ETV Bharat / state

ಸಭೆ ಆರಂಭದಲ್ಲೇ ಎಷ್ಟೊತ್ತಿಗೆ ಮುಗಿಯಲಿದೆ ಎಂದ ಬಿ.ಸಿ.ಪಾಟೀಲ್​​ ಕಾಳೆಲೆದ ಶಾಸಕ! - ಕೃಷಿ ಸಚಿವ ಬಿ.ಸಿ‌.ಪಾಟೀಲ್ ಸಭೆ

ಕೃಷಿ ಇಲಾಖೆ ಸಮಗ್ರ ಕೃಷಿ ಅಭಿಯಾನ ಮತ್ತು ಸಂಚಾರಿ ಆಗ್ರೋ ಕ್ಲಿನಿಕ್ ವಾಹನಕ್ಕೆ ಕೃಷಿ ಸಚಿವ ಬಿ.ಸಿ‌.ಪಾಟೀಲ್ ಚಾಲನೆ ನೀಡಿದರು. ಇನ್ನು ಸಭೆ ಯಾವಾಗ ಮುಗಿಯಲಿದೆ ಎಂದು ಅಧಿಕಾರಿಗಳನ್ನು ಕೇಳಿದ ಪ್ರಸಂಗವೂ ನಡೆಯಿತು.

chamarajanagar
ಬಿ.ಸಿ‌.ಪಾಟೀಲ್
author img

By

Published : Jun 15, 2021, 1:47 PM IST

ಚಾಮರಾಜನಗರ: ಇಂದು ಚಾಮರಾಜನಗರ ಜಿಲ್ಲಾ ಪ್ರವಾಸದಲ್ಲಿರುವ ಕೃಷಿ ಸಚಿವ ಬಿ.ಸಿ‌.ಪಾಟೀಲ್ ಸಭೆ ಆರಂಭದಲ್ಲೇ ಮೀಟಿಂಗ್ ಎಷ್ಟೊತ್ತಿಗೆ ಮುಗಿಯಲಿದೆ ಎಂದು ಅಧಿಕಾರಿಗಳನ್ನು ಕೇಳಿದ ಪ್ರಸಂಗ ನಡೆಯಿತು.

ಪಾಟೀಲ್ ಕಾಳೆಲೆದ ಶಾಸಕ ಪುಟ್ಟರಂಗಶೆಟ್ಟಿ

ಪಕ್ಕದಲ್ಲೇ ಕುಳಿತಿದ್ದ ಶಾಸಕ ಸಿ.ಪುಟ್ಟರಂಗಶೆಟ್ಟಿ, ನೀವು ಎಷ್ಟು ಹೊತ್ತಿಗೆ ಮುಗಿಸುತ್ತೀರೋ ಅಷ್ಟೊತ್ತಿಗೆ ಸಭೆ ಮುಗಿಯಲಿದೆ ಎಂದು ಹಾಸ್ಯ ಚಟಾಕಿ ಹಾರಿಸಿ ಸಚಿವರ ಕಾಲೆಳೆದರು.

ಇನ್ನು ಸಭೆಗೆ ಮಾಧ್ಯಮದವರು ಬೇಕಾದರೆ ಇರಬಹುದು ಎಂದು ಸಚಿವರು ಹೇಳುತ್ತಿದ್ದಂತೆ ಗುಂಡ್ಲುಪೇಟೆ ಶಾಸಕ ನಿರಂಜನಕುಮಾರ್, ಪತ್ರಕರ್ತರು ಇರುವುದು ಬೇಡ ಎಂದು ಗುಸುಗುಸು ಎಂದಿದ್ದಕ್ಕೆ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸುವುದಾಗಿ ಸಚಿವರು ಸಭೆಯಿಂದ ಮಾಧ್ಯಮವನ್ನು ದೂರವಿಟ್ಟರು.

ಇದಕ್ಕೂ ಮುನ್ನ ಕೃಷಿ ಇಲಾಖೆ ಸಮಗ್ರ ಕೃಷಿ ಅಭಿಯಾನ ಮತ್ತು ಸಂಚಾರಿ ಆಗ್ರೋ ಕ್ಲಿನಿಕ್ ವಾಹನಕ್ಕೆ ಸಚಿವರು ಚಾಲನೆ ನೀಡುವಾಗ ಸಾಮಾಜಿಕ ಅಂತರ ಮಾಯವಾಗಿತ್ತು. ಕೋವಿಡ್ ನಿಯಮ ಪಾಲನೆ ಮಾಡಬೇಕಾದ ಅಧಿಕಾರಿಗಳು, ಜನಪ್ರತಿನಿಧಿಗಳೇ ಸಾಮಾಜಿಕ ಅಂತರ ಮರೆತಿದ್ದರು.

ಇದನ್ನೂ ಓದಿ: ಪೊಲೀಸ್ ಗೌರವಗಳೊಂದಿಗೆ ಸಂಚಾರಿ ವಿಜಯ್ ಅಂತ್ಯಕ್ರಿಯೆ: ಸಿಎಂ ಬಿಎಸ್​ವೈ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.