ETV Bharat / state

ಬಿಳಿಗಿರಿರಂಗನ ಬೆಟ್ಟದಲ್ಲಿ ಪತ್ತೆಯಾದ ಹೊಸ ಕೀಟಕ್ಕೆ 'ಸೋಲಿಗ' ನಾಮಕರಣ - etv bharat kannada

ಬಿಳಿಗಿರಿರಂಗನ‌ ಬೆಟ್ಟದಲ್ಲಿ ಹೊಸ ಬಗೆಯ ಕೀಟ ಪತ್ತೆಯಾಗಿದೆ. ಜೀವ ವೈವಿಧ್ಯತೆಗೆ ಸಾಕ್ಷಿಯಾಗಿರುವ ಸಮುದಾಯದ ಹೆಸರಾದ ಸೋಲಿಗ ಎಂದು ಅದಕ್ಕೆ ಹೆಸರಿಡಲಾಗಿದೆ.

new insect was discovered
ಬಿಳಿಗಿರಿರಂಗನ ಬೆಟ್ಟದಲ್ಲಿ ಹೊಸ ಕೀಟ ಪತ್ತೆ: ಕೀಟಕ್ಕೆ ಸೋಲಿಗ ಎಂದು ನಾಮಕರಣ..
author img

By

Published : Feb 1, 2023, 10:06 PM IST

ಚಾಮರಾಜನಗರ: ದಕ್ಷಿಣ ಭಾರತದಲ್ಲಿ ಇದೇ ಮೊದಲ ಬಾರಿಗೆ ಹೊಸ ಬಗೆಯ 'ಕಣಜ'(ಕಡಜ)ವು ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ‌ ಬಿಳಿಗಿರಿರಂಗನ‌ ಬೆಟ್ಟದಲ್ಲಿ ಕಂಡುಬಂದಿದೆ. ಏಟ್ರಿಯ ಕೀಟ ಶಾಸ್ತ್ರಜ್ಞರಾದ ಡಾ.ಎ.ಪಿ.ರಂಜನ್ ಹಾಗೂ ಡಾ.ಪ್ರಿಯದರ್ಶನ್ ಧರ್ಮರಾಜನ್ ಎಂಬವರು ಹೊಸ ಬಗೆಯ ಪರವಾಲಂಬಿ ಕಣಜ (Parasitoid Wasp) ಪತ್ತೆ ಹಚ್ಚಿ, ಯುರೋಪಿಯನ್ ಜರ್ನಲ್ ಆಫ್ ಟ್ಯಾಕ್ಸಾನಮಿಯಲ್ಲಿ ಪ್ರಕಟಿಸಿದ್ದಾರೆ.

ಪತ್ತೆಯಾಗಿರುವ ಕೀಟ ಆಕರ್ಷಕ, ವರ್ಣರಂಜಿತವಾಗಿದ್ದು ಸಂಬಂಧಿತ ಕೀಟಗಳಿಗಿಂತ ಭಿನ್ನವಾಗಿದೆ. ಹೊಸ ಪರಾವಲಂಬಿ ಕಣಜವು ಡಾರ್ವಿನ್​ನ‌ ಪರವಾಲಂಬಿ ಕಣಜಗಳ‌ ಉಪಕುಟುಂಬ ಮೆಟೊಪಿನೆಗೆ ಸೇರಿದೆ. ಈ ಉಪಕುಟುಂಬದ ಕೇವಲ ಎರಡು ತಳಿಗಳು ಮಾತ್ರ ಭಾರತದಲ್ಲಿ ಪತ್ತೆಯಾಗಿದ್ದು, ದಕ್ಷಿಣ ಭಾರತದಲ್ಲಿ ಪತ್ತೆಯಾದ ಮೊದಲ ಕೀಟ ಎಂದು ಕೀಟಶಾಶ್ತ್ರಜ್ಞರು ತಿಳಿಸಿದ್ದಾರೆ.

ಪತ್ತೆಯಾದ ಈ ಕಣಜದ ತಳಿಗೆ, ಕಾಡಿನ ಜೀವ ವೈವಿಧ್ಯತೆಗೆ ಸೋಲಿಗ ಸಮುದಾಯ ಸಾಕ್ಷಿಯಾಗಿದ್ದು ಮತ್ತು ಕಾಡಿನ ಬಗ್ಗೆ ಅವರಿಗೆ ಇರುವ ಜವಾಬ್ದಾರಿಗೆ ಉಡುಗೊರೆಯಾಗಿ ಸೋಲಿಗ ಎಂದು ಹೆಸರಿಡಲಾಗಿದೆ. ಹೊಸ ಜೀನಸ್‌ಗೆ 'ಸೋಲಿಗ' ಹಾಗೂ ಸ್ಪೀಸಸ್ ಗೆ ಎಕಾರಿನಾಟಾ ಸೋಲಿಗ (SOLIGA ekrinata) ಎಂದು ಕರೆಯಲಾಗಿದೆ.

