ಚಾಮರಾಜನಗರ: ಖಾಲಿ ನಿವೇಶನದಲ್ಲಿ ಯುಜಿಡಿ ತ್ಯಾಜ್ಯ ಸುರಿದು 2 ವರ್ಷಗಳಾದರೂ ತೆರವುಗೊಳಿಸದಿದ್ದರಿಂದ ನಗರಸಭೆ ಆಯುಕ್ತ ರಾಜಣ್ಣ ವಿರುದ್ಧ ದಲಿತ ದೌರ್ಜನ್ಯ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.
ನಗರದ ಬೌದ್ಧ ವಿಹಾರದ ಬಳಿ ಇರುವ ಸಿ.ಎಂ.ಕೃಷ್ಣಮೂರ್ತಿ ಎಂಬುವರ ಪಿತ್ರಾರ್ಜಿತ ಆಸ್ತಿಯಲ್ಲಿ ಯುಜಿಡಿ ತ್ಯಾಜ್ಯ ಸುರಿದು 2 ವರ್ಷವಾದರೂ ತ್ಯಾಜ್ಯ ತೆಗೆಯದೇ ನಮ್ಮ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ದೂರುದಾರ ಆರೋಪಿಸಿದ್ದಾನೆ. ಸಾಕಷ್ಟು ಮನವಿ ಮಾಡಿದರೂ ಆಯುಕ್ತರು ಯಾವುದೇ ಸ್ಪಂದನೆ ಮಾಡದಿದ್ದರಿಂದ ಕೋರ್ಟ್ ಮೊರೆ ಹೋಗಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ.
ವಸತಿ ಸಮುಚ್ಛಯ ಉದ್ದೇಶಕ್ಕಾಗಿ ಭೂ ಪರಿವರ್ತನೆ ಮಾಡಿದ್ದೆ. ನಗರಸಭೆ ತ್ಯಾಜ್ಯ ಸುರಿದಿರುವುದರಿಂದ ಯಾವುದೇ ಅಭಿವೃದ್ಧಿ ಕಾಮಗಾರಿ ನಡೆಸಲು ನನಗೆ ಸಾಧ್ಯವಾಗದೇ ಆರ್ಥಿಕ ನಷ್ಟ ಅನುಭವಿಸಿದ್ದು, ನಗರಸಭೆ ಆರ್ಥಿಕ ನಷ್ಟವನ್ನು ಭರಿಸಬೇಕಿದೆ ಎಂದು ದೂರುದಾರ ಸಿ.ಎಂ.ಕೃಷ್ಣಮೂರ್ತಿ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.