ಚಾಮರಾಜನಗರ: ಕೊರೊನಾ ಕುರಿತ ಸುಳ್ಳು ಸುದ್ದಿ ಹರಡಿದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ತೆರಕಣಾಂಬಿಯ ವಿಜಯ್ ರುದ್ರೇಶ್ ಎಂಬಾತ ಚಾಮರಾಜನಗರದಲ್ಲಿ ಮೊದಲ ಕೊರೊನಾ ಪಾಸಿಟಿವ್ ಪತ್ತೆ ಎಂದು ಸುಳ್ಳು ಸುದ್ದಿಯನ್ನು ತನ್ನ ಫೇಸ್‌ಬುಕ್ ಖಾತೆ ಹಾಗೂ ವಾಟ್ಸ್ ಆ್ಯಪ್‌ನಲ್ಲಿ ಬರೆದುಕೊಂಡು ಶೇರ್ ಮಾಡಿದ್ದ. ಇದನ್ನು ಗಂಭೀರವಾಗಿ ಪರಿಗಣಿಸಿದ ತೆರಕಣಾಂಬಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ಚೆನ್ನಾಜಯನಹುಂಡಿ ಗ್ರಾಮದ ಮಹಾದೇವಸ್ವಾಮಿ ಎಂಬಾತ ಕೂಡ ವಾಟ್ಸ್ ಆ್ಯಪ್ ಮೂಲಕ ಜುಬಿಲಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡುವ ಜಿಲ್ಲೆಯ ವ್ಯಕ್ತಿಗೆ ಕೊರೊನಾ ಬಂದಿದೆಯೆಂದು ವದಂತಿ ಹಬ್ಬಿಸಿದ್ದ. ಈತನನ್ನು ಗುಂಡ್ಲುಪೇಟೆ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಇದೇ ರೀತಿ ಗಾಳಿಸುದ್ದಿ ಹಬ್ಬಿಸಿದ್ದ ಇಬ್ಬರನ್ನು ಪೊಲೀಸರು ಬಂಧಿಸಿ ಚಿಕಿತ್ಸೆಗೊಳಪಡಿಸಿದ್ದರು.