ETV Bharat / state

ಕಾಂಗ್ರೆಸ್ ಪಕ್ಷ ಇರುವುದು ಗಾಂಧಿ ಕುಟುಂಬದ ಸೇವೆ ಮಾಡಲು: ಅಣ್ಣಾಮಲೈ

ಬಿಜೆಪಿಗಷ್ಟೇ ಜನರ ಕೆಲಸ ಮಾಡುವ ತಾಖತ್ ಇದೆ. ಕಾಂಗ್ರೆಸ್ ಒಂದು ಪರಿವಾರದ ಪಕ್ಷ, ನಮ್ಮದು ಜನರ ಪಕ್ಷ ಎಂದು ಬಿಜೆಪಿ ರಾಜ್ಯ ಚುನಾವಣಾ ಸಹ ಉಸ್ತುವಾರಿ ಕೆ ಅಣ್ಣಾಮಲೈ ಹೇಳಿದ್ದಾರೆ.

Annamalai reaction on congress
ರಾಜ್ಯ ಚುನಾವಣಾ ಸಹ ಉಸ್ತುವಾರಿ ಕೆ ಅಣ್ಣಾಮಲೈ
author img

By

Published : Mar 31, 2023, 5:25 PM IST

Updated : Mar 31, 2023, 6:16 PM IST

ಬಿಜೆಪಿ ರಾಜ್ಯ ಚುನಾವಣಾ ಸಹ ಉಸ್ತುವಾರಿ ಕೆ ಅಣ್ಣಾಮಲೈ

ಚಾಮರಾಜನಗರ: ಕೆಲಸ ಮಾಡುವ ತಾಖತ್ ಇರುವುದು ಬಿಜೆಪಿಗಷ್ಟೇ. ಅದು ಕಾಂಗ್ರೆಸ್​ಗಿಲ್ಲ ಎಂದು ಬಿಜೆಪಿ ರಾಜ್ಯ ಚುನಾವಣಾ ಸಹ ಉಸ್ತುವಾರಿ ಕೆ.ಅಣ್ಣಾಮಲೈ ಹೇಳಿದರು. ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಒಬಿಸಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿಗಷ್ಟೇ ಜನರ ಕೆಲಸ ಮಾಡುವ ತಾಖತ್ ಇರುವುದು, ಕಾಂಗ್ರೆಸ್ ಒಂದು ಪರಿವಾರದ ಪಕ್ಷ, ನಮ್ಮದು ಜನರ ಪಕ್ಷ. ಇದು ನಮಗೂ ಅವರಿಗೂ ಇರುವ ವ್ಯತ್ಯಾಸ ಎಂದರು‌.

ಕರ್ನಾಟಕದ ಕಾಂಗ್ರೆಸ್ ಪಕ್ಷ ಇರುವುದು ಗಾಂಧಿ ಕುಟುಂಬದ ಸೇವೆ ಮಾಡಲು, ಗಾಂಧಿ ಪರಿವಾರದ ಕೆಲಸ ಮಾಡಲಷ್ಟೇ ಇಲ್ಲಿನ ನಾಯಕರಿದ್ದಾರೆ. ಅವರು ಪ್ರತಿ ಸಾರಿ ಗಾಂಧಿ ಕುಟುಂಬವನ್ನೂ ಹೇಗೆ ಖುಷಿ ಗೊಳಿಸಬೇಕೇಂದೆ ಯೋಚನೆ ಮಾಡುತ್ತಾರೆ ಎಂದು ಕಾಂಗ್ರೆಸ್​ ವಿರುದ್ಧ ಅನ್ಣಾಮಲೈ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೇ ಆ ಕೆಲಸ ಮಾಡುತ್ತೇವೆ, ಈ ಕೆಲಸ ಮಾಡುತ್ತೇವೆ ಎನ್ನುತ್ತಾರೆ. 70 ವರ್ಷದಲ್ಲಿ 60 ವರ್ಷ ಆಡಳಿತ ನಡೆಸಿ ಏನು ಮಾಡಿದ್ದಾರೆ ಎಂದು ಹೇಳುತ್ತಿಲ್ಲ. ಬಿಜೆಪಿ ವಿರುದ್ಧ ಟೀಕೆ ಮಾಡಲು ಬಸ್​ನಲ್ಲಿ, ಕಾರ್​ನಲ್ಲಿ ಎಲ್ಲಾ ಕಡೆ ಹೋಗುತ್ತಿದ್ದಾರೆ ಎಂದು ಅಣ್ಣಾಮಲೈ ಟೀಕಿಸಿದರು.

