ETV Bharat / state

ಮನೆಗೆ ಆಕಸ್ಮಿಕ ಬೆಂಕಿ: ಬೀದಿಗೆ ಬಿದ್ದ ವೃದ್ಧೆಯ ಜೀವನ - ಕೊಳ್ಳೇಗಾಲ ಲೇಟೆಸ್ಟ್​ ನ್ಯೂಸ್

ಕೊಳ್ಳೇಗಾಲ ಪಟ್ಟಣದ ಚಿಕ್ಕಚೌಡೇಶ್ವರಿ ದೇವಸ್ಥಾನದ ಪಕ್ಕದಲ್ಲಿದ್ದ ಮನೆಯೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿದೆ. ಘಟನೆಯಲ್ಲಿ ಮನೆಯಲ್ಲಿದ್ದ ವಸ್ತುಗಳೆಲ್ಲ ಸುಟ್ಟು ಭಸ್ಮವಾಗಿರುವ ಘಟನೆ ನಡೆದಿದೆ.

ಆಕಸ್ಮಿಕ ಮನೆಗೆ ಬೆಂಕಿ
Accidently fire set to a home at Kollegala
author img

By

Published : Feb 28, 2021, 8:11 PM IST

ಕೊಳ್ಳೇಗಾಲ: ಪಟ್ಟಣದ ಚಿಕ್ಕಚೌಡೇಶ್ವರಿ ದೇವಸ್ಥಾನದ ಪಕ್ಕದಲ್ಲಿದ್ದ ಮನೆಯೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿ ಮನೆಯಲ್ಲಿದ್ದ ವಸ್ತುಗಳೆಲ್ಲ ಸುಟ್ಟು ಭಸ್ಮವಾಗಿರುವ ಘಟನೆ ನಡೆದಿದೆ.

ಬೆಂಕಿ ಅವಘಡದಲ್ಲಿ ಮನೆ ಕಳೆದುಕೊಂಡವರು

ವೃದ್ಧೆ ಸಂಜೀವಮ್ಮ ಹಾಗೂ ಬೇಬಿ, ಸಣ್ಣಮ್ಮ, ಶಾಂತಿ ಎಂಬುವರ ಎರಡು ಕುಟುಂಬಗಳು ಹಾನಿಗೊಳಗಾದ ಮನೆಯಲ್ಲಿ ವಾಸವಿದ್ದವು. ವೃದ್ಧೆ ಸಂಜೀವಮ್ಮ ಮನೆಯ‌ ಮಾಲೀಕರಾಗಿದ್ದಾರೆ. ಬೇಬಿ ತನ್ನ ಕುಟುಂಬದ ಸದಸ್ಯರ ಜೊತೆ ಬಾಡಿಗೆಗೆ ನೆಲೆಸಿದ್ದರು. ಸಣ್ಣಮ್ಮ ಒಬ್ಬರೇ ಮಲಗಿದ್ದ ವೇಳೆ ಮನೆಗೆ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ.

ಬೆಂಕಿ ನೋಡಿದ ಕೂಡಲೇ ಸ್ಥಳೀಯರು ಮನೆಯೊಳಗಿದ್ದ ಸಣ್ಣಮ್ಮಳನ್ನು ರಕ್ಷಿಸಿದ್ದು, ಬೆಂಕಿ ನಂದಿಸಲು ಪ್ರಯತ್ನ ನಡೆಸಿದರಾದರೂ ಅಷ್ಟರಲ್ಲಾಗಲೇ ಬೆಂಕಿಯ ಕೆನ್ನಾಲಿಗೆಗೆ ಮನೆಯ ಅರ್ಧ ಭಾಗ ಸುಟ್ಟು ಹೋಗಿತ್ತು.

ಘಟನೆ ಸಂಬಂಧ ಮಾಹಿತಿ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದರು. ಸದ್ಯ ಮನೆಯಲ್ಲಿದ್ದ ಸಂಪೂರ್ಣ ಸಾಮಗ್ರಿಗಳು ಸುಟ್ಟು ಕರಕಲಾಗಿದ್ದು, ಮನೆ ಕಳೆದುಕೊಂಡ ವೃದ್ಧೆ ಸಂಜೀವಮ್ಮ ಇವರ ಜೀವನ ಕಷ್ಟವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.