ETV Bharat / state

Unlock 3.0: 2 ತಿಂಗಳ ಬಳಿಕ ನಾಳೆಯಿಂದ ಪ್ರವಾಸಿಗರಿಗೆ ಮುದ ನೀಡಲಿದೆ ಭರಚುಕ್ಕಿ ಫಾಲ್ಸ್ - ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರ

ಅನ್​​ಲಾಕ್ 3.0 ಜಾರಿಯಾದ ಹಿನ್ನೆಲೆ ಸೋಮವಾರದಿಂದ ಪ್ರವಾಸಿ ತಾಣವಾದ ಭರಚುಕ್ಕಿ ಜಲಪಾತ ಹಾಗೂ ಮರಡಿಗುಡ್ಡ ಉದ್ಯಾನವನಕ್ಕೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ. ಬರುವ ಎಲ್ಲಾ ಪ್ರವಾಸಿಗರು ಕೋವಿಡ್ ನಿಯಮವನ್ನು ಪಾಲಿಸಬೇಕು

bharachukki-falls-will-opens-for-visitors-from-tomorrow
ನಾಳೆಯಿಂದ ಪ್ರವಾಸಿಗರಿಗೆ ಮುದ ನೀಡಲಿದೆ ಭರಚುಕ್ಕಿ ಫಾಲ್ಸ್
author img

By

Published : Jul 4, 2021, 7:43 PM IST

ಕೊಳ್ಳೇಗಾಲ(ಚಾಮರಾಜನಗರ) : ರಾಜ್ಯಾದ್ಯಂತ ನಾಳೆಯಿಂದ ಅನ್​​​ಲಾಕ್ 3.0 ಜಾರಿಯಾಗಲಿದೆ. ಈ ಹಿನ್ನೆಲೆ ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರ ಸಮೀಪದ ಭರಚುಕ್ಕಿ ಜಲಪಾತ ವೀಕ್ಷಣೆಗೆ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಅವಕಾಶ ನೀಡಲಾಗಿದೆ. ಕೊರೊನಾ 2ನೇ ಅಲೆಯ ಭೀಕರತೆಗೆ ಕಳೆದ 2 ತಿಂಗಳಿನಿಂದ ಬಂದ್ ಮಾಡಲಾಗಿದ್ದ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಭರಚುಕ್ಕಿ ಜಲಪಾತ ನಾಳೆಯಿಂದ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಲಿದೆ.

ನಾಳೆಯಿಂದ ಪ್ರವಾಸಿಗರಿಗೆ ಮುದ ನೀಡಲಿದೆ ಭರಚುಕ್ಕಿ ಫಾಲ್ಸ್

ಮಾಸ್ಕ್ ಹಾಕಿದ್ರೆ ಮಾತ್ರ ಎಂಟ್ರಿ

ಈಗಾಗಲೇ ಕೊರೊನಾ 2ನೇ ಅಲೆಗೆ ತತ್ತರಿಸಿ ಹೋಗಿದ್ದ ಎಲ್ಲಾ ಚಟುವಟಿಕೆಗಳು ಹಂತ ಹಂತವಾಗಿ ಪುಟಿದೇಳುತ್ತಿವೆ. ಪ್ರವಾಸೋಧ್ಯಕ್ಕೂ ಅವಕಾಶ ನೀಡಲಾಗಿದೆ. ಆದರೆ, ಪ್ರವಾಸಿ ತಾಣಗಳಲ್ಲಿ ಕೋವಿಡ್​-19 ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಲಾಗಿದೆ. ಈ ಹಿನ್ನೆಲೆ ಜಲಪಾತ ವೀಕ್ಷಣೆಗೆ ಆಗಮಿಸುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕಿದೆ. ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಿದೆ.

ಸ್ಯಾನಿಟೈಸೇಷನ್ ಹಾಗೂ ಥರ್ಮಲ್ ಸ್ಕ್ರೀನಿಂಗ್

ಜಲಪಾತ ವೀಕ್ಷಣೆಗೆ ಬರುವ ಪ್ರವಾಸಿಗರನ್ನು ಸ್ಯಾನಿಟೈಸ್ ಮಾಡಿ ಥರ್ಮಲ್ ಸ್ಕ್ರೀನಿಂಗ್​​​ಗೆ ಒಳಪಡಿಸಲಾಗುವುದು ಎಂದು ಭರಚುಕ್ಕಿ ಜಲಪಾತ ವ್ಯಾಪ್ತಿಯ ಅರಣ್ಯ ರಕ್ಷಕ ಮಹಾನಂದ ಹೇಳಿದ್ದಾರೆ. ಈ ಬಗ್ಗೆ ಡಿಎಫ್ಒ ಏಡುಕೊಂಡಲು ಮಾತನಾಡಿ, ಅನ್​​ಲಾಕ್ 3.0 ಜಾರಿಯಾದ ಹಿನ್ನೆಲೆ ಸೋಮವಾರದಿಂದ ಪ್ರವಾಸಿ ತಾಣವಾದ ಭರಚುಕ್ಕಿ ಜಲಪಾತ ಹಾಗೂ ಮರಡಿಗುಡ್ಡ ಉದ್ಯಾನವನಕ್ಕೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ. ಬರುವ ಎಲ್ಲಾ ಪ್ರವಾಸಿಗರು ಕೋವಿಡ್ ನಿಯಮವನ್ನು ಪಾಲಿಸಬೇಕು ಎಂದಿದ್ದಾರೆ.

ಇದನ್ನೂ ಓದಿ: ನಾಳೆಯಿಂದ ಮೈಸೂರು ಅರಮನೆ ಹಾಗೂ ಮೃಗಾಲಯ ಓಪನ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.