ETV Bharat / state

ಯತೀಂದ್ರ ಹೇಳಿಕೆಯಿಂದ ಡಿಕೆಶಿಗೆ ಸಿಎಂ‌‌ ಆಗುವ ಕನಸು ಚಿಗುರಿದೆ: ಎನ್​ ಮಹೇಶ್ - ಸಿದ್ದರಾಮಯ್ಯ

ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಹೇಳಿಕೆಯಲ್ಲಿ ಗೊಂದಲವಿದೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗೆಲ್ಲುವುದು ಕಷ್ಟ ಅಂತ ಗೊತ್ತಾಗಿದೆ.  ಗೆದ್ದರೆ ಎನ್ನುವ ಪ್ರಶ್ನೆ ಇದೆ. ಗೆಲ್ಲದಿದ್ದರೆ ಸಿದ್ದರಾಮಯ್ಯ ಸಿಎಂ ಸ್ಥಾನದಿಂದ ಕೆಳಗಿಳಿಯುವ ಲೆಕ್ಕಾಚಾರವೂ ಇದೆ ಎಂದು ಬಿಜೆಪಿ ಉಪಾಧ್ಯಕ್ಷ ಎನ್ ಮಹೇಶ್ ತಿಳಿಸಿದರು.

BJP Vice President N Mahesh spoke to the media.
ಬಿಜೆಪಿ ಉಪಾಧ್ಯಕ್ಷ ಎನ್ ಮಹೇಶ್ ಮಾಧ್ಯಮದವರ ಜೊತೆ ಮಾತನಾಡಿದರು.
author img

By ETV Bharat Karnataka Team

Published : Jan 17, 2024, 10:05 PM IST

ಯತೀಂದ್ರ ಹೇಳಿಕೆಯಿಂದ ಡಿಕೆಶಿಗೆ ಸಿಎಂ‌‌ ಆಗುವ ಕನಸು ಚಿಗುರಿದೆ: ಎನ್​ ಮಹೇಶ್

ಚಾಮರಾಜನಗರ: ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಹೇಳಿಕೆಯಿಂದ ಡಿ ಕೆ ಶಿವಕುಮಾರ್​ ಅವರಿಗೆ ಸಿಎಂ ಆಗುವ ಕನಸು ಚಿಗುರೊಡೆದಿದೆ ಎಂದು ಬಿಜೆಪಿ ಉಪಾಧ್ಯಕ್ಷ ಎನ್ ಮಹೇಶ್ ಹೇಳಿದರು. ಸಂತೇಮರಹಳ್ಳಿಯಲ್ಲಿ ಮಾಧ್ಯಮದರೊಂದಿಗೆ ಮಾತನಾಡಿದ ಅವರು,ಯತೀಂದ್ರ ಮಾತಿನಲ್ಲೇ ಒಂದು ಉತ್ತರ ಸಹ ಇದೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗೆದ್ದರೆ ಎನ್ನುವ ಪ್ರಶ್ನಾರ್ಥಕವಿದೆ, ಮುಖ್ಯಮಂತ್ರಿ ಪುತ್ರ ಯತೀಂದ್ರ ಮಾತನಾಡುತ್ತಾರೆ ಅಂದರೆ ಅಲ್ಲಿಗೆ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಅವರಿಗೆ ಕೂಡ ಡೌಟ್ ಇದೆ ಎಂದು ಟೀಕಿಸಿದರು.

ಕಾಂಗ್ರೆಸ್ ಹೆಚ್ಚು ಸ್ಥಾನ ಗೆಲ್ಲುವುದು ಕಷ್ಟ ಅಂತ: ಯತೀಂದ್ರ ಸಿದ್ದರಾಮಯ್ಯಗೆ ಚೆನ್ನಾಗಿ ಗೊತ್ತಿದೆ, ಕಾಂಗ್ರೆಸ್ ಹೆಚ್ಚು ಸ್ಥಾನ ಗೆಲ್ಲುವುದು ಕಷ್ಟ ಅಂತ ಗೊತ್ತಾಗಿದೆ, ಗೆದ್ದರೆ ಎನ್ನುವ ಪ್ರಶ್ನೆ ಇದೆ. ಅಂದ್ರೆ ಅವ್ರು ಗೆಲ್ಲಲ್ಲ ಅಂತ ಆಯ್ತು. ಹಾಗಿದ್ರೆ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವ ಲೆಕ್ಕಾಚಾರ ಇದೆ. ಯತೀಂದ್ರ ಅವರ ಮಾತಲ್ಲಿ ಎಷ್ಟು ಗೊಂದಲಗಳಿವೆ ಎನ್ನುವುದು ಗೊತ್ತಾಗುತ್ತೆ ಎಂದು ಟಾಂಗ್ ನೀಡಿದರು.

