ಚಾಮರಾಜನಗರ: ಸೂಪರ್ ಸ್ಟಾರ್ ರಜಿನಿ ಬಳಿಕ ಬಾಲಿವುಡ್ ಹೀರೋ ಅಕ್ಷಯ್ ಕುಮಾರ್ ಸಾಹಸಿಗ ಬೇರ್ ಗ್ರಿಲ್ಸ್ ಜೊತೆಯಲ್ಲಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ರಾಂಪುರ ಆನೆ ಶಿಬಿರ, ಐನೋರು ಮಾರಿಗುಡಿ, ಹುಲಿ ರಸ್ತೆಗಳಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಇಬ್ಬರೂ ಕಾಡು ಸುತ್ತುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇಂದು ಮಧ್ಯಾಹ್ನದವರೆಗೆ ಮಾತ್ರ ಚಿತ್ರೀಕರಣ ನಡೆಯಲಿದ್ದು, ಅಕ್ಷಯ್ ಕುಮಾರ್ ರಸ್ತೆ ಮೂಲಕ ಮೈಸೂರಿಗೆ ತೆರಳಲಿದ್ದಾರೆ. ಸಾಹಸಿಗ ಬೇರ್ ಗ್ರಿಲ್ಸ್ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ತೆರಳಲಿದ್ದಾರೆ ಎಂದು ತಿಳಿದುಬಂದಿದೆ.