿಸುತ್ತಾರೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.