ETV Bharat / state

ಮೈಸೂರು-ಚಾಮರಾಜನಗರದಲ್ಲಿ ಬಂದ್​​ಗೆ ನೀರಸ ಪ್ರತಿಕ್ರಿಯೆ - ಕನ್ನಡಪರ ಸಂಘಟನೆಗಳು ಕರೆ

ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಬಂದ್​​ಗೆ ಸಾಂಸ್ಕೃತಿಕ ನಗರಿ ಮೈಸೂರು ಮತ್ತು ಚಾಮರಾಜನಗರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

Mysore-Chamarajanagar
ಮೈಸೂರು-ಚಾಮರಾಜನಗರದಲ್ಲಿ ಬಂದ್​​ಗೆ ನೀರಸ ಪ್ರತಿಕ್ರಿಯೆ
author img

By

Published : Feb 13, 2020, 3:34 PM IST

ಮೈಸೂರು: ಸರೋಜಿನಿ ಮಹಿಷಿ ವರದಿ ಜಾರಿಗೆ ತರಬೇಕು ಎಂದು ಒತ್ತಾಯಿಸಿ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದ ಬಂದ್​​ಗೆ, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಾಂಕೇತಿಕ ಪ್ರತಿಭಟನೆಗೆ ಮಾತ್ರ ಸೀಮಿತವಾಗಿತ್ತು. ಮೈಸೂರಿನಲ್ಲಿ ಬಂದ್‌ಗೆ ಪೂರ್ಣ ಬೆಂಬಲ ಸಿಕ್ಕಿಲ್ಲ.

ಮೈಸೂರು-ಚಾಮರಾಜನಗರದಲ್ಲಿ ಬಂದ್​​ಗೆ ನೀರಸ ಪ್ರತಿಕ್ರಿಯೆ

ಚಾಮರಾಜನಗರದಲ್ಲಿ ಎಂದಿನಂತೆ ಸಂಚಾರ- ಜನಜೀವನ ಸಾಮಾನ್ಯ:

ಕರ್ನಾಟಕ ಬಂದ್​​ಗೆ ಜಿಲ್ಲೆಯ ವಿವಿಧ ಕನ್ನಡಪರ ಸಂಘಟನೆಗಳು ಬೆಂಬಲ ನೀಡದಿರುವುದರಿಂದ ಜನಜೀವನ ಎಂದಿನಂತಿತ್ತು‌.

ಬಸ್ ಹಾಗೂ ಆಟೋ‌ ಸಂಚಾರ ಆರಂಭಗೊಂಡಿದ್ದು , ದಿನನಿತ್ಯದ ವಹಿವಾಟಿಗೆ ವರ್ತಕರು ಅಣಿಯಾಗುತ್ತಿದ್ದಾರೆ‌.‌ ಸಂತೆಗೆ ಎಪಿಎಂಸಿ ಮಾರುಕಟ್ಟೆಗೆ ಎಂದಿನಂತೆ ರೈತರು ಬಂದಿದ್ದು, ಬಂದ್​​ಗೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಬಂದ್​​ಗೆ ಕೆಎಸ್​​ಆರ್​​​ಟಿಸಿಯಿಂದ ಬೆಂಬಲವಿಲ್ಲ, ಪರಿಸ್ಥಿತಿ ಅವಲೋಕಿಸಿ ಬಸ್ ಸಂಚಾರ ವ್ಯವಸ್ಥೆ ನೋಡಿಕೊಳ್ಳಲಾಗುವುದು ಎಂದು ಕೆಎಸ್ಆರ್​​ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.