ಬಿಳಿಗಿರಿರಂಗನ ಬೆಟ್ಟವು ಪೂರ್ವ ಮತ್ತು ಪಶ್ಚಿಮ ಘಟ್ಟಗಳ ಸಂಗಮದಲ್ಲಿದ್ದು ತಪ್ಪಲಿನಲ್ಲಿ ಕುರುಚಲು ಕಾಡು, ಒಣ ಎಲೆ ಉದುರುವ ಕಾಡು, ತೇವಾಂಶ ಎಲೆ ಉದುರುವ ಕಾಡು, ನಿತ್ಯ ಹರಿದ್ವರ್ಣ, ಶೋಲಾ ಕಾಡು ಹಾಗೂ ಹುಲ್ಲುಗಾವಲಿರುವ ವೈವಿಧ್ಯಮಯ ಭೌಗೋಳಿಕ ಪರಿಸರ ಹೊಂದಿರುವ ಕಾರಣ ಜೈವಿಕ ವೈವಿಧ್ಯತೆಯ ಶ್ರೀಮಂತಿಕೆ ಈ ಅರಣ್ಯದಲ್ಲಿದೆ. ನೂರಾರು ಜಾತಿಯ ಸಸ್ಯವರ್ಗವಿದ್ದು 120 ಜಾತಿಯ ಇರುವೆಗಳು, 120 ಜಾತಿಯ ಚಿಟ್ಟೆಗಳು, 105 ಜಾತಿಯ ಸಗಣಿ ಜೀರುಂಡೆಗಳು ಬಿಳಿಗಿರಿ ಕಾಡಿನಿಂದಲೇ ಜಗತ್ತಿಗೆ ಪರಿಚಿತಗೊಂಡಿದೆ.‌ ಕಳೆದ 1 ವರ್ಷದಲ್ಲಿ 10 ಜಾತಿಯ ಕೀಟಗಳು ಬಿಳಿಗಿರಿರಂಗನ ಬೆಟ್ಟದಲ್ಲಿ ಕಾಣಸಿಕ್ಕಿವೆ. ಕೆಲವು ತಿಂಗಳುಗಳ ಹಿಂದೆಯಷ್ಟೇ ಹೊಸ ಜಾತಿಯ ಹಲ್ಲಿಯೂ ಕೂಡ ಪತ್ತೆಯಾಗಿತ್ತು. 11 ವರ್ಷಗಳ ಬಳಿಕ ನಡೆದ ಹಕ್ಕಿ ಗಣತಿಯಲ್ಲಿ 274 ಜಾತಿಯ ಪಕ್ಷಿಗಳನ್ನು ಗುರುತು ಮಾಡಲಾಗಿದ್ದು ವೈವಿಧ್ಯಮಯ ಪರಿಸರದ ಈ ಕಾಡು ಕರ್ನಾಟಕಕ್ಕೆ ಕಳಸಪ್ರಾಯವಾಗಿದೆ.

ಕಳೆದ ವರ್ಷ ಪತ್ತೆಯಾಗಿತ್ತು ಹೊಸ ಹಲ್ಲಿ ಪ್ರಭೇದ: ಕಳೆದ ವರ್ಷ ಸೆಪ್ಟೆಂಬರ್​ನಲ್ಲಿ ಬಿಳಿಗಿರಿರಂಗ ಬೆಟ್ಟದಲ್ಲಿರುವ ಏಟ್ರೀ (ಅಶೋಕ ಟ್ರಸ್ಟ್ ಫಾರ್ ರಿಸರ್ಚ್ ಇನ್ ಇಕಾಲಜಿ ಅಂಡ್ ದಿ ಎನ್ವಿರಾನ್ಮೆಂಟ್) ಸಂಶೋಧಕ ಡಾ. ಎನ್.ಎ.ಅರವಿಂದ್ ಮತ್ತು ಸಂಶೋಧನಾ ವಿದ್ಯಾರ್ಥಿ ಸೂರ್ಯನಾರಾಯಣನ್ ಈ ಹೊಸ ಹಲ್ಲಿ ಪ್ರಭೇದವನ್ನು ಪತ್ತೆ ಹಚ್ಚಿದ್ದರು. ಅಧ್ಯಯನ ನಡೆಸಿ ಅದನ್ನು ‘ಕುಬ್ಜ ಹಲ್ಲಿ’ ಎಂದು ಗುರುತಿಸಿದ್ದರು.

ಪತ್ತೆಯಾದ ಹಲ್ಲಿಯು 2.57 CM ನಷ್ಟು ಉದ್ದವಿದ್ದು, ಗಂಡು ಹಲ್ಲಿಯ ದೇಹ ಕಂದು ಬಣ್ಣದಿಂದಿದ್ದು ಬಾಲ ಕಪ್ಪಾಗಿದೆ. ಹೆಣ್ಣು ಹಲ್ಲಿಯು ಪೂರ್ತಿಯಾಗಿ ಕಂದು ಬಣ್ಣದಿಂದ ಕೂಡಿದೆ. ನಿವೃತ್ತ ಪ್ರಾಧ್ಯಾಪಕ ಡಾ.ಉಮಾಶಂಕರ್ ಅವರ ಹೆಸರನ್ನು ಹಲ್ಲಿ ಪ್ರಬೇಧಕ್ಕೆ ಸೇರಿಸಿದ್ದು, ಉಮಾಶಂಕರ್ ಕುಬ್ಜ ಹಲ್ಲಿ (Umashankar's dwarf gecko) ಎಂದು ಕರೆಯಲಾಗಿದೆ.

ಇದನ್ನೂ ಓದಿ:11 ವರ್ಷಗಳ ಬಳಿಕ ಹಕ್ಕಿ ಗಣತಿ: ಬಿಳಿಗಿರಿ ಬನದಲ್ಲಿ 274 ಪಕ್ಷಿ ಗುರುತು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.