ಚಾಮರಾಜನಗರ: ಕೊರೊನಾ ಪ್ರಕರಣಗಳು ಕಡಿಮೆಯಾಗುತ್ತಿರುವ ಹಿನ್ನೆಲೆ, ಇಂದಿನಿಂದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಎಲ್ಲ ಸೇವೆಗಳನ್ನು ಪುನಾರಂಭಗೊಳಿಸಲು ಜಿಲ್ಲಾಧಿಕಾರಿ ಡಾ. ಎಂ. ಆರ್. ರವಿ ಆದೇಶ ಹೊರಡಿಸಿದ್ದಾರೆ.
ಮಲೆಮಹದೇಶ್ವರ ಬೆಟ್ಟ ನಾಡಿನ ಪ್ರಮುಖ ದೇವಾಲಯಗಳಲ್ಲಿ ಒಂದು. ಜಾತ್ರೆಗಷ್ಟೇ ಕೋವಿಡ್ ನಿರ್ಬಂಧ ಮುಂದುವರಿದಿದ್ದು, ಉಳಿದಂತೆ ದಾಸೋಹ, ಚಿನ್ನದ ರಥ, ಬಸವ-ರುದ್ರಾಕ್ಷಿ ವಾಹನ, ಲಾಡು ಪ್ರಸಾದ ಜೊತೆಗೆ ಮುಖ್ಯವಾಗಿ ಒಂದು ವರ್ಷದ ಬಳಿಕ ಮುಡಿಸೇವೆ ಇಂದಿನಿಂದ ಮತ್ತೆ ಆರಂಭಗೊಂಡಿದೆ.
ಇದನ್ನೂ ಓದಿ: ಏಷ್ಯಾ ಖಂಡದಲ್ಲೇ ಅಪರೂಪವಾಗಿರುವ ಕೊಂಡುಕುರಿ ದಾವಣಗೆರೆಯಲ್ಲಿ ಪ್ರತ್ಯಕ್ಷ
ಡಿಸಿ ಅದೇಶದ ಬೆನ್ನಲ್ಲೇ ದಾಸೋಹ ಭವನದಲ್ಲಿ ಉಪಾಹಾರ ನೀಡಲಾಗುತ್ತಿದ್ದು, ಲಾಡು ಸೇವೆ ಸಂಜೆಯಿಂದ ಪ್ರಾರಂಭವಾಗಲಿದೆ. ಆದರೆ, ಜಾತ್ರೆ, ತೆಪ್ಪೋತ್ಸವ ಆಚರಣೆಗೆ ನಿರ್ಬಂಧ ಇದೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ತಿಳಿಸಿದ್ದಾರೆ.