ETV Bharat / state

ಶ್ರೀರಾಮುಲುರನ್ನು ಡಿಸಿಎಂ ಮಾಡಿ ಎಂದ ಕಾರ್ಯಕರ್ತ : ನಳೀನ್​ ಕುಮಾರ್​ ಕೆಂಡಾಮಂಡಲ! - ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ

ಬಿಜೆಪಿ ನುಡಿದಂತೆ ನಡೆದ ಪಕ್ಷವಾಗಿದೆ. ಹೀಗಾಗಿ ಎಸ್ಟಿ ಸಮುದಾಯಕ್ಕೆ ವಿಶೇಷ ಸ್ಥಾನಮಾನ ನೀಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಹೇಳುತ್ತಿದ್ದಂತೆ, ಬಿಜೆಪಿ ಕಾರ್ಯಕರ್ತರೊಬ್ಬರು ಎಸ್ಟಿ ಸಮುದಾಯಕ್ಕೆ ಡಿಸಿಎಂ ಹುದ್ದೆ ನೀಡಿ, ಶ್ರೀರಾಮುಲು ಅವರನ್ನು ಉಪಮುಖ್ಯಮಂತ್ರಿ ಮಾಡಿ ಎಂದು ಕೇಳಿದರು.‌ ಈ ವೇಳೆ ನಳೀನ್​ಕುಮಾರ್​ ಗರಂ ಆದರು.

bjp-activist-demand-to-make-sri-ramulu-as-dcm
ಬಿಜೆಪಿ ಎಸ್ಟಿ ರಾಜ್ಯ ಕಾರ್ಯಕಾರಿಣಿ ಸಭೆ
author img

By

Published : Jan 28, 2021, 5:20 PM IST

ಚಾಮರಾಜನಗರ: ಬಿಜೆಪಿ ಎಸ್ಟಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಭಾಷಣದ ನಡುವೆ ಶ್ರೀರಾಮುಲು ಅವರನ್ನು ಡಿಸಿಎಂ‌ ಮಾಡಿ ಎಂದು ಕಾರ್ಯಕರ್ತರೊಬ್ಬರು ಆಗ್ರಹಿಸಿದ ಘಟನೆ ನಡೆಯಿತು.

ಶ್ರೀರಾಮುಲುರನ್ನು ಡಿಸಿಎಂ ಮಾಡಿ ಎಂದ ಕಾರ್ಯಕರ್ತ, ಗರಂ ಆದ ಕಟೀಲ್​

ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕಾರಿಣಿ ಸಭೆಯಲ್ಲಿ, ಬಿಜೆಪಿ ನುಡಿದಂತೆ ನಡೆದ ಪಕ್ಷವಾಗಿದೆ. ಹೀಗಾಗಿ ಎಸ್ಟಿ ಸಮುದಾಯಕ್ಕೆ ವಿಶೇಷ ಸ್ಥಾನಮಾನ ನೀಡಿದೆ ಎಂದು ಕಟೀಲ್ ಹೇಳುತ್ತಿದ್ದಂತೆ, ಬಿಜೆಪಿ ಕಾರ್ಯಕರ್ತರೊಬ್ಬರು ಎಸ್ಟಿ ಸಮುದಾಯಕ್ಕೆ ಡಿಸಿಎಂ ಹುದ್ದೆ ನೀಡಿ, ಶ್ರೀರಾಮುಲು ಅವರನ್ನು ಉಪಮುಖ್ಯಮಂತ್ರಿ ಮಾಡಿ ಎಂದು ಕೇಳಿದರು.‌

ಓದಿ-'ಹಕ್ಕಿ ಫೀವರ್' ನಾನ್​​ವೆಜ್ ಪ್ರಿಯರಲ್ಲಿ ಕಡಿಮೆ ಆಗಿಲ್ಲ ಫೀಯರ್... ವೈದ್ಯರು ಹೇಳುವುದಿಷ್ಟು!

ಸಭೆಯ ಮಧ್ಯೆ ಕೇಳುತ್ತಿದ್ದಂತೆ ಕೆಂಡಾಮಂಡಲರಾದ ನಳೀನ್ ಕುಮಾರ್ ಕಟೀಲ್​​​ ನೀವು ಕಾರ್ಯಕಾರಿಣಿ ಸಭೆಗೆ ಬಂದಿದ್ದೀರಿ ಎಂದು ಹೇಳುವ ಮೂಲಕ ಅವರ ಬಾಯಿ ಮುಚ್ಚಿಸಿ, ಭಾಷಣ ಮುಂದುವರೆಸಿದರು.

ಇಂದು ದೇಶದಲ್ಲಿ ದಲಿತ ರಾಷ್ಟ್ರಪತಿಯನ್ನು ಆಯ್ಕೆಮಾಡಿದ್ದು ಬಿಜೆಪಿ. ಪಕ್ಷ ನುಡಿದಂತೆ ನಡೆದುಕೊಳ್ಳುತ್ತಿದೆ. ಹೀಗಾಗಿ ಎಸ್ಸಿ, ಎಸ್ಟಿ ಸಮುದಾಯವರು ವಿಶ್ವಾಸವಿಟ್ಟು ಪಕ್ಷಕ್ಕೆ ಬರುತ್ತಿದ್ದಾರೆ. ರಾಜ್ಯದಲ್ಲಿ ಸಿಎಂ ಎಸ್ಟಿ ಸಮುದಾಯವನ್ನು ಪ್ರೋತ್ಸಾಹಿಸಿ 11 ಜನರನ್ನು ನಿಗಮದ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಇಬ್ಬರನ್ನು ಮಂತ್ರಿಗಳನ್ನಾಗಿ ಮಾಡಿದ್ದಾರೆ. ಬಿಜೆಪಿಯಲ್ಲಿ ಇಬ್ಬರು ಎಂಪಿ ಹಾಗೂ 7 ಮಂದಿಗೆ ಎಂಎಲ್ಎ ಸ್ಥಾನಗಳನ್ನು ಕೊಟ್ಟಿದ್ದೇವೆ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.