ಚಾಮರಾಜನಗರ: ಒಂದು ಕಾಲದ ಭಾರತೀಯ ಕ್ರಿಕೆಟ್ ತಂಡದ ಆಲ್‌ರೌಂಡರ್ ಹಾಗೂ ಪ್ರಸ್ತುತ ಬಿಸಿಸಿಐ ಅಧ್ಯಕ್ಷರಾಗಿರುವ ರೋಜರ್ ಬಿನ್ನಿ ಅವರು ಇಂದು ಚಾಮರಾಜನಗರದಲ್ಲಿ ಹೊಸ ಟ್ರಾಕ್ಟರ್ ಖರೀದಿ ಮಾಡಿದ್ದಾರೆ. ಚಾಮರಾಜನಗರದ ಮೈಸೂರು ರಸ್ತೆಯಲ್ಲಿರುವ ಮಹೀಂದ್ರಾ ಟ್ರಾಕ್ಟರ್ ಶೋರೂಂನಲ್ಲಿ ಮಹೀಂದ್ರ ಕಂಪನಿಯ ಟ್ರಾಕ್ಟರ್ ಕೊಂಡುಕೊಂಡರು.
ನಮ್ಮ ಪೂರ್ವಿಕರು ಕೃಷಿಕರಲ್ಲ. ನಾನು ಇತ್ತೀಚೆಗೆ ಕೃಷಿ ಮೇಲೆ ಉತ್ಸಾಹ ಹೊಂದಿದ್ದೇನೆ. ಗುಂಡ್ಲುಪೇಟೆಯ ಸಮೀಪದಲ್ಲಿ ಜಮೀನು ಖರೀದಿ ಮಾಡಿದ್ದೇನೆ. ಹತ್ತಿರದ ಶೋರೂಂನಲ್ಲಿ ಟ್ರಾಕ್ಟರ್ ಖರೀದಿ ಮಾಡಬೇಕೆಂದು ಚಾಮರಾಜನಗರದ ಟ್ರಾಕ್ಟರ್ ಶೋರೂಂನಲ್ಲಿ ಟ್ರಾಕ್ಟರ್ ಖರೀದಿ ಮಾಡಿದ್ದೇನೆ ಎಂದು ಬಿನ್ನಿ ತಿಳಿಸಿದರು.
ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಅವರು ನಮ್ಮ ಶೋ ರೂಂನಲ್ಲಿ ಟ್ರಾಕ್ಟರ್ ಖರೀದಿ ಮಾಡಿರುವುದು ತುಂಬಾ ಖುಷಿ ತಂದಿದೆ ಎಂದು ಶೋ ರೂಂ ಮಾಲೀಕ ಸಂತಸ ವ್ಯಕ್ತಪಡಿಸಿದ್ದಾರೆ. ಮಹೀಂದ್ರಾ ಟ್ರಾಕ್ಟರ್ ಕಂಪನಿಯ ರಾಜ್ಯ ಮುಖ್ಯಸ್ಥರ ಅರವಿಂದ್ ಪಾಂಡೆ, ಮೌಲಿಕ್‌ತಕ್ಕರ್ ಅವರು ರೋಜರ್ ಬಿನ್ನಿಗೆ ವಾಹನ ಕೀ ಹಸ್ತಾಂತರ ಮಾಡಿದರು.
