ETV Bharat / state

ರಾಮನ ಬಾಣಕ್ಕೆ ಎರಡು ಹೋಳಾದ ಬೆಟ್ಟ: ಇಲ್ಲಿ ಶ್ರೀರಾಮನ ಪಾದವೇ ದೇಗುಲ! - ಚಾಮರಾಜನಗರ ಸುದ್ದಿ

ತಮಿಳುನಾಡಿನ ತಾಳವಾಡಿ ತಾಲೂಕಿನ‌ ರಾಮಪುರ ಸಮೀಪದ ಅರಣ್ಯದ ನಡುವೆ ರಾಮರಪಾದ ಎಂಬ ದೇಗುಲವಿದೆ. ರಾಮನು ವನವಾಸದ ವೇಳೆ ಇಲ್ಲಿ ತಂಗಿದ್ದಾಗ ಬಾಣ ಹೂಡಿ ರಕ್ಕಸನನ್ನು ಕೊಂದಿದ್ದ ಎಂಬುದು ಪ್ರತೀತಿ.

ramapada
ರಾಮಪಾದ
author img

By

Published : Aug 6, 2020, 4:13 AM IST

ಚಾಮರಾಜನಗರ: ಹಿಂದೂಗಳ‌ ಬಹುಕಾಲದ ಮಂದಿರದ ಕನಸು ಬುಧವಾರ ಕಾರ್ಯರೂಪಕ್ಕೆ ಬಂದ ಹೊತ್ತಿನಲ್ಲಿ ರಾಮನ ಪಾದಕ್ಕೆ ನಿತ್ಯಪೂಜೆ ನಡೆಯುವ ಸ್ಥಳವೊಂದರ ಕುರಿತ ವರದಿ‌ ಇಲ್ಲಿದೆ.

ತಮಿಳುನಾಡಿನ ತಾಳವಾಡಿ ತಾಲೂಕಿನ‌ ರಾಮಪುರ ಸಮೀಪದ ಅರಣ್ಯದ ನಡುವೆ ರಾಮರಪಾದ ಎಂಬ ದೇಗುಲವಿದೆ. ರಾಮನು ವನವಾಸದ ವೇಳೆ ಇಲ್ಲಿ ತಂಗಿದ್ದಾಗ ಬಾಣ ಹೂಡಿ ರಕ್ಕಸನನ್ನು ಕೊಂದಿದ್ದ ಎಂಬುದು ಪ್ರತೀತಿ.

ರಾಮಪುರದಲ್ಲಿ ಶ್ರೀರಾಮನ ಪಾದದ ದೇಗುಲ

ಶ್ರೀರಾಮ ಚಂದ್ರ ತನ್ನ ವನವಾಸ ಕಾಲದಲ್ಲಿ ಒಂದು ದಿನ ಅಲ್ಲಿ ತಂಗಿ ಹೊರಡುವ ವೇಳೆ ಎದುರಾದ ತಲ ಎಂಬ ರಾಕ್ಷಸನನ್ನು ಸಂಹಾರಿಸಲು ಹೂಡಿದ ಬಾಣ, ಆತನ ತಲೆಯನ್ನ ಹೊತ್ತು ಹೋಗುವಾಗ ಅಡ್ಡ ಸಿಕ್ಕ ಬೆಟ್ಟವನ್ನ ಸೀಳಿದೆ ಎನ್ನುವುದು ಭಕ್ತರ ನಂಬಿಕೆಯಾಗಿದೆ. ಪುರಾಣದಲ್ಲಿ ಕೇಳಿಬಂದಂತೆ ಇಲ್ಲಿನ ಬೆಟ್ಟದ ಮಧ್ಯದ ಭಾಗ ಕತ್ತರಿಸಿದಂತೆ ಇದೆ. ಬಿಲ್ಲು ಹೂಡುವಾಗ ನೆಲಕ್ಕೆ ಮಂಡಿಯೂರಿದ ಕುರುಹಾಗಿ ಇಂದಿಗೂ ಅಲ್ಲಿ ಕಪ್ಪು ಶಿಲೆಯೊಂದರಲ್ಲಿ ಕುಳಿ ಬಿದ್ದಿದ್ದು ಈ ರಾಮರಪಾದಕ್ಕೆ ನಿತ್ಯ ಮತ್ತು ಅಗ್ರಪೂಜೆ ನಡೆಯುತ್ತದೆ.

