ETV Bharat / state

ಆಯತಪ್ಪಿ ಬಿದ್ದ ಬೈಕ್: ಹೆಲ್ಮೆಟ್ ಧರಿಸಿದ್ದರೆ ಪ್ರಾಣ ಉಳಿಯುತ್ತಿತ್ತು! - undefined

ಬೈಕ್​ ಸ್ಕಿಡ್​ ಆಗಿ ಬಿದ್ದು ಯುವಕ ಮೃತಪಟ್ಟಿದ್ದಾನೆ. ಹೆಲ್ಮೆಟ್​ ಧರಿಸಿದ್ದರೆ ಯುವಕ ಬದುಕುಳಿಯುವ ಸಾಧ್ಯತೆ ಇತ್ತು ಎನ್ನಲಾಗಿದೆ.

ಬೈಕ್
author img

By

Published : Jul 25, 2019, 11:11 PM IST

ಚಾಮರಾಜನಗರ: ಆಯತಪ್ಪಿ ಬೈಕ್​​ನಿಂದ ಬಿದ್ದ ಸವಾರನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸತ್ಯಮಂಗಲಂ ರಸ್ತೆಯ ಅಟ್ಟುಗುಳಿಪುರ ಬಳಿ ಸಂಭವಿಸಿದೆ.

ಚಾಮರಾಜನಗರ ತಾಲೂಕಿನ ಗೂಳಿಪುರದ ಮಾದಪ್ಪ (24) ಎಂಬಾತ ಮೃತಪಟ್ಟ ವ್ಯಕ್ತಿ.

ವೇಗವಾಗಿ ಊರಿಗೆ ತೆರಳುತ್ತಿದ್ದ ವೇಳೆ ಹಸುವೊಂದು ಅಡ್ಡ ಬಂದ ಪರಿಣಾಮ ಡಿಕ್ಕಿ ತಪ್ಪಿಸಲು ಹೋಗಿ ಕೆಳಗೆ ಬಿದ್ದಿದ್ದಾನೆ ಎನ್ನಲಾಗಿದೆ.

ತಲೆಗೆ ತೀವ್ರ ಪೆಟ್ಟಾಗಿ ರಕ್ತಸ್ರಾವವಾದ್ದರಿಂದ ಸ್ಥಳದಲ್ಲೇ ಯುವಕ ಮೃತಪಟ್ಟಿದ್ದು, ಒಂದು ವೇಳೆ ಹೆಲ್ಮೆಟ್ ಧರಿಸಿದ್ದರೆ ಆತ ಬದುಕುಳಿಯುತ್ತಿದ್ದ ಎಂಬುದು ಪ್ರತ್ಯಕ್ಷದರ್ಶಿಗಳ ಮಾತು. ಈ ಬಗ್ಗೆ ಚಾಮರಾಜನಗರ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Intro:ಆಯ ತಪ್ಪಿ ಬಿದ್ದ ಬೈಕ್: ಹೆಲ್ಮೆಟ್ ಧರಿಸಿದ್ದರೇ ಬದುಕುತ್ತಿದ್ದ ಸವಾರ

ಚಾಮರಾಜನಗರ: ಆಯತಪ್ಪಿ ಬೈಕ್ ನಿಂದ ಬಿದ್ದ ಸವಾರನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸತ್ಯಮಂಗಲಂ ರಸ್ತೆಯ ಅಟ್ಟುಗುಳಿಪುರ ಬಳಿ ನಡೆದಿದೆ.

Body:ಚಾಮರಾಜನಗರ ತಾಲೂಕಿನ ಗೂಳಿಪುರದ ಮಾದಪ್ಪ (೨೪)ಎಂಬಾತ ಮೃತಪಟ್ಟ ದುರ್ದೈವಿ.‌ ವೇಗವಾಗಿ ಊರಿಗೆ ತೆರಳುತ್ತಿದ್ದ ವೇಳೆ ಹಸುವೊಂದು ಅಡ್ಡ ಬಂದ ಪರಿಣಾಮ ಡಿಕ್ಕಿ ತಪ್ಪಿಸಲು ಹೋಗಿ ಕೆಳಗೆ ಬಿದ್ದಿದ್ದಾನೆ ಎನ್ನಲಾಗಿದೆ. ತಲೆಗೆ ತೀವ್ರ ಪೆಟ್ಟಾಗಿ ರಕ್ತಸ್ರಾವ ವಾದ್ದರಿಂದ ಸ್ಥಳದಲ್ಲೇ ಯುವಕ ಮೃತಪಟ್ಟಿದ್ದು ಒಂದು ವೇಳೆ ಹೆಲ್ಮೆಟ್ ಧರಿಸಿದ್ದರೇ ಆತ ಬದುಕುಳಿಯುತ್ತಿದ್ದ ಎಂಬುದು ಪ್ರತ್ಯಕ್ಷದರ್ಶಿಗಳ ಮಾತು.

Conclusion:ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ರವಾನಿಸಿ ಚಾಮರಾಜನಗರ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.