ETV Bharat / state

ಶಾಸಕ ಮಹೇಶ್​​ಗೆ ಕೊಳ್ಳೇಗಾಲದ ಟಿಕೆಟ್ - ಬಿಎಸ್​ವೈ ಸುಳಿವು: ಸಚಿವ ಸೋಮಣ್ಣ, ಟಿಕೆಟ್ ಆಕಾಂಕ್ಷಿ ನಂಜುಂಡಸ್ವಾಮಿ ಗೈರು - ಬಿ ಎಸ್ ಯಡಿಯೂರಪ್ಪ

ಬಿಜೆಪಿ ಪಕ್ಷ ತನಗೆ ಯಾವುದೇ ಅನ್ಯಾಯ ಮಾಡಿಲ್ಲ. ಎಲ್ಲ ಸ್ಥಾನಮಾನ ಕೊಟ್ಟಿದೆ. ಕೇಂದ್ರ ಮಟ್ಟದಲ್ಲಿ ಉನ್ನತ ಸ್ಥಾನ ಕೊಟ್ಟಿದೆ. ತನಗೆ ಯಾವುದೇ ಅಸಮಾಧಾನವೂ ಇಲ್ಲ ಎಂದು ಬಿಎಸ್​ವೈ ಹೇಳುತ್ತ ಈ ಬಾರಿಯೂ ಜನರು ಮಹೇಶ್ ಅವರಿಗೆ ಆಶೀರ್ವಾದ ಮಾಡಿ ಎಂದು ಮಹೇಶ್​​​ಗೆ ಟಿಕೆಟ್ ಫೈನಲ್ ಆಗಿರುವ ಸುಳಿವು ಕೊಟ್ಟರು.

Former CM BSY spoke at the BJP Vijaya Sankalpa Yatra programme.
ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಬಿಎಸ್​ವೈ ಮಾತನಾಡಿದರು.
author img

By

Published : Mar 1, 2023, 10:50 PM IST

Updated : Mar 2, 2023, 11:57 AM IST

ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ

ಚಾಮರಾಜನಗರ:ಶಾಸಕ ಮಹೇಶ್ ಅವರಿಗೆ ಕೊಳ್ಳೇಗಾಲದ ಟಿಕೆಟ್ ಪಕ್ಕಾ ಎನ್ನುವುದು ಇಂದು ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಬಿಎಸ್​ವೈ ಅವರು ಪರೋಕ್ಷವಾಗಿ ಸುಳಿವು ಕೊಟ್ಟರು. ಕೊಳ್ಳೇಗಾಲದಲ್ಲಿ ಬುಧವಾರ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಬಿ ಎಸ್ ಯಡಿಯೂರಪ್ಪ ಮಾತನಾಡಿ, ಶಾಸಕ ಎನ್.ಮಹೇಶ್ ಸಂಭಾವಿತರು, ಸಾಕಷ್ಟು ಕ್ಷೇತ್ರದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಈ ಬಾರಿಯೂ ಜನರು ಮಹೇಶ್ ಅವರಿಗೆ ಆಶೀರ್ವಾದ ಮಾಡಿ ಎನ್ನುವ ಮೂಲಕ ಮಹೇಶ್ ಗೆ ಟಿಕೆಟ್ ಫೈನಲ್ ಆಗಿರುವ ಕುರಿತು ಸುಳಿವು ಕೊಟ್ಟರು.

ಬಿಜೆಪಿ ನನಗೆ ಎಲ್ಲ ಸ್ಥಾನಮಾನ ಕೊಟ್ಟಿದೆ: ಇನ್ನು ಚುನಾವಣಾ ರಾಜಕೀಯದಿಂದ ವಿದಾಯ ಪಡೆದಿರುವ ಬಗ್ಗೆ ಸ್ಪಷ್ಟನೆ ಕೊಟ್ಟ ಯಡಿಯೂರಪ್ಪ, ಪಕ್ಷ ತನಗೆ ಯಾವುದೇ ಅನ್ಯಾಯ ಮಾಡಿಲ್ಲ. ಎಲ್ಲ ಸ್ಥಾನಮಾನವನ್ನೂ ಕೊಟ್ಟಿದೆ. ಕೇಂದ್ರ ಮಟ್ಟದಲ್ಲಿ ಉನ್ನತ ಸ್ಥಾನ ಕೊಟ್ಟಿದೆ. ತನಗೆ ಯಾವುದೇ ಅಸಮಾಧಾನವೂ ಇಲ್ಲ. ಇದನ್ನು ಲಿಂಗಾಯತ ಸಮುದಾಯ ಅರಿಯಬೇಕು. ಈ ಬಾರಿ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಕಮಲವನ್ನು ಅರಳಿಸಬೇಕು ಎಂದು ಮನವಿ ಮಾಡಿಕೊಂಡರು. ಶಾಸಕ ಎನ್.ಮಹೇಶ್ ಅವರಿಗೆ ಆಶೀರ್ವಾದ ಮಾಡಬೇಕೆಂದು ಯಡಿಯೂರಪ್ಪ ಜೊತೆಗೆ ಸಿಎಂ ಬೊಮ್ಮಾಯಿ, ಈಶ್ವರಪ್ಪ, ಕೋಟ ಶ್ರೀನಿವಾಸಪೂಜಾರಿ ತಮ್ಮ ಭಾಷಣದಲ್ಲಿ ಹೇಳಿದರು.

