ETV Bharat / state

ಅಂದು 'ಡಿಸ್ಕವರಿ ಇಂಡಿಯಾ ಇಂದು ಭಾರತ್ ಜೋಡೋ': ರಾಗಾ ಯಾತ್ರೆಗೆ ಗಡಿಜಿಲ್ಲೆಯಿಂದಲೇ ಶ್ರೀಕಾರ - ಭಾರತ ಐಕ್ಯತಾ ಯಾತ್ರೆ

ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆ ಇಂದು ಕರ್ನಾಟಕ ತಲುಪಲಿದೆ. ರಾಹುಲ್ ಗಾಂಧಿ ನೇತೃತ್ವದ ರ‍್ಯಾಲಿಯು ಕೇರಳ ಗಡಿಯಲ್ಲಿರುವ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಿಂದ ರಾಜ್ಯವನ್ನು ಪ್ರವೇಶಿಸಲಿದೆ.

Bharat Jodo Yatra
ಭಾರತ ಐಕ್ಯತಾ ಯಾತ್ರೆ
author img

By

Published : Sep 30, 2022, 6:51 AM IST

Updated : Sep 30, 2022, 7:01 AM IST

ಚಾಮರಾಜನಗರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಯಾತ್ರೆಗಳಿಗೂ ಗಡಿ ಜಿಲ್ಲೆಗೂ ವಿಶೇಷ ಬಾಂಧವ್ಯ ಇದೆ. ಅವರ ಪ್ರಮುಖ ಎರಡೂ ಯಾತ್ರೆಗಳು ಚಾಮರಾಜನಗರ ಜಿಲ್ಲೆಯಿಂದಲೇ ಆರಂಭಗೊಂಡಿವೆ.

ಕಳೆದ 2008ರಲ್ಲಿ 'ಡಿಸ್ಕವರಿ ಇಂಡಿಯಾ' ಎಂಬ ಯಾತ್ರೆ ರಾಜ್ಯದಲ್ಲಿ ಚಾಮರಾಜನಗರದ ಬಿಳಿಗಿರಿ ಬೆಟ್ಟದಿಂದ ಆರಂಭಗೊಂಡಿದ್ದರೆ, 'ಭಾರತ್ ಜೋಡೋ' ಯಾತ್ರೆ ಇಂದು ಗುಂಡ್ಲುಪೇಟೆ ಪಟ್ಟಣದ ಮೂಲಕ ರಾಜ್ಯ ಪ್ರವೇಶಿಸಲಿದೆ.

ಭಾರತ ಐಕ್ಯತಾ ಯಾತ್ರೆಗೆ ಗುಂಡ್ಲುಪೇಟೆಯಲ್ಲಿ ಭರ್ಜರಿ ತಯಾರಿ

ಡಿಸ್ಕವರ್ ಇಂಡಿಯಾ ಯಾತ್ರೆಯನ್ನು ಬಿಳಿಗಿರಿರಂಗಬೆಟ್ಟದ ಮುತ್ತುಗದಗದ್ದೆ ಪೋಡಿನ ಜಡೇಗೌಡ ಅವರ ಮನೆಯಲ್ಲಿ ಗೆಣಸು, ರೊಟ್ಟಿ ತಿಂದು ಜೇನು ಸವಿಯುವ ಮೂಲಕ 2008ರ ಮಾ. 25ರಂದು ಆರಂಭಿಸಿದ್ದರು. ವಿವೇಕಾನಂದ ಗಿರಿಜನ ಕೇಂದ್ರದಲ್ಲಿ ಆದಿವಾಸಿಗಳ ಜೊತೆಗೆ ಸಂವಾದ ನಡೆಸಿದರು. ಆ ಸಂದರ್ಭದಲ್ಲಿ ಪ್ರಸ್ತಾಪವಾಗಿದ್ದ ಅರಣ್ಯ ಹಕ್ಕು ಕಾಯ್ದೆಯನ್ನು ಕೇಂದ್ರದಲ್ಲಿ ಯುಪಿಎ ಸರ್ಕಾರ ಜಾರಿಗೆ ಬಂದ ನಂತರ ಆದಿವಾಸಿಗಳಿಗೆ ಅನುಕೂಲವಾಗುವಂತೆ ಅನುಷ್ಠಾನಗೊಳಿಸುವಲ್ಲಿ ಯಶಸ್ವಿಯಾಗಿದ್ದರು.

