ETV Bharat / state

ಅನೈತಿಕ ಸಂಬಂಧಕ್ಕೆ ಒತ್ತಾಯಿಸಿ ಮಹಿಳೆ‌ ಮೇಲೆ ಹಲ್ಲೆ ಯತ್ನ: ಕೊಳ್ಳೇಗಾಲದಲ್ಲಿ ಆರೋಪಿ ಬಂಧನ - a man arrested on attempt to assault on a woman at kollegala

ಆಗಿಂದಾಗ್ಗೆ ಕಿರುಕುಳ ನೀಡುವ ನಟರಾಜು ವಿರುದ್ಧ ಕ್ರಮ ಕೈಗೊಂಡು, ತನಗೆ ರಕ್ಷಣೆ ನೀಡಿ ಎಂದು ಮಹಿಳೆ ನೀಡಿದ ದೂರಿನ ಮೇರೆಗೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.

nataraju
ನಟರಾಜು
author img

By

Published : Jan 9, 2022, 10:06 PM IST

ಕೊಳ್ಳೇಗಾಲ(ಚಾಮರಾಜನಗರ): ಮಹಿಳೆಯೋರ್ವಳಿಗೆ ತನ್ನ ಜೊತೆ ಅನೈತಿಕ ಸಂಬಂಧ ಬೆಳೆಸುವಂತೆ ಒತ್ತಾಯಿಸಿ ಮಾರಣಾಂತಿಕ ಹಲ್ಲೆಗೆ ಮುಂದಾದ ವ್ಯಕ್ತಿಯನ್ನು ಗ್ರಾಮಾಂತರ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

ತಾಲೂಕಿನ ಶಿವನಸಮುದ್ರ ಗ್ರಾಮದ ನಟರಾಜು ಬಂಧಿತ ಆರೋಪಿ. ಈತ ಅದೇ ಗ್ರಾಮದ ಮಹಿಳೆಯೊಬ್ಬಳ ಮನೆಗೆ ಜ. 7 ರಂದು ರಾತ್ರಿ 10 ಗಂಟೆ ಸಮಯದಲ್ಲಿ‌ ಕೈಯಲ್ಲಿ ಮಚ್ಚು ಹಿಡಿದುಕೊಂಡು ಹೋಗಿ ಕೊಲೆ ಮಾಡಲು‌‌ ಯತ್ನಿಸಿದ್ದಲ್ಲದೆ ಜುಟ್ಟು ಹಿಡಿದು ಎಳೆದಾಡಿ ಅವಾಚ್ಯ ಶಬ್ದದಿಂದ ನಿಂದಿಸಿದ್ದಾನೆ. ಅಲ್ಲದೇ, ಆಕೆಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಳ್ಳುವುದಾಗಿ ತಿಳಿಸಿ, ತನ್ನನ್ನು ಬಿಟ್ಟು ಎಲ್ಲೂ ಹೋಗಬಾರದೆಂದು ಅವಾಜ್​ ಹಾಕಿದ್ದ ಎನ್ನಲಾಗ್ತಿದೆ.

ಗಲಾಟೆಯಲ್ಲಿ ಆರೋಪಿ‌ ನಟರಾಜು ಮಹಿಳೆ ಮೇಲೆ ಮಚ್ಚಿನಿಂದ ಹಲ್ಲೆಗೆ ಯತ್ನಿಸಿದಾಗ ಪಕ್ಕದಲ್ಲಿ‌ದ್ದ ಆಕೆಯ ಮಗಳು ರಕ್ಷಿಸಿದ್ದಾಳೆ. ಈ ಸಂದರ್ಭದಲ್ಲಿ ಆಕೆಯೂ ಗಾಯಗೊಂಡಿದ್ದಾಳೆ. ಈ ಹಿನ್ನೆಲೆ ಆಗಿಂದಾಗ್ಗೆ ತಮಗೆ ಕಿರುಕುಳ ನೀಡುವ ನಟರಾಜು ವಿರುದ್ಧ ಕ್ರಮಕೈಗೊಂಡು ರಕ್ಷಣೆ ನೀಡಿ ಎಂದು ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.

ಓದಿ: Video-ಶೋಕಿಗಾಗಿ ಐಷಾರಾಮಿ ಬೈಕ್ ಕಳ್ಳತನ: ಪೆಟ್ರೋಲ್​ ಖಾಲಿಯಾಗುತನಕ ಓಡಾಟ, ನಂತ್ರ?

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.