ಜಾತಿ ನಡುವೆ ವಿಷ ಬಿತ್ತುತ್ತಿರುವ ಕಾಂಗ್ರೆಸ್​:ಸಿದ್ದರಾಮಯ್ಯ ಅಂಡ್​ ಕಂಪನಿ ಹಣಬಲ, ಅಧಿಕಾರ ಬಲ, ಜಾತಿ ನಡುವೆ ವಿಷ ಬಿತ್ತಿ ಅಧಿಕಾರ ಹಿಡಿಯಲು ಹೊರಟಿದ್ದಾರೆ. ಅವರಿಗೆ ತಕ್ಕ ಪಾಠ ಕಲಿಸಿ. ನನಗೆ ಜಾತಿ ಗೊತ್ತಿಲ್ಲ. ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲರೂ ಒಂದೇ ಎಂದು ಬದುಕಿರುವವನು ನಾನು‌. ನರೇಂದ್ರ ಮೋದಿ ಇರುವವರೆಗೂ ಈ ವೆಂಕ, ನಾಣಿ, ಸೀನ ಇವರೆಲ್ಲಾ ಯಾವ ಲೆಕ್ಕ ಎಂದು ಕೈಪಡೆ ವಿರುದ್ಧ ಕಿಡಿಕಾರಿದರು.

20 ದೇಶಗಳಿಗೆ ಶಸ್ತ್ರಾಸ್ತ್ರ ರಫ್ತು: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ನಮ್ಮ ಪ್ರಧಾನಿ ಯಾವುದೇ ದೇಶಕ್ಕೆ ಹೋದರೂ ಕೆಂಪು ಹಾಸಿನ ಸ್ವಾಗತ ಸಿಗುತ್ತಿದೆ‌. ಹಿಂದೆ ನಾವು ವಿದೇಶದ ಶಸ್ತ್ರಾಸ್ತ್ರಗಳಿಗೆ ಕೈ ಚಾಚುತ್ತಿದ್ದೆವು. ಆದ್ರೀಗ ನಾವು 20 ದೇಶಗಳಿಗೆ ಶಸ್ತ್ರಾಸ್ತ್ರಗಳನ್ನು ರಫ್ತು ಮಾಡುತ್ತಿದ್ದೇವೆ. ತನಗಾಗಿ ಏನನ್ನು ಮಾಡಿಕೊಳ್ಳದ ನಿಸ್ವಾರ್ಥ ಚಿಂತನೆಯ ಪ್ರಧಾನಿ ಇರುವ ಪಕ್ಷದಲ್ಲಿ ಇರುವುದು ನಮ್ಮ ಪುಣ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಭಾಗ್ಯಲಕ್ಷ್ಮಿ ಯೋಜನೆ ಜಾರಿಗೆ ತಂದರು: ಗರ್ಭದಲ್ಲಿರುವ ಮಗು ಯಾವುದೆಂದು ತಿಳಿದು ಹೆಣ್ಣು ಮಗುವಾಗಿದ್ದರೆ, ಹೊಟ್ಟೆಯಿಂದಲೇ ಕಿತ್ತಾಕುತ್ತಿದ್ರು. ಇದನ್ನು ನಿಲ್ಲಿಸಲು ಯಡಿಯೂರಪ್ಪ ಭಾಗ್ಯಲಕ್ಷ್ಮಿ ಯೋಜನೆ ಜಾರಿಗೆ ತಂದ್ರು.ಸಿದ್ದರಾಮಯ್ಯ ಒಂದು ವರ್ಗದ ಒಲೈಕೆ ಮಾಡುವ ರಾಜಕಾರಣ ಮಾಡಿದ್ರು. ಸಿದ್ದರಾಮಯ್ಯ ಹಿಂದುಳಿದ ವರ್ಗದ ಧ್ವನಿಯಾಗ್ತಾರೆ ಎಂದು ನಾವೆಲ್ಲ ಅಂದುಕೊಂಡಿದ್ದೆವು. ಆದರೆ ನಮ್ಮ ನಂಬಿಕೆಗೆ ಸಿದ್ದರಾಮಯ್ಯ ಮೋಸ ಮಾಡಿದರು. ನೀವು ಸಿದ್ದರಾಮಯ್ಯ ಸರ್ಕಾರ ಮತ್ತು ಯಡಿಯೂರಪ್ಪ, ಬೊಮ್ಮಾಯಿ ಸರ್ಕಾರವನ್ನು ತುಲನೆ ಮಾಡಿ ನೋಡಿ. ನೀವೆಲ್ಲರೂ ಶಾಸಕ ಮಹೇಶ್ ಕೈ ಬಲಪಡಿಸುವ ಕೆಲಸ ಮಾಡಿ ಎಂದು ಮನವಿ ಮಾಡುವ ಮೂಲಕ ಗಮನ ಸೆಳೆದರು.

