ಚಾಮರಾಜನಗರ: ಡಿಸ್ಕವರಿ ವಾಹಿನಿಯ ಮ್ಯಾನ್ ವರ್ಸಸ್ ವೈಲ್ಡ್ನ ರಜಿನಿಕಾಂತ್ ವಿಶೇಷ ಸಂಚಿಕೆಗೆ ಕಾತರದಿಂದ ಕಾಯುತ್ತಿರುವ ವೇಳೆಯಲ್ಲೇ ಸಾಹಸಿಗ ಬೇರ್ ಗ್ರಿಲ್ಸ್ ತಲೈವಾ ಅಭಿಮಾನಿಗಳಿಗೆ ಡ್ಯಾನ್ಸ್ ಚಾಲೆಂಜ್ ನೀಡಿದ್ದಾರೆ.
'ತಲೈವಾ ಆನ್ ಡಿಸ್ಕವರಿ' ಎಂಬ ಹ್ಯಾಷ್ ಟ್ಯಾಗ್ನಲ್ಲಿ ತಮಿಳು ಲಿರಿಕ್ಸ್‌ನ ಡ್ಯಾನ್ಸ್ ವಿಡಿಯೋ ಒಂದನ್ನು ಶೇರ್ ಮಾಡಿರುವ ಮ್ಯಾನ್ ವರ್ಸಸ್ ವೈಲ್ಡ್ನ ನಿರೂಪಕ ಬೇರ್ ಗ್ರಿಲ್ಸ್, ರಜನಿ ಅಭಿಮಾನಿಗಳಿಗೆ ಸ್ಟೆಪ್ ಹಾಕುವಂತೆ ಚಾಲೆಂಜ್ ಮಾಡಿದ್ದಾರೆ. ಬೇರ್ ಗ್ರಿಲ್ಸ್ ಟ್ವೀಟ್ಗೆ ನೆಟ್ಟಿಗರು ಚಾಲೆಂಜ್ ಶುರು ಎಂದು ಕಾಮೆಂಟ್ ಮಾಡಿದ್ದಾರೆ.
-
🕺🏻 😁👍 https://t.co/9XGgqqoyHw
— Bear Grylls (@BearGrylls) March 7, 2020 " class="align-text-top noRightClick twitterSection" data="
">🕺🏻 😁👍 https://t.co/9XGgqqoyHw
— Bear Grylls (@BearGrylls) March 7, 2020🕺🏻 😁👍 https://t.co/9XGgqqoyHw
— Bear Grylls (@BearGrylls) March 7, 2020
ಮಾ. 23ರಂದು ರಾತ್ರಿ 8 ಗಂಟೆಗೆ ಡಿಸ್ಕವರಿ ವಾಹಿನಿಯಲ್ಲಿ ರಜನಿ ವಿಶೇಷ ಸಂಚಿಕೆ ಪ್ರಸಾರಗೊಳ್ಳಲಿದೆ. ಬೇರ್ ಗ್ರಿಲ್ಸ್ ಮತ್ತು ರಜನಿ ಜೊತೆ ಬಂಡೀಪುರದ ಕಾನನದ ಮತ್ತೊಂದು ಮಜಲನ್ನು ಕಾಣಲು ವನ್ಯಜೀವಿ ಪ್ರೇಮಿಗಳು ಕಾತರರಾಗಿದ್ದಾರೆ.