rama banam
ರಾಮಬಾಣ

ಶನಿವಾರ ಮತ್ತು ವಿಶೇಷ ದಿನಗಳಲ್ಲಿ ಇಲ್ಲಿ ಪೂಜೆ ನಡೆಯುತ್ತಿದ್ದು, ವಿವಿಧ ಭಾಗಗಳಿಂದ ರಾಮ ಭಕ್ತರು ಆಗಮಿಸುತ್ತಾರೆ. ವಿಶೇಷವೆಂದರೇ ರಾಮ ಸೀತೆಯ ಪ್ರತಿಮೆಗೆ ಪೂಜೆ ಸಲ್ಲಿಸಿ ಕಾರ್ಯ ಸಿದ್ದಿಗಾಗಿ ವರ ಬೇಡಿದರೇ ಆತ ನೀಡುತ್ತಾನೆ ಎನ್ನುವುದು ಭಕ್ತರ ನಂಬಿಕೆ. ಮಕ್ಕಳಾಗದೇ ಇರುವವರು ಸಂತನಾ ಭಾಗ್ಯಕ್ಕೆ ಇಲ್ಲಿ ಬಂದು ವರ ಬೇಡುತ್ತಾರೆ ಎನ್ನುತ್ತಾರೆ ದೊಡ್ಡಪುರ ಗ್ರಾಮದ ನಿವೃತ್ತ ಶಿಕ್ಷಕ ರಂಗರಾಜು.

ramapada
ರಾಮಪಾದ

ರಾಮ ಬಿಟ್ಟ ಬಾಣಕ್ಕೆ ಎರಡಾದ ಬೆಟ್ಟ ಇಂದಿಗೂ ರಾಮನ ಕಿಂಡಿ ಎಂದೇ ಹೆಸರಾಗಿದೆ. ಬಲ ಬಿಟ್ಟ ಸ್ಥಳವನ್ನ ರಾಮರ ಪಾದವೆಂತಲೂ ಕರೆಯುತ್ತಾರೆ. ಸ್ಥಳ ಪುರಾಣದ ಬಗ್ಗೆ ಹೇಳುವ ತಾಳವಾಡಿ ಭಾಗದ ಜನ ತಮ್ಮ ಬೇಕು ಬೇಡಗಳಿಗಾಗಿ ರಾಮರ ಪಾದಕ್ಕೆ ಬೇಟಿ ಕೊಟ್ಟು ಪೂಜೆ ಸಲ್ಲಿಸುತ್ತಾರೆ. ಕಾಡಿನ ನಡುವೆ ಇರುವ ರಾಮರ ಪಾದದ ಕುರುಹು ಈ ಭಾಗದ ಜನರಿಗೆ ಬಲವಾದ ನಂಬಿಕೆಗೆ ಕಾರಣವಾಗಿದೆ. ಪ್ರತಿ ಶನಿವಾರ, ರಾಮನವಮಿ ಸೇರಿದಂತೆ ಅಮಾವಾಸ್ಯೆ, ಹುಣ್ಣಿಮೆ ದಿನಗಳು ಇಲ್ಲಿನ ವಿಶೇಷ ದಿನವಾಗಿದೆ. ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರ ಬಂದು ಹೋದ ಈ ಕುರುಹು ಈಗ ಆಕರ್ಷಣೆಯ ಕೇಂದ್ರಬಿಂದುವೂ ಆಗಿದೆ.

ಆನೆಗಳು ಹಾಗೂ ಹುಲಿ ಸಂಚಾರ ಇಲ್ಲಿ ಸಾಮಾನ್ಯವಾಗಿರುವುದರಿಂದ ಏಕಾಂಗಿಯಾಗಿ ತೆರಳಲು ಮತ್ತು ಮುಂಜಾನೆ ಹಾಗೂ ಸಂಜೆ 4ರ ಬಳಿಕ ದೇಗುಲ ಭೇಟಿ ಅಪಾಯಕಾರಿಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.