ಚಾಮರಾಜನಗರ : ಎರಡನೇ ಹಂತದಲ್ಲಿ ನಡೆಯಲಿರುವ ಜಿಲ್ಲೆಯ ಯಳಂದೂರು, ಕೊಳ್ಳೇಗಾಲ ಮತ್ತು ಹನೂರು ತಾಲೂಕಿನ ಗ್ರಾಪಂ ಚುನಾವಣೆಯಲ್ಲಿ 84 ನಾಮಪತ್ರ ತಿರಸ್ಕೃತವಾಗಿದ್ದು, 3001 ನಾಮಪತ್ರ ಕ್ರಮಬದ್ಧವಾಗಿವೆ.
ಯಳಂದೂರು ತಾಲೂಕಿನ 12 ಗ್ರಾಪಂಗಳ ಸ್ವೀಕೃತವಾಗಿದ್ದ 582 ನಾಮಪತ್ರಗಳ ಪೈಕಿ 14 ತಿರಸ್ಕೃತಗೊಂಡಿವೆ. ಕೊಳ್ಳೇಗಾಲ ತಾಲೂಕಿನಲ್ಲಿ 16 ಗ್ರಾಪಂಗಳ 1012 ನಾಮಪತ್ರ ಸಲ್ಲಿಕೆಯಾಗಿದ್ದವು. ಈ ಪೈಕಿ 29 ನಾಮಪತ್ರ ತಿರಸ್ಕೃತವಾಗಿವೆ.
ಹನೂರು ತಾಲೂಕಿನ 24 ಗ್ರಾಪಂಗಳ 1531 ನಾಮಪತ್ರ ಸ್ವೀಕೃತವಾಗಿವೆ. ಇವುಗಳಲ್ಲಿ 41 ನಾಮಪತ್ರ ತಿರಸ್ಕೃತವಾಗಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಒಟ್ಟಾರೆ 2ನೇ ಹಂತದ ಗ್ರಾಮಪಂಚಾಯತ್ ಚುನಾವಣೆಗೆ ಸ್ವೀಕರಿಸಲಾಗಿದ್ದ 3125 ನಾಮಪತ್ರಗಳ ಪೈಕಿ 84 ನಾಮಪತ್ರ ತಿರಸ್ಕೃತವಾಗಿವೆ. 3001ಅಭ್ಯರ್ಥಿಗಳ ನಾಮಪತ್ರ ಕ್ರಮ ಬದ್ಧವಾಗಿವೆ.