ETV Bharat / state

ಚಾಮರಾಜನಗರದಲ್ಲಿ 37 ಕೆರೆ ಖಾಲಿ, ಮೂರಷ್ಟೇ ಭರ್ತಿ: ಕಬಿನಿಯಿಂದ ನೀರು ತುಂಬಿಸಲು ಚಿಂತನೆ - bring water from Lake Vacant Kabini

ಜಿಲ್ಲೆಯಲ್ಲಿ 3 ಕೆರೆಗಳು ಕೋಡಿ ಬಿದ್ದಿದ್ದು, ಗುಂಡ್ಲುಪೇಟೆಯ ಕೆಂಪುಸಾಗರ ಹಾಗೂ ಬೇರಂಬಾಡಿ ಕೆರೆ ಒಂದೆರಡು ದಿನಗಳಲ್ಲಿ ಕೋಡಿ ಬೀಳುತ್ತವೆ. ಚಾಮರಾಜನಗರ ತಾಲೂಕಿನ 14, ಗುಂಡ್ಲುಪೇಟೆ ತಾಲೂಕಿನ 15, ಯಳಂದೂರಿನ 2, ಕೊಳ್ಳೇಗಾಲದ 6 ಕೆರೆಗಳು ಸೇರಿ ಒಟ್ಟು 37 ಕೆರೆಗಳು ಖಾಲಿ ಬಿದ್ದಿದ್ದು, ಕಬಿನಿಯಿಂದ ನೀರು ತುಂಬಿಸಬೇಕಿದೆ.

bring water from 37 Lake Vacant Kabini in Chamarajanagar
ಚಾಮರಾಜನಗರ: 37 ಕೆರೆ ಖಾಲಿ, ಮೂರಷ್ಟೇ ಭರ್ತಿ, ಕಬಿನಿಯಿಂದ ನೀರು ತರಿಸುವ ಚಿಂತನೆ..!
author img

By

Published : Sep 23, 2020, 11:53 AM IST

ಚಾಮರಾಜನಗರ: ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಉಪ ವಿಭಾಗ ವ್ಯಾಪ್ತಿಗೆ ಒಳಪಡುವ ಜಿಲ್ಲೆಯ 64 ಕೆರೆಗಳಲ್ಲಿ ಮೂರು ಕೆರೆಗಳಷ್ಟೇ ಭರ್ತಿಯಾಗಿ ಕೋಡಿ ಬಿದ್ದಿದ್ದು, 37 ಕೆರೆಗಳು ನೀರಿಲ್ಲದೆ ಖಾಲಿಯಾಗಿವೆ.

ಚಾಮರಾಜನಗರ: 37 ಕೆರೆ ಖಾಲಿ, ಮೂರಷ್ಟೇ ಭರ್ತಿ

ಈ ಕುರಿತು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಭಾಸ್ಕರ್ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ. ಜಿಲ್ಲೆಯಲ್ಲಿ 3 ಕೆರೆಗಳು ಕೋಡಿ ಬಿದ್ದಿದ್ದು, ಗುಂಡ್ಲುಪೇಟೆಯ ಕೆಂಪುಸಾಗರ ಹಾಗೂ ಬೇರಂಬಾಡಿ ಕೆರೆ ಒಂದೆರಡು ದಿನಗಳಲ್ಲಿ ಕೋಡಿ ಬೀಳುತ್ತವೆ. ಚಾಮರಾಜನಗರ ತಾಲೂಕಿನ 14, ಗುಂಡ್ಲುಪೇಟೆ ತಾಲೂಕಿನ 15, ಯಳಂದೂರಿನ 2, ಕೊಳ್ಳೇಗಾಲದ 6 ಕೆರೆಗಳು ಸೇರಿ ಒಟ್ಟು 37 ಕೆರೆಗಳು ಖಾಲಿ ಬಿದ್ದಿದ್ದು, ಕಬಿನಿಯಿಂದ ನೀರು ತುಂಬಿಸಬೇಕಿದೆ ಎಂದು ತಿಳಿಸಿದ್ದಾರೆ.

ಶೇ. 30ಕ್ಕಿಂತ ಕಡಿಮೆ ತುಂಬಿರುವ ಕೆರೆಗಳ ಸಂಖ್ಯೆ 11, ಶೇ. 31ರಿಂದ 50ರಷ್ಟು ತುಂಬಿರುವ ಕೆರೆಗಳ ಸಂಖ್ಯೆ 5, ಶೇ. 51ರಿಂದ 99ರಷ್ಟು 9 ಕೆರೆಗಳಲ್ಲಿ ನೀರಿದೆ. ವೈನಾಡಿನಲ್ಲಿ ಜೋರು ಮಳೆಯಾಗುತ್ತಿರುವುದರಿಂದ ಗುಂಡ್ಲುಪೇಟೆಯ 4-5 ಕೆರೆಗಳು ತುಂಬಲಿವೆ ಎಂದು ಅವರು ಹೇಳಿದರು.

ಕೆಲವು ದಿನಗಳ ಹಿಂದೆಯಷ್ಟೇ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್, ಕೊಳ್ಳೇಗಾಲ, ಯಳಂದೂರು ಮತ್ತು ಹನೂರು ತಾಲೂಕಿನ ಕೆರೆಗಳನ್ನು ವೀಕ್ಷಣೆ ಮಾಡಿ ಒತ್ತುವರಿ ತೆರವಿಗೆ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ, ಈ ಕಾರ್ಯಕ್ಕೆ ಮತ್ತಷ್ಟು ವೇಗ ಬರಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.