ETV Bharat / state

11 ವರ್ಷಗಳ ಬಳಿಕ ಹಕ್ಕಿ ಗಣತಿ: ಬಿಳಿಗಿರಿ ಬನದಲ್ಲಿ 274 ಪಕ್ಷಿ ಗುರುತು - ETV Bharat kannada News

ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನಾಥ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಕ್ಕಿ ಗಣತಿ ನಡೆದಿದೆ.

Bird census
ಹಕ್ಕಿ ಗಣತಿ
author img

By

Published : Jan 30, 2023, 1:17 PM IST

Updated : Jan 30, 2023, 3:11 PM IST

ಬಿಳಿಗಿರಿ ಬನದಲ್ಲಿ ಹಕ್ಕಿ ಗಣತಿ

ಚಾಮರಾಜನಗರ : ರಾಜ್ಯದ ಪ್ರಮುಖ ಹಾಗೂ ಪೂರ್ವ- ಪಶ್ಚಿಮ ಘಟ್ಟಗಳ ಸಂಗಮ ಸೇತುವಾಗಿರುವ ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನಾಥ ಹುಲಿ ಸಂರಕ್ಷಿತ ಪ್ರದೇಶದಲ್ಲಿ 274 ಪ್ರಬೇಧದ ಪಕ್ಷಿಗಳನ್ನು ಗುರುತು ಮಾಡಲಾಗಿದೆ. ಬಿಳಿಗಿರಿರಂಗನಾಥ ದೇವಾಲಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ 11 ವರ್ಷಗಳ ಬಳಿಕ ನಡೆದ ಪಕ್ಷಿ ಗಣತಿಯಲ್ಲಿ ಒಟ್ಟು 274 ಪ್ರಬೇಧದ ಪಕ್ಷಿಗಳನ್ನು ಗುರುತು ಮಾಡಿದ್ದು, ಇವುಗಳಲ್ಲಿ ಹೊಸದಾಗಿ ಎರಡು ಜಾತಿ ಹಕ್ಕಿಗಳು ಕಾಣಸಿಕ್ಕಿವೆ. ಬಹಳ ವರ್ಷಗಳ ಬಳಿಕ ಗ್ರೇಟ್ ಹಾರ್ನ್ ಬಿಲ್ ಕೂಡ ಅರಣ್ಯದಲ್ಲಿ ಗೋಚರಿಸಿದೆ.

1939ರಲ್ಲಿ ಪಕ್ಷಿ ಪ್ರೇಮಿ ಸಲೀಂ ಅಲಿ ಬಿಆರ್‌ಟಿ ಅರಣ್ಯಕ್ಕೆ ಆಗಮಿಸಿ ಸಮೀಕ್ಷೆ ನಡೆಸಿದ ಸಂದರ್ಭದಲ್ಲಿ 139 ಪಕ್ಷಿಗಳನ್ನು ಗುರುತು ಮಾಡಿದ್ದರು. 2012ರಲ್ಲಿ ನಡೆದ ಪಕ್ಷಿ ಸಮೀಕ್ಷೆಯಲ್ಲಿ 272 ಪಕ್ಷಿಗಳು ಕಂಡುಬಂದಿದ್ದವು. ಅದಾದ ನಂತರ ಈಗ ನಾಲ್ಕು ದಿನಗಳ ಕಾಲ‌ ನಡೆದ ಹಕ್ಕಿ ಗಣತಿಯಲ್ಲಿ 274 ಪಕ್ಷಿಗಳನ್ನು ಗುರುತು ಮಾಡಲಾಗಿದೆ.

ಗಣತಿ ಕಾರ್ಯ ಹೇಗೆ?: ಬಿಆರ್​ಟಿ ಅಧಿಕಾರಿಗಳು ಇಕೋ ವಾಲೆಂಟಿಯರ್ಸ್ ಗ್ರೂಪ್ ಆಫ್ ಇಂಡಿಯಾದ ಸಹಕಾರದೊಂದಿಗೆ ಈ ಬಾರಿ ಪಕ್ಷಿ ಗಣತಿ ನಡೆದಿದ್ದು 50 ಸ್ವಯಂಸೇವಕರನ್ನು 25 ತಂಡಗಳಾಗಿ ಮಾಡಲಾಗಿತ್ತು. ಈ ತಂಡಗಳನ್ನು ಪರಿವರ್ತಿಸಿ 4 ದಿನಗಳ‌ ಕಾಲ ಬೈನಾಕುಲರ್ ಮತ್ತು ಕ್ಯಾಮರಾದ ಸಹಾಯದಿಂದ ಪಕ್ಷಿಗಳನ್ನು ಕಂಡು ಚಿತ್ರ ಸೆರೆಹಿಡಿದು ವೈಜ್ಞಾನಿಕವಾಗಿ ಗಣತಿ ಕಾರ್ಯ‌ ನಡೆಸಿದ್ದಾರೆ. ಪಕ್ಷಿ ಕಾಣಿಸಿಕೊಂಡ ಸ್ಥಳ ಮತ್ತು ಪರಿಸರವನ್ನು ದಾಖಲು ಮಾಡಲಾಗಿದೆ. ಮೊದಲಿಗೆ ಅರಣ್ಯ ಇಲಾಖೆಯ ಗೇಮ್ ರಸ್ತೆ ಹಾಗೂ ಮುಖ್ಯರಸ್ತೆಗಳಲ್ಲಿ ಸಮೀಕ್ಷೆ ಮಾಡಲಾಗಿತ್ತು. ನಂತರ, ನೀರು ಇರುವ ಕಡೆಗಳಲ್ಲಿ, ಕಾಡಿನೊಳಗೆ ಸಮೀಕ್ಷಾ ಕಾರ್ಯ ನಡೆಸಲಾಗಿದೆ.

