ETV Bharat / state

ಗ್ರಾಪಂ ಚುನಾವಣೆಯಲ್ಲಿ ನಕ್ರಾ ಮಾಡಿದ್ರೆ ಗಡಿಪಾರು ಗ್ಯಾರಂಟಿ.. ಪುಡಿರೌಡಿಗಳ ಬೆವರಿಳಿಸಿದ ಡಿವೈಎಸ್ಪಿ - ಡಿವೈಎಸ್ಪಿ ಪ್ರಿಯದರ್ಶಿನಿ ಸಾಣಿಕೊಪ್ಪ ರೌಡಿಶೀಟರ್​ಗಳಿಗೆ ಖಡಕ್ ವಾರ್ನಿಂಗ್

ರೌಡಿಶೀಟರ್​ಗಳ ಜಾತಕವೆಲ್ಲಾ ನಮ್ಮ ಬಳಿ ಇದ್ದು, ನಿಮ್ಮ ಮೇಲೆ ಕಣ್ಣಿಟ್ಟಿರುತ್ತೇವೆ. ನಿಮಗೆ ಮತ ಹಾಕುವುದಷ್ಟೇ ಕೆಲಸ ಆಗಬೇಕೆ ಹೊರತು ಗಲಾಟೆ, ಘರ್ಷಣೆ ಮಾಡಿದ್ರೆ, ಪೊಲೀಸ್ ಏನೆಂಬುದು ಗೊತ್ತಾಗಲಿದೆ..

ahead of village panchayath election police held rowdy parade
ರೌಡಿಶೀಟರ್​ಗಳ ಪರೇಡ್
author img

By

Published : Dec 6, 2020, 2:06 PM IST

ಚಾಮರಾಜನಗರ : ಗ್ರಾಪಂ ಚುನಾವಣೆ ಹಿನ್ನೆಲೆ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಚಾಮರಾಜನಗರ ಪೂರ್ವ ಠಾಣೆಯಲ್ಲಿ ಡಿವೈಎಸ್ಪಿ ರೌಡಿಶೀಟರ್​ಗಳ ಪರೇಡ್ ನಡೆಸಿ ಕ್ಲಾಸ್ ತೆಗೆದುಕೊಂಡರು.

ರೌಡಿಶೀಟರ್​ಗಳ ಪರೇಡ್
ಗ್ರಾಮ ಪಂಚಾಯತ್‌ ಚುನಾವಣೆಯಲ್ಲಿ ಏನಾದರೂ ಬಾಲ ಬಿಚ್ಚಿದ್ರೇ, ಶಾಂತಿ ಕದಡಲು ಕುಮ್ಮಕ್ಕು ಕೊಟ್ಟರೆ ಗಡಿಪಾರು ಮಾಡುತ್ತೇನೆ. ಈಗ ಕೂಲಿ, ವ್ಯವಸಾಯ ಮಾಡಿ ಊಟ ಮಾಡುತ್ತಿದ್ದೀರಿ, ಆಗ ಕೆಲಸವೂ ಇಲ್ಲ, ಕುಟುಂಬವೂ ಇಲ್ಲ ಎಂಬ ದುಸ್ಥಿತಿಗೆ ಬರುತ್ತೀರಿ ಎಂದು ಚಾಮರಾಜನಗರ ಪೂರ್ವ ಠಾಣೆಗೆ ಒಳಪಡುವ 97 ಗ್ರಾಮಗಳ 30ಕ್ಕೂ ಹೆಚ್ಚು ರೌಡಿಶೀಟರ್​ಗಳಿಗೆ ಡಿವೈಎಸ್ಪಿ ಪ್ರಿಯದರ್ಶಿನಿ ಸಾಣಿಕೊಪ್ಪ ಖಡಕ್ ವಾರ್ನಿಂಗ್ ಕೊಟ್ಟರು.
ರೌಡಿಶೀಟರ್​ಗಳ ಜಾತಕವೆಲ್ಲಾ ನಮ್ಮ ಬಳಿ ಇದ್ದು, ನಿಮ್ಮ ಮೇಲೆ ಕಣ್ಣಿಟ್ಟಿರುತ್ತೇವೆ. ನಿಮಗೆ ಮತ ಹಾಕುವುದಷ್ಟೇ ಕೆಲಸ ಆಗಬೇಕೆ ಹೊರತು ಗಲಾಟೆ, ಘರ್ಷಣೆ ಮಾಡಿದ್ರೆ, ಪೊಲೀಸ್ ಏನೆಂಬುದು ಗೊತ್ತಾಗಲಿದೆ. ಮತ ಹಾಕಲಷ್ಟೇ ಗಮನ ಕೊಡಿ, ಬೇರೆಲ್ಲಾ ಕಡೆ ಬಾಲ ಬಿಚ್ಚಲು ಹೋಗಬೇಡಿ, ಕುಮ್ಮಕ್ಕು ಕೊಡಬೇಡಿ ಎಂದು ಪುಡಿ ರೌಡಿಗಳಿಗೆ​ ಎಚ್ಚರಿಕೆ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.