ಚಾಮರಾಜನಗರ: ದೇಶಾದ್ಯಂತ ಹಿಂದೂಗಳು ಶ್ರದ್ಧಾ ಭಕ್ತಿಯಿಂದ ಆಚರಿಸುವ ನವರಾತ್ರಿಯ ಆಯುಧ ಪೂಜೆಯನ್ನು ಹನೂರು ತಾಲೂಕಿನ ಮಾರ್ಟಳ್ಳಿಯ ಕ್ರೈಸ್ತ ಬಾಂಧವರು ಕೂಡಾ ಆಚರಿಸಿ ಗಮನ ಸೆಳೆದಿದ್ದಾರೆ.
ಚರ್ಚ್ ಮುಂಭಾಗ ಬೈಕ್ಗಳು, ಸೈಕಲ್ ಹಾಗೂ ಆಟೋಗಳಿಗೆ ಮಂತ್ರಜಲ ಪ್ರೋಕ್ಷಿಸಿ, ಹೂವಿನಿಂದ ಪೂಜಿಸಿ ಎಲ್ಲರಿಗೂ ಪಾದ್ರಿ ಏಸು ಕ್ರಿಸ್ತನ ಸಂದೇಶ ಸಾರುವ ಮೂಲಕ ಆಯುಧ ಪೂಜೆ ನೆರವೇರಿಸಿದ್ದಾರೆ.
ಹನೂರಿನ ಬಹುತೇಕ ಗ್ರಾಮಗಳಲ್ಲಿ ತಮಿಳು ಬಾಷಿಕರು ಹೆಚ್ಚಿದ್ದು, ತಮಿಳು ಇಲ್ಲಿ ವ್ಯವಹಾರಿಕ ಭಾಷೆ ಆಗಿದ್ದರಿಂದ ತಮಿಳುನಲ್ಲಿಯೇ ಪಾದ್ರಿ ಪೂಜೆ ಸಲ್ಲಿಸಿದ್ದಾರೆ. ಪೂಜೆ ಬಳಿಕ ಸಿಹಿ ವಿತರಿಸಿ ಆಯುಧ ಪೂಜೆ ಪೂರ್ಣಗೊಳಿಸಿದ್ದಾರೆ.