ಹೊಸ ಪಕ್ಷಿಗಳು: ದಾಂಡೇಲಿ ಅರಣ್ಯ ಭಾಗದಲ್ಲಿ ಹೆಚ್ಚಾಗಿ ಕಾಣಸಿಗುವ ದಿ ಗ್ರೇಟ್ ಹಾರ್ನ್ ಬಿಲ್ ಬಹಳ ವರ್ಷಗಳ ಬಳಿಕ ಬಿಳಿಗಿರಿ ಬನದಲ್ಲಿ ಕಂಡಿದೆ. ವಲಸೆ ಪಕ್ಷಿಗಳಾದ ನಾದರ್ನ್ ಶೆವೆಲರ್ (Northern Shoveler) ಹಾಗೂ ನಾದರ್ನ್ ಪಿನ್ಟೇಲ್ (Nothren Pintail) ಪಕ್ಷಿಗಳು ಇದೇ ಮೊದಲ ಬಾರಿ ಗಣತಿಯಲ್ಲಿ ಕಂಡಿದೆ. ಭಾನುವಾರ ನಡೆದ ಹಕ್ಕಿ ಗಣತಿ ಸಮಾರೋಪ ಸಮಾರಂಭದಲ್ಲಿ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಒಡೆಯರ್, ವನ್ಯಜೀವಿ ಮಂಡಳಿ ಸದಸ್ಯ ಮಲ್ಲೇಶಪ್ಪ ಪಾಲ್ಗೊಂಡು ಸ್ವಯಂ ಸೇವಕರಿಗೆ ಪ್ರಮಾಣಪತ್ರ ವಿತರಿಸಿ, ಬಿಳಿಗಿರಿ ಬನದ ವೈವಿಧ್ಯತೆಯ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

ಬಂಡೀಪುರದಲ್ಲೂ ನಡೆದಿತ್ತು ಹಕ್ಕಿ ಗಣತಿ: ದೇಶದ ಮೊದಲ ಹುಲಿ ರಕ್ಷಿತಾರಣ್ಯಗಳಲ್ಲಿ‌ ಒಂದಾದ ಬಂಡೀಪುರ‌ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಳೆದ 2021 ರ ಫೆಬ್ರವರಿಯಲ್ಲಿ ಪಕ್ಷಿ ಗಣತಿ ನಡೆದಿತ್ತು.‌ ಈ ಗಣತಿ 22 ವರ್ಷಗಳ ಬಳಿಕ ಬಂಡೀಪುರದಲ್ಲಿ ನಡೆದಿತ್ತು. 80 ಸ್ವಯಂ ಸೇವಕರು 13 ವಲಯಗಳಲ್ಲಿ ಸುತ್ತಾಡಿ 289 ಜಾತಿಯ ಪಕ್ಷಿಗಳನ್ನು ಗುರುತು ಮಾಡಿದ್ದರು. ಇದೇ ವೇಳೆಯಲ್ಲಿ ಅಪರೂಪದ ಗ್ರೇಟ್ ಹಾರ್ನ್ ಬಿಲ್, ಬೊನ್ನೆಲ್ಲಿ ಹದ್ದು, ಟೆಮ್ಮಿಂಕ್ ಸ್ಟೆಂಟ್ ಪತ್ತೆಯಾಗಿದ್ದವು.

ಇದನ್ನೂ ಓದಿ: ಶಾರ್ಟ್ ಸರ್ಕ್ಯೂಟ್ :​ ಅಗ್ನಿ ಅವಘಡಕ್ಕೆ 20 ಎಕರೆ ಕಬ್ಬು, 150 ತೆಂಗು ಸುಟ್ಟು ಬೂದಿ

Last Updated : Jan 30, 2023, 3:11 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.