ETV Bharat / state

ಟ್ರಯಲ್ ನೋಡುತ್ತೇನೆಂದು ಬೈಕ್ ಕದ್ದ ಭೂಪ ; ಕರೆದರೆಂದು ಹೊರಬಂದು ಸರ ಕಳೆದುಕೊಂಡ ಮಹಿಳೆ!! - ಬೈಕ್​ ಕಳ್ಳತನ

ಚಾಮರಾಜನಗರದಲ್ಲಿ ಎರಡು ಅಪರಾಧ ಪ್ರಕರಣ ದಾಖಲಾಗಿದ್ದು, ಪರಿಚಯಸ್ಥರ ಸೋಗಿನಲ್ಲಿ ಬಂದು ಮಹಿಳೆಯ ಕುತ್ತಿಗೆಯಿಂದ ಸರ ಕಳ್ಳತನ ಮಾಡಲಾಗಿದೆ. ಬೈಕ್​ ಟ್ರಯಲ್ ನೋಡುತ್ತೇನೆ ಎಂದು ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸಲಾಗಿದೆ..

Bike stole to see the trail
ಟ್ರಯಲ್ ನೋಡುತ್ತೆನೆಂದು ಬೈಕ್ ಕದ್ದ ಭೂಪ
author img

By

Published : May 23, 2022, 7:28 PM IST

ಚಾಮರಾಜನಗರ : ಮಹಿಳೆಯೊಬ್ಬರ ಸರ ಕಸಿದು ವ್ಯಕ್ತಿ ಬೈಕಿನಲ್ಲಿ ಪರಾರಿಯಾಗಿರುವ ಘಟನೆ ಕೊಳ್ಳೇಗಾಲದ ಬಸವೇಶ್ವರ ನಗರ ಬಡಾವಣೆಯಲ್ಲಿ ನಡೆದಿದೆ. ಬಡಾವಣೆ ನಿವಾಸಿ ಮಹಾದೇವಸ್ವಾಮಿ ಎಂಬುವರ ಪತ್ನಿ ಗಾಯತ್ರಿ ಸರ ಕಳೆದುಕೊಂಡವರು. ಮನೆ ಹೊರಗಡೆ ಯಾರೋ ಕರೆದಂತಾದ್ದರಿಂದ ಆಚೆ ಬಂದ ವೇಳೆ 30 ವರ್ಷದ ಆಸುಪಾಸಿನ ವ್ಯಕ್ತಿ ಸರ ಕಸಿದು ಪರಾರಿಯಾಗಿದ್ದಾನೆ. 70 ಗ್ರಾಂ ತೂಕದ ಚಿನ್ನದ ಸರ ಕಳೆದುಕೊಂಡಿದ್ದು, ಕೊಳ್ಳೇಗಾಲ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟ್ರಯಲ್ ನೋಡುತ್ತೇನೆಂದು ಬೈಕ್ ಕದ್ದ: ಬೈಕ್ ಖರೀದಿಗೆ ಬಂದು ಕದ್ದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಕೊಳ್ಳೇಗಾಲ ಪಟ್ಟಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೈಸೂರು ಮೂಲದ ಕಾರ್ತಿಕ್ ಬಂಧಿತ ಆರೋಪಿ. ‌ಕೊಳ್ಳೇಗಾಲದ ನಿವಾಸಿ ಅನಿಲ್ ಎಂಬುವರು ಬೈಕ್ ಕಳೆದುಕೊಂಡಿದ್ದ ವ್ಯಕ್ತಿ.

ಮಲೆಮಹದೇಶ್ವರ ಬೆಟ್ಟದಲ್ಲಿ ಅನಿಲ್‌ನ​ನ್ನು ಪರಿಚಯಿಸಿಕೊಂಡಿದ್ದ ಕಾರ್ತಿಕ್ ಬೈಕ್ ಮಾರಾಟ ಮಾಡುವುದಿದ್ದರೇ ತನಗೇ ಕೊಡಿ ಎಂದು ಹೇಳಿದ್ದನಂತೆ. ಅದರಂತೆ, ಕಳೆದ 21ರಂದು ಬೈಕ್ ಕೊಡುವುದಾಗಿ ಅನಿಲ್ ಹೇಳಿದ್ದರಿಂದ ಮೈಸೂರಿನಿಂದ ಬಂದ ಕಾರ್ತಿಕ್ ಬೈಕ್ ಟ್ರಯಲ್ ನೋಡುವುದಾಗಿ ಹೇಳಿ ಬೈಕ್‌ ಕಳವು ಮಾಡಿಕೊಂಡು ಹೋಗಿದ್ದ ಎಂದು ತಿಳಿದು ಬಂದಿದೆ. ಪಟ್ಟಣ ಠಾಣೆಗೆ ಅನಿಲ್ ದೂರು ಕೊಟ್ಟಿದ್ದರಿಂದ ಪೊಲೀಸರು ಇಂದು ಬೈಕ್ ಸಮೇತ ಆರೋಪಿಯನ್ನು ಹಿಡಿದಿದ್ದು, ಕಾರ್ತೀಕ್​ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಇದನ್ನೂ ಓದಿ: ವ್ಯವಹಾರದಲ್ಲಿ ನಷ್ಟ.. ಕಳ್ಳತನದ ಹಾದಿ ಹಿಡಿದಿದ್ದ ಮೂವರು ಯುವಕರು ಅರೆಸ್ಟ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.