Bharat Jodo Yatra
ಭಾರತ ಐಕ್ಯತಾ ಯಾತ್ರೆ

ಇದನ್ನೂ ಓದಿ: ರಾಜ್ಯದಲ್ಲಿ ಸೆ.30 ರಿಂದ 'ಭಾರತ್ ಜೋಡೋ ಪಾದಯಾತ್ರೆ' ಆರಂಭ

ಜನತಾ ಪರಿವಾರದ ನೆಲೆಯಾಗಿದ್ದ ಚಾಮರಾಜನಗರ ಜಿಲ್ಲೆಯಲ್ಲಿ ರಾಹುಲ್ ಡಿಸ್ಕವರಿ ಇಂಡಿಯಾದ ಪರಿಣಾಮ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8ಕ್ಕೆ 8 ವಿಧಾನಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲುವು ಸಾಧಿಸುವುದರ ಜೊತೆಗೆ ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಹಲವು ದಶಕಗಳ ಬಳಿಕ ಖಾತೆ ತೆರೆದಿತ್ತು.

ಇದೀಗ ಮತ್ತೆ ಕಾಂಗ್ರೆಸ್ ಭದ್ರಕೋಟೆಯಲ್ಲಿ ಕಳೆದ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಯಲ್ಲಿ ಕೆಲವು ವಿಧಾನಸಭಾ ಹಾಗೂ ಲೋಕಸಭಾ ಕ್ಷೇತ್ರದಲ್ಲಿ ಕಮಲ ಅರಳಿದ್ದು, ಇದೀಗ ರಾಜ್ಯದಲ್ಲಿ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಿಂದ ಆರಂಭವಾಗಲಿರುವ ರಾಹುಲ್ ಗಾಂಧಿ ಅವರ ನೇತೃತ್ವದ ಭಾರತ್ ಜೋಡೋ ಯಾತ್ರೆ ಎಷ್ಟರ ಮಟ್ಟಿಗೆ ಪಕ್ಷಕ್ಕೆ ಚೈತನ್ಯ ತುಂಬುತ್ತದೆ ಎಂಬ ಲೆಕ್ಕಾಚಾರ ಆರಂಭವಾಗಿದೆ.

ಸೋಲಿಗರ ಸಂವಾದ: ಇಂದು ಭಾರತ್ ಜೋಡೋ ಯಾತ್ರೆ ವೇಳೆ ಆದಿವಾಸಿಗಳ ಜೊತೆ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದೆ. ಗುಂಡ್ಲುಪೇಟೆ ಪಟ್ಟಣದ ಹೊರವಲಯದಲ್ಲಿ ಸೋಲಿಗರು ಹಾಗೂ ಆಮ್ಲಜನಕ ದುರಂತದ ಸಂತ್ರಸ್ತರ ಜೊತೆ ರಾಗಾ ಸಂವಾದ ನಡೆಸಲಿದ್ದಾರೆ.

ಇದನ್ನೂ ಓದಿ: ನಾಳೆ ಭಾರತ್ ಜೋಡೋ ಯಾತ್ರೆ ರಾಜ್ಯ ಪ್ರವೇಶ: ಯಾವ ದಿನ, ಎಲ್ಲಿ ಸಾಗಲಿದೆ ರಾಹುಲ್​ ಪಾದಯಾತ್ರೆ?

Last Updated : Sep 30, 2022, 7:01 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.