ಚಾಮರಾಜನಗರ : ಹುಲಿ ಕಂಡರೆ ಬಹುತೇಕ ಪ್ರಾಣಿಗಳು ದೂರ ಹೋಗುವುದು ಸಾಮಾನ್ಯ. ಆದರೆ, ಇಲ್ಲೊಂದು ಕರಡಿ ಮಾತ್ರ ವ್ಯಾಘ್ರನಿಗೆ ಹೆದರದೆ ಕಾಲು ಕೆರೆದುಕೊಂಡು ಕಾಳಗಕ್ಕೆ ಕರೆದಿರುವ ವಿಡಿಯೋವೊಂದು ವೈರಲ್ ಆಗಿದೆ.
ಈಟಿವಿ ಭಾರತ್ಗೆ ಲಭ್ಯವಾದ ಮಾಹಿತಿ ಪ್ರಕಾರ, ಈ ದೃಶ್ಯ ಬಹುತೇಕ ತಮಿಳುನಾಡಿನ ಮಧುಮಲೈ ಹುಲಿ ಸಂರಕ್ಷಿತ ಪ್ರದೇಶದಲ್ಲಿನ ಸಫಾರಿ ವೇಳೆ ಸೆರೆಯಾಗಿರಬಹುದು ಎಂದು ಅಂದಾಜಿಸಲಾಗಿದೆ.
30 ಸೆಕೆಂಡ್ಗಳ ವಿಡಿಯೋದಲ್ಲಿ ಹುಲಿಯನ್ನು ಹಿಂಬಾಲಿಸಿಕೊಂಡು ಹೋಗುವ ಕರಡಿ ಕದನಕ್ಕೆ ತಾನು ರೆಡಿ ಎಂಬಂತೆ ಫೋಸ್ ಕೊಡುತ್ತದೆ. ಕರಡಿಯ ಈ ವರ್ತನೆಗೆ ಕಕ್ಕಾಬಿಕ್ಕಿಯಾಗುವ ಹುಲಿರಾಯ ಸುಮ್ಮನೆ ಕುಳಿತರೂ ಬೆಂಬಿಡದೆ ಕರಡಿ ಕಾಳಗಕ್ಕೆ ಆಹ್ವಾನ ನೀಡುವಂತೆ ಎರಡು ಕಾಲಲ್ಲಿ ನಿಂತುಕೊಳ್ಳುತ್ತದೆ.