ಯತೀಂದ್ರ ಸಿದ್ದರಾಮಯ್ಯ ಈ ರೀತಿ ಹೇಳಿಕೆ ನೀಡುವುದರಿಂದ ಡಿಕೆಶಿ ಸಿಎಂ ಆಗುವ ಕನಸು ಚಿಗರುತ್ತೆ,‌ ಲೋಕಸಭೆಯಲ್ಲಿ ಹೆಚ್ಚು ಸ್ಥಾನ ಗೆದ್ರೆ ಸಿದ್ದರಾಮಯ್ಯ ಮುಂದುವರಿಯುತ್ತಾರೆ ಅನ್ನುವದಾದರೆ, ಡಿ ಕೆ ಶಿವಕುಮಾರ್ ಏನ್ಮಾಡ್ಬೇಕು ? ಡಿ ಕೆ ಶಿವಕುಮಾರ್ ಇಸ್ ನಾಟ್ ಬಾದರ್ ಎಬೌಟ್ ಪಾರ್ಲಿಮೆಂಟ್ ಎಲೆಕ್ಷನ್, ಸಿದ್ದರಾಮಯ್ಯ ಇಸ್ ಬಾದರ್ ಎಬೌಟ್ ಪಾರ್ಲಿಮೆಂಟ್ ಎಲೆಕ್ಷನ್ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಟ್ವೀಟ್​: ಇನ್ನು ಮೋದಿ ಗಾಡನಿದ್ರೆಯಲ್ಲಿದ್ದಾರೆ ಎಂಬ ಸಿದ್ದರಾಮಯ್ಯ ಅವರ ಟ್ವೀಟ್​ಗೆ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ಅವರು ಹೃದಯ ಮುಟ್ಟಿ ಹೇಳಲಿ, ಮೋದಿ ಕೆಲಸ ಮಾಡುತ್ತಿಲ್ಲ, ನಿದ್ರೆ ಮಾಡುತ್ತಿದ್ದಾರೆ ಎಂದು, ಈ ರೀತಿ ಹೇಳಿಕೆಗಳಿಂದ ಮೋದಿ ಅವರ ವರ್ಚಸ್ಸು ಮತ್ತಷ್ಟು ಹೆಚ್ಚಾಗಲಿದೆ, ಇದರ ಜೊತೆಗೆ ಸಿದ್ದರಾಮಯ್ಯ ಅವರು ಗೌರವ ಕಳೆದುಕೊಳ್ಳುತ್ತಾರೆ ಎಂದು ಕಿಡಿಕಾರಿದರು.

ಯಾರು ಯಾವಾಗ ಸಿಎಂ, ಡಿಸಿಎಂ ಹೈಕಮಾಂಡ್ ನಿರ್ಧರಿಸುತ್ತೆ:ಬೈರೇಗೌಡ : ಯಾರು ಯಾವಾಗ ಸಿಎಂ, ಡಿಸಿಎಂ ಆಗಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಹೇಳಿದರು.

ಮೈಸೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಆ ತೀರ್ಮಾನ ನಮ್ಮ ಕೈಯಲ್ಲಿ ಇರುವುದಿಲ್ಲ. ಈ ರೀತಿಯ ಚರ್ಚೆಗಳಿಂದ ಜನರಿಗೆ ಯಾವುದೇ ಪ್ರಯೋಜನ ಆಗುವುದಿಲ್ಲ. ಹೀಗಾಗಿ ಈ ರೀತಿಯ ವಿಚಾರಗಳು, ಹೇಳಿಕೆಗಳ ಚರ್ಚೆಗೆ ಅವಕಾಶ ಕೊಡಬೇಡಿ ಎಂದರು.

ಅವರಿಗೆ ಸೂಚನೆ ನೀಡುವ ಸ್ಥಾನದಲ್ಲಿ ನಾನಿಲ್ಲ. ಆದರೆ, ಈ ರೀತಿಯ ವಿಚಾರಕ್ಕಿಂತ ಅಭಿವೃದ್ಧಿ ವಿಚಾರಗಳ ಚರ್ಚೆ ಆಗಲಿ ಎಂಬುದಷ್ಟೇ ನನ್ನ ಮನವಿ ಹಾಗೂ ಸಲಹೆ ಎಂದು ಐದು ವರ್ಷವೂ ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿಕೆ ವಿಚಾರದ ಕುರಿತಂತೆ ಪ್ರತಿಕ್ರಿಯಿಸಿದರು.

ಇದನ್ನೂಓದಿ:ಮೈಸೂರು ಸ್ಯಾಂಡಲ್​​ನ ನಕಲಿ ಸೋಪ್ ತಯಾರಿಕೆ ಪ್ರಕರಣದಲ್ಲಿ ಬಿಜೆಪಿ ಕಾರ್ಯಕರ್ತರಿದ್ದಾರೆ: ಪ್ರಿಯಾಂಕ್ ಖರ್ಗೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.