ETV Bharat / state

ಚಾಮರಾಜನಗರ: ಆತ್ಮಹತ್ಯೆಗೆ ಯತ್ನಿಸಿದ ಕಾನ್ಸ್‌ಟೇಬಲ್ - ಚಾಮರಾಜನಗರ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್

ಆತ್ಮಹತ್ಯೆಗೆ ಯತ್ನಿಸಿದ ಚಾಮರಾಜನಗರ ಕಾನ್ಸ್‌ಟೇಬಲ್ - ಪಕ್ಕೆಲುಬು, ಕೈ-ಕಾಲಿಗೆ ಸುಟ್ಟ ಗಾಯ - ಚಾಮರಾಜನಗರ ಜಿಲ್ಲಾಸ್ಪತ್ರೆಗೆ ದಾಖಲು.

Chamarajanagar
ಚಾಮರಾಜನಗರ
author img

By

Published : Jan 21, 2023, 1:15 PM IST

ಚಾಮರಾಜನಗರ: ಪೊಲೀಸ್ ಕಾನ್ಸ್‌ಟೇಬಲ್ ಒಬ್ಬರು ಆತ್ಮಹತ್ಯೆಗೆ ಯತ್ನ ನಡೆಸಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಚಾಮರಾಜನಗರ ಗ್ರಾಮಾಂತರ ಠಾಣೆ ಪೊಲೀಸ್ ಕಾನ್ಸ್‌ಟೇಬಲ್ ಹೆಚ್.ಆರ್ ಮಹೇಶ್ ಆತ್ಮಹತ್ಯೆಗೆ ಯತ್ನಿಸಿದವರು. ಚಾಮರಾಜನಗರ ಗ್ರಾಮಾಂತರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹೇಶ್ ಅವರನ್ನು ಹನೂರು ಠಾಣೆಗೆ ವರ್ಗಾವಣೆ ಮಾಡಿ ಚಾಮರಾಜನಗರ ಪೊಲೀಸ್ ವರಿಷ್ಠಾಧಿಕಾರಿಗಳು ವರ್ಗಾವಣೆ ಮಾಡಿದ್ದರು. ಜತೆಗೆ, ಇತರ ಠಾಣೆಗಳ 7 ಮಂದಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದರು.

ವರ್ಗಾವಣೆಯಿಂದ ಮನನೊಂದು ಈ ಯತ್ನ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಪಕ್ಕೆಲುಬು, ಕೈ- ಕಾಲಿಗೆ ಸುಟ್ಟ ಗಾಯಗಳಾಗಿದ್ದು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಎಸ್​ಪಿ ಶಿವಕುಮಾರ್ ಪ್ರತಿಕ್ರಿಯಿಸಿ, 'ವಿಚಾರ ಗಮನಕ್ಕೆ ಬಂದಿದ್ದು, ಯಾವ ಕಾರಣಕ್ಕೆ ಆತ್ಮಹತ್ಯೆ ಯತ್ನಿಸಿದರು ಎಂದು ತಿಳಿದು ಬಂದಿಲ್ಲ. ಕೆಲವರಿಗೆ ಎಚ್ಚರಿಕೆ ಕೊಡುವ ಉದ್ದೇಶದಿಂದ ವರ್ಗಾವಣೆ ಮಾಡಲಾಗಿತ್ತು. ಪರಿಶೀಲನೆ ನಡೆಸಿ ಬಳಿಕ ಹೆಚ್ಚಿನ ವಿವರ ಹಂಚಿಕೊಳ್ಳುತ್ತೇನೆ' ಎಂದು ತಿಳಿಸಿದ್ದಾರೆ.