ಬಿಜೆಪಿ ಸರ್ಕಾರ ಬಂದ ಬಳಿಕ ಮೀಸಲಾತಿಯನ್ನು ಬದಲಿಸಿದೆ - ಅಣ್ಣಾಮಲೈ : ಮೀಸಲಾತಿ ವಿಚಾರವನ್ನು ಯಾರು ಮುಟ್ಟುತ್ತಿರಲಿಲ್ಲ, ಆದರೆ ಬಿಜೆಪಿ ಸರ್ಕಾರ ಬಂದ ಬಳಿಕ ಮೀಸಲಾತಿಯನ್ನು ಬದಲಿಸಿದೆ. ಒಳ‌ ಮೀಸಲಾತಿ ಕೊಟ್ಟಿದ್ದೇವೆ, ಹಿಂದೆ ಸರ್ಕಾರ ನಡೆಸಿದ್ದ ಪಕ್ಷಗಳಿಗೆ ಜನರ ಮತ ಬೇಕಿತ್ತು. ಆದರೆ ಅವರ ಅಭಿವೃದ್ಧಿ ಬೇಕಿರಲಿಲ್ಲ, ಆದರೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಜನಪರವಾಗಿ ಮೀಸಲಾತಿ ತಂದಿದ್ದಾರೆ, ಇದು ಕೇವಲ ಟ್ರೈಲರ್ ಅಷ್ಟೇ ಬದಲಾಯಿಸಬೇಕಾದದ್ದು ಬಹಳಷ್ಟಿದೆ ಎಂದರು.

ನಾವು ಎಲ್ಲಾ ಕೆಲಸ ಮಾಡಿದ್ದೇವೆ ಎಂದು ಹೇಳುತ್ತಿಲ್ಲ, ಮಾಡಬೇಕಾದ ಕೆಲಸ ಬಹಳಷ್ಟಿದೆ, ಡಬಲ್ ಇಂಜಿನ್ ಸರ್ಕಾರದ ವೇಗ ನೋಡಿದ್ದೀರಿ, 100, 120, 107 ಹೀಗೆ ಈ ಸಂಖ್ಯೆ ಬೇಡ, 150 ಸ್ಥಾನ ಕೊಡಿ ಬಳಿಕ ನಿಮ್ಮ ಮನೆ ಬಾಗಿಲಿಗೆ ಅಭಿವೃದ್ಧಿ ಪರ್ವ ನೋಡಿ, ಈ ಬಾರಿ ಚಾಮರಾಜನಗರದಲ್ಲಿ ನಾಲ್ಕು ಸ್ಥಾನದಲ್ಲೂ ಬಿಜೆಪಿ ಪತಾಕೆ ಹಾರಿಸಿ ಎಂದು ಮತದಾರರಲ್ಲಿ ಅಣ್ಣಾಮಲೈ ಮನವಿ ಮಾಡಿದರು.

ತಮಿಳಿನಲ್ಲೂ ಭಾಷಣ ಮಾಡಿದ ಅಣ್ಣಾಮಲೈ: ಹನೂರು ಕ್ಷೇತ್ರದಲ್ಲಿ ತಮಿಳು ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ತಮಿಳುನಲ್ಲೂ ಅಣ್ಣಾಮಲೈ ಭಾಷಣ ಮಾಡಿದರು‌. ಅಭಿವೃದ್ಧಿ ಕೇವಲ ಬೆಂಗಳೂರಿನಲ್ಲಷ್ಟೇ ಇರಬಾರದು ಅದು ಚಾಮರಾಜನಗರದಲ್ಲೂ ಆಗಬೇಕು, ಬೀದರ್​ನಲ್ಲೂ ಆಗಬೇಕು ಅದಕ್ಕಾಗಿ ರಾಜ್ಯದಲ್ಲಿ ಈ ಬಾರಿ ಬಿಜೆಪಿ ಬರಬೇಕು ಎಂದು ಹೇಳಿದರು.

ಇನ್ನು ಕಾರ್ಯಕ್ರಮದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾದ ಜನಾಶ್ರಯ ವೆಂಕಟೇಶ್, ನಿಶಾಂತ್, ದತ್ತೇಶ್ ಹಾಗೂ ಡಾ.ಪ್ರೀತಂ ನಾಗಪ್ಪ ಇತರರು ಉಪಸ್ಥಿತರಿದ್ದರು.

ಇದನ್ನೂ ಓದಿ:ಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿ ನಡುವೆ ಒಳ ಒಪ್ಪಂದ: ಹೊಸ ಬಾಂಬ್ ಸಿಡಿಸಿದ ಕುಮಾರಸ್ವಾಮಿ

Last Updated : Mar 31, 2023, 6:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.