ETV Bharat / state

ಸಿಎಂ ಬಂದೋಬಸ್ತ್​​ಗೆ ತೆರಳುತ್ತಿದ್ದ ಬೊಲೆರೊ ವಾಹನ ಪಲ್ಟಿ.. ಎಲ್ಲರೂ ಪ್ರಾಣಾಪಾಯದಿಂದ ಪಾರು - ಸಿಎಂ ಯಡಿಯೂರಪ್ಪಗೆ ಭದ್ರತೆ ನೀಡಲು ಹೋಗುತ್ತಿದ್ದಾಗ ಅವಘಡ

chamarajanagara
ವಾಹನ ಪಲ್ಟಿ
author img

By

Published : Nov 25, 2020, 1:05 PM IST

Updated : Nov 25, 2020, 1:40 PM IST

12:55 November 25

ಸಿಎಂ ಬಂದೋಬಸ್ತ್​​ಗೆ ತೆರಳುತ್ತಿದ್ದ ಬೊಲೆರೊ ವಾಹನ ಪಲ್ಟಿ

ಚಾಮರಾಜನಗರ : ಮಲೆಮಹದೇಶ್ವರ ಬೆಟ್ಟಕ್ಕೆ ಮುಖ್ಯಮಂತ್ರಿ ಬಿ.ಎಸ್.ಯುಡಿಯೂರಪ್ಪ ಆಗಮಿಸುತ್ತಿರುವ ಹಿನ್ನೆಲೆ, ಬಂದೋಬಸ್ತ್ ಗಾಗಿ ಪೊಲೀಸರನ್ನು ಕರೆದೊಯ್ಯುತ್ತಿದ್ದ ಶಿಕ್ಷಣ ಇಲಾಖೆ ವಾಹನ ಪಲ್ಟಿಯಾಗಿರುವ ಘಟನೆ ಹನೂರು ತಾಲೂಕಿನ ಆನೆ ತಲೆದಿಂಬದಲ್ಲಿ ನಡೆದಿದೆ.

ಅದೃಷ್ಟವಶಾತ್ ವಾಹನದಲ್ಲಿದ್ದ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿ ಘಟನೆ ಸಂಭವಿಸಿದ್ದು, ಡ್ರೈವರ್ ಗುರುಕಿರಣ್​ಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಲೆ ಮಹದೇಶ್ವರ ಬೆಟ್ಟಕ್ಕೆ ಸಿಎಂ ಬಿಎಸ್​ವೈ ಎರಡು ದಿನಗಳ ಕಾಲ ಪ್ರವಾಸ ಕೈಗೊಂಡಿದ್ದು, ಹಲವು ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. 

Last Updated : Nov 25, 2020, 1:40 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.