ಕೊಳ್ಳೇಗಾಲ: ಹೋಂ ಐಸೋಲೇಷನ್ನಲ್ಲಿರುವ ಸೋಂಕಿತರ ಉಸಿರಾಟದ ಪ್ರಮಾಣ ಹಾಗೂ ದೇಹದ ಉಷ್ಣತೆ ಪರಿಶೀಲಿಸಿಸಲು ಗ್ರಾಮ ಪಂಚಾಯಿತಿ ವತಿಯಿಂದ ಆಶಾ ಕಾರ್ಯಕರ್ತಯರಿಗೆ ಥರ್ಮಲ್ ಸ್ಕ್ರೀನಿಂಗ್ ಮತ್ತು ಪಲ್ಸ್ ಆಕ್ಸಿಮೀಟರ್ ವಿತರಿಸಲಾಗಿದೆ.
ತಾಲ್ಲೂಕಿನ ಸತ್ತೇಗಾಲ ಗ್ರಾಮ ಪಂಚಾಯಿತಿ ವತಿಯಿಂದ ಅಲ್ಲಿನ ಆಶಾ ಕಾರ್ಯಕರ್ತೆಯರಿಗೆ ಪಲ್ಸ್ ಆಕ್ಸಿಜನ್ ಮೀಟರ್ ಹಾಗೂ ಥರ್ಮಲ್ ಸ್ಕ್ರೀನಿಂಗ್ ಮಷಿನ್ ವಿತರಿಸಲಾಗಿದೆ. ಈ ವೇಳೆ ಹೋಂ ಐಸೋಲೇಷನ್ ನಲ್ಲಿರುವ ಸೋಂಕಿತರ ಹಾಗೂ ಸೋಂಕಿತರ ಕುಟುಂಬದ ಆರೋಗ್ಯದ ಕಡೆ ನಿಗಾವಹಿಸುವಂತೆ ಸೂಚಿಸಲಾಯಿತು.
ಸೋಂಕಿತರ ಮನೆಗೆ ಭೇಟಿ ನೀಡಿ ದೇಹದ ಉಷ್ಣತೆ ಹಾಗೂ ಸ್ಯಾಚುರೇಷನ್ ಪ್ರಮಾಣ ಪರಿಶೀಲಿಸುವುದು ಒಂದು ವೇಳೆ ಕಡಿಮೆ ಬಂದರೆ ತಕ್ಷಣ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿ ಸಕಾಲದಲ್ಲಿ ಚಿಕಿತ್ಸೆ ಕೊಡಿಸಲು ಮುಂದಾಗವುದು, ಕೆಮ್ಮು ನಗಡಿ, ಜ್ವರದಂತಹ ಲಕ್ಷಣ ಕಂಡುಬಂದರೆ ಕೊರೊನಾ ಟೆಸ್ಟ್ ಮಾಡಿಸುವಂತೆ ಸಲಹೆ ನೀಡುವುದು ಆಶಾ ಕಾರ್ಯಕರ್ತೆಯರ ಕೆಲಸವಾಗಿದೆ.
ಈ ಬಗ್ಗೆ ಸತ್ತೇಗಾಲ ಗ್ರಾಮ ಪಂಚಾಯತಿ ಕಾರ್ಯದರ್ಶಿ ಲೋಕೇಶ್ ಈಟಿವಿ ಭಾರತದೊಂದಿಗೆ ಮಾತನಾಡಿ, ಪಂಚಾಯತಿಯಲ್ಲಿರುವ 13 ಆಶಾ ಕಾರ್ಯಕರ್ತೆಯರಿಗೆ ಥರ್ಮಲ್ ಸ್ಕ್ರೀನಿಂಗ್ ಹಾಗೂ ಪಲ್ಸ್ ಆಕ್ಸಿಜನ್ ಮೀಟರ್ ಅನ್ನು ವಿತರಿಸಲಾಗಿದೆ. ಪ್ರತಿದಿನ ಹೋಂ ಐಸೋಲೇಷನ್ನಲ್ಲಿರುವ ಸೋಕಿಂತರ ಹಾಗೂ ಸೋಂಕಿತರ ಕುಟುಂಬದವರ ಆರೋಗ್ಯದ ಮೇಲೆ ಆಶಾ ಕಾರ್ಯಕರ್ತರು ನಿಗಾ ಇಡಲಿದ್ದಾರೆ.
ಸತ್ತೇಗಾಲ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇದುವರೆಗೂ 211 ಕೋವಿಡ್ ಪ್ರಕರಣ ಪತ್ತೆಯಾಗಿದೆ. ಸದ್ಯ 155 ಸಕ್ರಿಯ ಪ್ರಕರಣ ಇದ್ದು. ಈ ಪೈಕಿ 126 ಮಂದಿ ಹೋಂ ಐಸೋಲೇಷನ್ನಲ್ಲಿದ್ದಾರೆ. 27 ಮಂದಿ ಕೋವಿಡ್ ಕೇರ್ ಸೆಂಟರ್ ಹಾಗೂ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. 6 ಸಾವಿನ ಪ್ರಕರಣವು ಜರುಗಿದ್ದು. ಸುಮಾರು 56 ಮಂದಿ ಗುಣ ಮುಖರಾಗಿದ್ದಾರೆ ಮಾಹಿತಿ ನೀಡಿದರು.