ಮಹಿಳೆ ಸರ ಕಸಿದು ಪರಾರಿ: ಮತ್ತೊಂದೆಡೆ ಮಹಿಳೆಯೊಬ್ಬರ ಸರ ಕಸಿದು ಪರಾರಿಯಾಗಿರುವ ಘಟನೆ ಕೊಳ್ಳೇಗಾಲದ ಸಾಯಿಮಂದಿರ ರಸ್ತೆಯಲ್ಲಿ ನಡೆದಿದೆ. ನಗರದ ಸಾಯಿಮಂದಿರ ರಸ್ತೆಯ ನಿವಾಸಿ ನಾಗರತ್ನ ಸರ ಕಳೆದುಕೊಂಡವರು. ದಿನಸಿ ಅಂಗಡಿಗೆ ತೆರಳಿ ಪದಾರ್ಥಗಳನ್ನು ತೆಗೆದುಕೊಂಡು ಹೋಗುತ್ತಿದ್ದಾಗ ಬೈಕ್​​ನಲ್ಲಿ ಬಂದ ಇಬ್ಬರು ಖದೀಮರು ಸರ ಕಸಿದು ಪರಾರಿಯಾಗಿದ್ದಾರೆ. ಸರದ ತೂಕ 57 ಗ್ರಾಂ ಎಂದು ತಿಳಿದು ಬಂದಿದೆ. ಕೊಳ್ಳೇಗಾಲ ಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ಅನುಮಾನಸ್ಪದವಾಗಿ ನಿಂತಿದ್ದ ಆಟೋ ವಶಕ್ಕೆ: ಪ್ಯಾಸೆಂಜರ್ ಆಟೋವೊಂದು ಕಳೆದ ಮೂರು ದಿನಗಳಿಂದ ಅನುಮಾನಸ್ಪದವಾಗಿ ನಿಂತಿದ್ದ ಘಟನೆ ಚಾಮರಾಜನಗರ ತಾಲೂಕಿನ ಚಿಕ್ಕಹೊಳೆ ಬಳಿ ನಡೆದಿದೆ. ಹೊಯ್ಸಳ ಪೊಲೀಸರ ಗಮನಕ್ಕೆ ಈ ವಿಚಾರ ಇಂದು ಗೊತ್ತಾಗಿ ಆಟೋವನ್ನು ಚಾಮರಾಜನಗರ ಪೂರ್ವ ಠಾಣೆ ವಶಕ್ಕೆ ಕೊಟ್ಟಿದ್ದಾರೆ. ಆಟೋ ಮೈಸೂರಿನಲ್ಲಿ ನೋಂದಣಿಯಾಗಿದೆ. ಆಟೋ ಗಾಜು ಹಾಗೂ ಸೀಟ್ ಗಳು ಹರಿದು ಹೋಗಿದ್ದು ಕಳೆದ 3 ದಿನಗಳಿಂದಲೂ ನಿಂತಿದೆ ಎಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಚಾಮರಾಜನಗರ ಪೂರ್ವ ಠಾಣೆ ಪೊಲೀಸರು ಈ ಸಂಬಂಧ ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ನಂಜನಗೂಡಲ್ಲಿ ಡೆತ್ ನೋಟ್ ಬರೆದಿಟ್ಟು ಅಬಕಾರಿ ಕಾನ್ಸ್‌ಟೇಬಲ್ ಆತ್ಮಹತ್ಯೆ

ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ: ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ತಾಯಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿ ಗ್ರಾಮದಲ್ಲಿ ಇತ್ತೀಚೆಗೆ ನಡೆದಿದೆ. ಕಮತಗಿ ಗ್ರಾಮದ ಬಳಿರುವ ಮಲಪ್ರಭಾ ನದಿಯ ಬಳಿ ತಾಯಿ ಮತ್ತು ಇಬ್ಬರು ಹೆಣ್ಣುಮಕ್ಕಳ ಶವ ಪತ್ತೆಯಾಗಿದೆ. ಮೃತರು ಹುನಗುಂದ ತಾಲೂಕಿನ ಸೂಳೇಭಾವಿ ಗ್ರಾಮದ ಸಂಗಮ್ಮ ಸುರೇಶ ಮಾಸರೆಡ್ಡಿ (45), ಐಶ್ವರ್ಯ (23) ಸೌಂದರ್ಯ (19) ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ಮದುವೆ ವಯಸ್ಸಿಗೆ ಬಂದಿದ್ದ ಹೆಣ್ಮಕ್ಕಳಿಬ್ಬರ ಜೊತೆ ತಾಯಿ ಆತ್ಮಹತ್ಯೆಗೆ ಶರಣು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.