ETV Bharat / state

ಕಾನ್ಸ್​ಟೇಬಲ್​ಗೆ ಸೀಮಂತ: ಪೊಲೀಸ್ ಠಾಣೆಯಲ್ಲಿ ಹೃದಯಸ್ಪರ್ಶಿ ಕಾರ್ಯಕ್ರಮ - baby shower programe made in police station

ಚಾಮರಾಜನಗರ ಪೂರ್ವ ಠಾಣೆಯಲ್ಲಿ ಮಹಿಳಾ ಸಿಬ್ಬಂದಿ ರೂಪಶ್ರೀ ಅವರಿಗೆ ಸೀಮಂತ ಮಾಡುವ ಮೂಲಕ ಮಹಿಳಾ ಮತ್ತು ಪುರುಷ ಪೊಲೀಸ್ ಸಿಬ್ಬಂದಿ ಸಂಭ್ರಮಪಟ್ಟರು.

ಸೀಮಂತ ಕಾರ್ಯಕ್ರಮ
ಸೀಮಂತ ಕಾರ್ಯಕ್ರಮ
author img

By

Published : Oct 5, 2022, 3:44 PM IST

Updated : Oct 5, 2022, 5:11 PM IST

ಚಾಮರಾಜನಗರ: ಮಹಿಳಾ ಕಾನ್ಸ್​​​ಟೇಬಲ್​ಗೆ ಅದೇ ಠಾಣೆಯ ಸಿಬ್ಬಂದಿ ಸೀಮಂತ ಕಾರ್ಯಕ್ರಮ ಮಾಡಿರುವ, ಅಪರೂಪದ ಘಟನೆ ಚಾಮರಾಜನಗರ ಪೂರ್ವ ಠಾಣೆಯಲ್ಲಿ ನಡೆದಿದೆ.

ಚಾಮರಾಜನಗರ ಪೂರ್ವ ಪೊಲೀಸ್ ಠಾಣಾ ಮಹಿಳಾ ಸಿಬ್ಬಂದಿಯಾದ ರೂಪಶ್ರೀ ಎಂಬುವರಿಗೆ, ಅದೇ ಠಾಣೆಯ ಪೊಲೀಸ್ ನಿರೀಕ್ಷಕ ಆನಂದ್ ಮತ್ತು ಠಾಣೆಯ ಇತರ ಅಧಿಕಾರಿ, ಸಿಬ್ಬಂದಿ ಸಾಂಪ್ರದಾಯಿಕವಾಗಿ ಬುಧವಾರ ಸೀಮಂತ ಕಾರ್ಯ ಮಾಡಿದರು.

ಕಾನ್ಸ್​ಟೇಬಲ್​ಗೆ ಸೀಮಂತ

ಸಿಹಿ ತಿಂಡಿಗಳು‌ ಸೇರಿದಂತೆ ವಿವಿಧ ಉಡುಗೊರೆ ಕೊಟ್ಟು ಸಹೋದ್ಯೋಗಿಗೆ ಶುಭ ಹಾರೈಸಿ, ಉಡಿ ತುಂಬಿ ಕಳುಹಿಸಿಕೊಡಲಾಗಿದೆ. ಸದಾ ಜಂಜಾಟ, ಬಂದೋಬಸ್ತ್, ಓಡಾಟದಲ್ಲೇ ಮುಳುಗಿರುವ ಪೊಲೀಸರ ಈ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನೂ ಓದಿ: ಕಾನ್​ಸ್ಟೇಬಲ್​ಗೆ ಪೊಲೀಸ್ ಠಾಣೆಯಲ್ಲಿ ಸೀಮಂತ.. ಸಿಬ್ಬಂದಿ ಸಂಭ್ರಮ

Last Updated : Oct 5, 2022, 5:11 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.