ಇದನ್ನೂ ಓದಿ: jioCinema: ಭಾರತ-ವೆಸ್ಟ್ ಇಂಡೀಸ್ ಕ್ರಿಕೆಟ್ ಸರಣಿ ಜಿಯೊಸಿನೆಮಾದಲ್ಲಿ ನೇರ ಪ್ರಸಾರ
ಸೌರವ್ ಗಂಗೂಲಿ ನಂತರ ಬಿಸಿಸಿಐ ಅಧ್ಯಕ್ಷ ಪಟ್ಟಕ್ಕೇರಿದ ಬಿನ್ನಿ: 2022ರಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ 36ನೇ ಅಧ್ಯಕ್ಷರಾಗಿ ರೋಜರ್ ಬಿನ್ನಿ ಅಧಿಕಾರ ಸ್ವೀಕರಿಸಿದರು. ಇವರಿಗೂ ಮುನ್ನ ಬಿಸಿಸಿಐನ ಅಧ್ಯಕ್ಷ ಗಿರಿಯಲ್ಲಿ ಸೌರವ್ ಗಂಗೂಲಿ ಇದ್ದರು. ಎರಡನೇ ಬಾರಿಗೆ ಗಂಗೂಲಿ ಅವರೇ ಮುಂದುವರೆಯುತ್ತಾರೆ ಎಂಬ ಮಾತುಗಳಿದ್ದವು. ಆದರೆ ಕೆಲ ರಾಜ್ಯಗಳು ವಿರೋಧ ವ್ಯಕ್ತಪಡಿಸಿದ ಕಾರಣ ಚುನಾವಣೆ ನಡೆದು ಬಿನ್ನಿ ಆಯ್ಕೆಯಾಗಿದ್ದರು.
ಭಾರತ ಮತ್ತು ಕರ್ನಾಟಕ ಮಾಜಿ ಕ್ರಿಕೆಟಿಗ, ರಾಷ್ಟ್ರೀಯ ಆಯ್ಕೆದಾರ, ಭಾರತ ಅಂಡರ್- 19 ತಂಡಗಳ ಕೋಚ್ ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ರೋಜರ್ ಬಿನ್ನಿ ಕಾರ್ಯನಿರ್ವಹಿಸಿದ್ದರು. 1983 ರ ಕ್ರಿಕೆಟ್ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದಾರೆ. ಅಕ್ಟೋಬರ್ 2022ರಲ್ಲಿ ಬಿಸಿಸಿಐನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಬಿನ್ನಿ ಭಾರತ ಕ್ರಿಕೆಟ್ ತಂಡವನ್ನು 1979 ರಿಂದ 1987 ರವರೆಗೆ ಪ್ರತಿನಿಧಿಸಿದ್ದರು. ಆಲ್‌ರೌಂಡರ್ ಆಗಿದ್ದು ಮಧ್ಯಮ ವೇಗದ ಬೌಲಿಂಗ್ ಮತ್ತು ಬ್ಯಾಟರ್ ಆಗಿದ್ದರು. 27 ಟೆಸ್ಟ್ ಪಂದ್ಯದಲ್ಲಿ 51 ಇನ್ನಿಂಗ್ಸ್ನಲ್ಲಿ 23.06ರ ಸರಾಸರಿಯಲ್ಲಿ ಬ್ಯಾಟ್ ಬೀಸಿ 5 ಅರ್ಧಶತಕ ಸಹಿತ 830 ರನ್ ಕಲೆಹಾಕಿದ್ದಾರೆ. 72 ಏಕದಿನ ಪಂದ್ಯದಲ್ಲಿ 49 ಇನ್ನಿಂಗ್ಸ್ ಆಡಿದ್ದು, 16.13ರ ಸರಾಸರಿಯಲ್ಲಿ 629 ರನ್ ಕಲೆ ಹಾಕಿದ್ದಾರೆ. ಬೌಲಿಂಗ್ನಲ್ಲಿ 27 ಟೆಸ್ಟ್ ಪಂದ್ಯದಲ್ಲಿ 47ವಿಕೆಟ್ ಮತ್ತು 72 ಏಕದಿನದಲ್ಲಿ 77 ವಿಕೆಟ್ ಕಬಳಿಸಿದ್ದಾರೆ.
ಇದನ್ನೂ ಓದಿ: Asia Cup 2023: ಆಗಸ್ಟ್ 31ರಿಂದ ಹೈಬ್ರಿಡ್ ಮಾದರಿ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ; ಪಾಕ್ನಲ್ಲಿ 4, ಲಂಕಾದಲ್ಲಿ 9 ಪಂದ್ಯ