ಕೊಳ್ಳೇಗಾಲ ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ: ಸಿಎಂ ಬೊಮ್ಮಾಯಿ ಮಾತನಾಡಿ, ಚಾಮರಾಜನಗರದ 4 ಕ್ಷೇತ್ರಗಳಲ್ಲೂ ಕಮಲ ಅರಳುತ್ತದೆ. ಯಡಿಯೂರಪ್ಪ ಅವರು ಚಾಮರಾಜನಗರವನ್ನು ಅತ್ಯಂತ ಪ್ರೀತಿ ಮಾಡುತ್ತಾರೆ‌. ಅವರ ಹೃದಯದಲ್ಲಿ ಚಾಮರಾಜನಗರ ಇದೆ. 2009 ರಲ್ಲಿ ಜಿಲ್ಲೆಯ ಕೆರೆ ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಿ 2013 ರಲ್ಲಿ ಪೂರ್ಣಗೊಳಿಸಿದ್ದರು.

ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆದ ಮೇಲೆ ಮಹೇಶ್ ಬಂದು ನಾನು ಯಡಿಯೂರಪ್ಪ ಕೈ ಬಲಪಡಿಸುತ್ತೇನೆ. ಆದರೆ ನನಗೆ ನನ್ನ ಕ್ಷೇತ್ರ ಅಭಿವೃದ್ಧಿ ಮಾಡಿ ಎಂದು ಕೇಳಿಕೊಂಡರು. ಅದರಂತೆ ಕೊಳ್ಳೇಗಾಲ ಕ್ಷೇತ್ರ ನಮ್ಮ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಅನ್ನಭಾಗ್ಯದಲ್ಲಿ ಲೂಟಿ ಮಾಡಿದ್ರು. ಹಾಸ್ಟೆಲ್ ವಿದ್ಯಾರ್ಥಿಗಳ‌ ದಿಂಬು ಮತ್ತು ಬೆಡ್‌ಶೀಟ್, ಹಾಸಿಗೆಯಲ್ಲೂ ದುಡ್ಡು ಹೊಡೆದ್ರು. ಅವರು5 ವರ್ಷ ಪೂರ್ತಿ ಲೂಟಿ ಮಾಡಿದ್ರು.ಇವತ್ತು ಕಾಂಗ್ರೆಸ್‌ನವರು ಬೇರೆ ಬೇರೆ ಮುಖವಾಡ ಹಾಕಿಕೊಂಡು ಬರ್ತಾರೆ ಎಂದು ಆರೋಪಿಸಿದರು.

ಮೋದಿ ರಾಜ್ಯಕ್ಕೆ ಬಂದ್ರೆ ಕಾಂಗ್ರೆಸ್​ಗೆ ಭಯ:ಕಾಂಗ್ರೆಸ್ ಪಕ್ಷವನ್ನು ಮನೆಗೆ ಕಳುಹಿಸುವ ಕೆಲಸ ಮಾಡಿ. ನರೇಂದ್ರ ಮೋದಿ ರಾಜ್ಯಕ್ಕೆ ಬಂದ್ರೆ ಕಾಂಗ್ರೆಸ್ ನವರಿಗೆ ಕೈ ಕಾಲು ನಡುಗುತ್ತೆ. ಅದಕ್ಕೆ ಅವರ್ಯಾಕೆ ಇಲ್ಲಿಗೆ ಬರ್ತಾರೆ ಎಂದು ಕೇಳ್ತಾರೆ ಎಂದು ಕೈಪಡೆ ವಿರುದ್ಧ ಸಿಎಂ ವಾಗ್ದಾಳಿ ನಡೆಸಿದರು. ಇನ್ನು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಕಾರ್ಯಕ್ರಮದಲ್ಲಿ ಸಚಿವ ಸೋಮಣ್ಣ ಗೈರಾಗಿದ್ದರು. ಕೊಳ್ಳೇಗಾಲದ ಯಾತ್ರೆಗೆ ಬಿಜೆಪಿ ಪ್ರಬಲ ಟಿಕೆಟ್ ಆಕಾಂಕ್ಷಿ ಮಾಜಿ ಶಾಸಕ ಜಿ‌.ಎನ್‌.ನಂಜುಂಡಸ್ವಾಮಿ ಗೈರಾಗುವ ಮೂಲಕ ಪಕ್ಷದಲ್ಲಿ ಅಂತರ ಕಾಯ್ದುಕೊಂಡಿದ್ದು ಜಗಜ್ಜಾಹೀರಾಯಿತು.

ಇದನ್ನೂಓದಿ:ಮಾ.12 ರಂದು ಬೆಂ-ಮೈ ಎಕ್ಸ್‌ಪ್ರೆಸ್‌ ಹೈವೇ ಪ್ರಧಾನಿಗಳಿಂದ ಉದ್ಘಾಟನೆ: ಪ್ರತಾಪ್ ಸಿಂಹ

Last Updated : Mar 2, 2023, 11:57 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.