ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ದುರ್ವಾಸನೆಯಿಂದ ಕೂಡಿದ್ದ ಲಾರಿಯೊಂದು ಕೇರಳದಿಂದ ಬರುತ್ತಿದೆ ಎಂಬ ಮಾಹಿತಿ ಮೇರೆಗೆ ಪೊಲೀಸರು ತಪಾಸಣೆ ನಡೆಸಿದಾಗ ಅದರಲ್ಲಿ ದನದ ಮೂಳೆಗಳನ್ನು ಸಾಗಿಸುತ್ತಿರುವುದು ಕಂಡುಬಂದಿದೆ.
ಮಂಡ್ಯ ಜಿಲ್ಲೆಯ ನಾಗಮಂಗಲದ ನಿವಾಸಿ ಅಬ್ದುಲ್ ರಿಯಾಜ್ ಬಂಧಿತ ಆರೋಪಿ. ಈತ ತನ್ನ ವಾಹನದಲ್ಲಿ ಕೇರಳದಿಂದ ದನದ ಮೂಳೆಗಳನ್ನು ರಾಜ್ಯದ ಸಕ್ಕರೆ ಕಾರ್ಖಾನೆಗೆ ಅಕ್ರಮವಾಗಿ ಸಾಗಿಸುತ್ತಿದ್ದ ಎನ್ನಲಾಗ್ತಿದೆ. ಕೇರಳದಲ್ಲಿ ಕಟುಕರ ಮೂಲಕ ಮೂಳೆಗಳನ್ನು ಸಂಗ್ರಹಿಸಿ ರಾಜ್ಯಕ್ಕೆ ತರುತ್ತಿದ್ದ ಎಂದು ವಿಚಾರಣೆ ವೇಳೆ ತಿಳಿಸಿದ್ದಾನೆ ಎಂಬ ಮಾಹಿತಿ ಸಿಕ್ಕಿದೆ.
ಈ ಸಂಬಂಧ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಂಧಿತನನ್ನು ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ.