ETV Bharat / state

ಕೊಳ್ಳೇಗಾಲಕ್ಕೆ ನಟ‌ ಜಿಮ್ ರವಿ ಭೇಟಿ: 'ಪುರುಷೋತ್ತಮ' ಸಿನಿಮಾ ನೋಡಿ ಆಶೀರ್ವದಿಸುವಂತೆ ಮನವಿ - Actor Gym Ravi

ಮೊಟ್ಟ ಮೊದಲ ಬಾರಿಗೆ ನಾಯಕ ನಟನಾಗಿ ಪುರುಷೋತ್ತಮ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ವೀಕ್ಷಕರು ಚಿತ್ರವನ್ನು ನೋಡಿ ಬೆಂಬಲಿಸಬೇಕು ಎಂದು ನಟ ಜಿಮ್​​ ರವಿ ಮನವಿ ಮಾಡಿದರು.

Actor Gym Ravi
ನಟ‌ ಜಿಮ್ ರವಿ
author img

By

Published : Nov 8, 2021, 7:50 AM IST

ಕೊಳ್ಳೇಗಾಲ (ಚಾಮರಾಜನಗರ): ನಟ ಜಿಮ್ ರವಿ ಕೊಳ್ಳೇಗಾಲಕ್ಕೆ ಭೇಟಿ ನೀಡಿದ್ದು, ತಾವು ನಾಯಕ ನಟನಾಗಿ ನಟಿಸಿರುವ 'ಪುರುಷೋತ್ತಮ' ಸಿನಿಮಾ‌ ನೋಡಿ ಬೆಂಬಲಿಸುವಂತೆ ಸಿನಿ ಅಭಿಮಾನಿಗಳಿಗೆ ಮನವಿ ಮಾಡಿದರು.

ಕೊಳ್ಳೇಗಾಲಕ್ಕೆ ಭೇಟಿ ನೀಡಿದ ನಟ‌ ಜಿಮ್ ರವಿ

ಪಟ್ಟಣದ ದೇವಾಂಗ ಬೀದಿಯಲ್ಲಿರುವ ರಾಜರಾಜೇಶ್ವರಿ ಗರಡಿ ಮನೆಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ‌ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಗರಡಿ‌ ಮನೆಯಲ್ಲಿ ಬೆಳೆದ ಹುಡುಗನಾಗಿ ಚಿತ್ರರಂಗಕ್ಕೆ ಕಾಲಿಟ್ಟು 150ಕ್ಕೂ ಹೆಚ್ಚು ಚಿತ್ರಗಳಲ್ಲಿ ಪೋಷಕ ನಟನ ಪಾತ್ರ ಮಾಡಿದ್ದೇನೆ. ಆದರೆ ಇದೀಗ ಮೊಟ್ಟ ಮೊದಲ ಬಾರಿಗೆ ನಾಯಕ ನಟನಾಗಿ ಪುರುಷೋತ್ತಮ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ವೀಕ್ಷಕರು ಚಿತ್ರವನ್ನು ನೋಡಿ ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಗರಿಡಿ ಮನೆಯಿಂದ ಬಂದಿರುವ ನನಗೆ ಗರಡಿಯನ್ನು ಉಳಿಸಿ, ಬೆಳೆಸಬೇಕೆಂಬ ಆಸೆ ಇದೆ. ಅದರಂತೆ ರಾಜ್ಯಾದ್ಯಂತ ಗರಡಿ ಆಂದೋಲನ ನಡೆಸಲು ತೀರ್ಮಾನಿಸಿದ್ದೇನೆ. ಮೊದಲು ಕೊಳ್ಳೇಗಾಲದ ದೇವಾಂಗಪೇಟೆಯ ಗರಡಿ‌ಮನೆಯಿಂದಆಂದೋಲನ ಪ್ರಾರಂಭವಾಗಲಿದೆ ಎಂದರು. ಭೇಟಿ ವೇಳೆ ಗರಡಿ ಪೂಜೆ ಸ್ವೀಕರಿಸಿ, ಅಭಿಮಾನಿಗಳ ಒತ್ತಾಯದಂತೆ ಕೆಲ ಕಾಲ ಕಸರತ್ತು ನಡೆಸಿದರು.

ಇದನ್ನೂ ಓದಿ: ಖಳನಾಯಕ‌ನಾಗಿದ್ದ ಜಿಮ್ ರವಿ.. ದೀಪಾವಳಿಗೆ 'ಪುರುಷೋತ್ತಮ'ನಾಗಿ ಮಿಂಚಿಂಗ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.