ಚಾಮರಾಜನಗರ: ಸಿದ್ದರಾಮಯ್ಯ ಕುರಿತ ಕಾರ್ಯಕ್ರಮದಲ್ಲಿ ಬ್ರಾಹ್ಮಣ ಸಮಯದಾಯವನ್ನು ಅವಹೇಳನ ಮಾಡಿದ ಚಿಂತಕ ಪ.ಮಲ್ಲೇಶ್ ವಿರುದ್ಧ ಬ್ರಾಹ್ಮಣ ಸಮುದಾಯವು ದೂರು ದಾಖಲಿಸಿದೆ. ಚಾಮರಾಜನಗರ ಪಟ್ಟಣ ಠಾಣೆಯಲ್ಲಿ ಪ.ಮಲ್ಲೇಶ್ ವಿರುದ್ಧ ದೂರು ದಾಖಲಿಸಲಾಗಿದೆ.
ಸಂವಿಧಾನ ಹಾಗೂ ಸರ್ವೋಚ್ಚ ನ್ಯಾಯಾಲಯವನ್ನು ಜರಿಯಲೆಂದೇ ದುರ್ಬಲ ವರ್ಗಕ್ಕೆ ಕೊಟ್ಟಿರುವ ಮೀಸಲಾತಿ ಪ್ರಸ್ತಾಪಿಸಿ ನ್ಯಾಯಾಂಗ ನಿಂದನೆ ಮಾಡಿದ್ದಾರೆ. ಬ್ರಾಹ್ಮಣರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದು, ಸಮಾಜದಲ್ಲಿ ಶಾಂತಿ ಕದಡುವ ಯತ್ನ ಮಾಡಿದ್ದಾರೆ ಎಂದು ಜಿಲ್ಲಾ ಬ್ರಾಹ್ಮಣ ಸಂಘ ದೂರಿದೆ.
ಕಳೆದ 15 ರಂದು ಸಿದ್ದರಾಮಯ್ಯ-75 ಎಂಬ ಕೃತಿ ಲೋಕಾರ್ಪಣೆ ವೇಳೆ ಪ.ಮಲ್ಲೇಶ್ ಬ್ರಾಹ್ಮಣ ಸಮುದಾಯ ಕುರಿತು ಅವಹೇಳಕಾರಿಯಾಗಿ ಮಾತನಾಡಿದ್ದರು. ಈ ಬಗ್ಗೆ ಹಲವೆಡೆ ಆಕ್ರೋಶವಾದ ಬಳಿಕ ವಿಷಾದ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ : ಬ್ರಾಹ್ಮಣರನ್ನು ನಂಬಬೇಡಿ ಎಂಬ ಪದ ಬಳಕೆ ಬಗ್ಗೆ ನನಗೆ ವಿಷಾದವಿದೆ: ಪ ಮಲ್ಲೇಶ್