ETV Bharat / state

ಕಿರುಕುಳಕ್ಕೆ ಬೇಸತ್ತು ಗೃಹಿಣಿ ಆತ್ಮಹತ್ಯೆ : ಪಿಡಿಒ ಬಂಧನ - suicidein chamarajanagar

ವರದಕ್ಷಿಣಿ ಹಿಂಸೆ ಹಾಗೂ ಶೀಲ ಶಂಕಿಸುತ್ತಿದ್ದ ಪತಿಯ ಕಿರುಕುಳ ತಡೆಯಲಾಗದೇ ವಾಸವಿದ್ದ ಮನೆಯ ಕೊಠಡಿಯಲ್ಲಿ ವಿದ್ಯಾಶ್ರೀ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

Suicide of a housewife
ಕಿರುಕುಳಕ್ಕೆ ಬೇಸತ್ತು ಗೃಹಿಣಿ ಆತ್ಮಹತ್ಯೆ : ಪಿಡಿಒ ಬಂಧನ
author img

By

Published : Mar 15, 2022, 3:58 PM IST

ಚಾಮರಾಜನಗರ: ವರದಕ್ಷಿಣಿ ಹಿಂಸೆ ಹಾಗೂ ಶೀಲ ಶಂಕಿಸುತ್ತಿದ್ದ ಪತಿಯ ಕಿರುಕುಳಕ್ಕೆ ಬೇಸತ್ತು ಗೃಹಿಣಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಳ್ಳೇಗಾಲದ ಬಸ್ತೀಪುರದಲ್ಲಿ ನಡೆದಿದೆ. ಹನೂರು ಗ್ರಾ.ಪಂ.ನಲ್ಲಿ ಪಿಡಿಒ ಆಗಿರುವ ಆನಂದ್ ಕಾಂಬ್ಳೆ ಪತ್ನಿ ವಿದ್ಯಾಶ್ರೀ ಆತ್ಮಹತ್ಯೆಗೆ ಶರಣಾಗಿರುವ ಗೃಹಿಣಿ.

ಕಿರುಕುಳಕ್ಕೆ ಬೇಸತ್ತು ಗೃಹಿಣಿ ಆತ್ಮಹತ್ಯೆ : ಪಿಡಿಒ ಬಂಧನ

ವಿದ್ಯಾಶ್ರೀ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನವಳಾಗಿದ್ದು ಮೂರು ವರ್ಷದ ಹಿಂದೆ ಅದೇ ಜಿಲ್ಲೆಯ ಪಿಡಿಒ ಆನಂದ್ ಕಾಂಬ್ಳೆ ಅವರನ್ನು ವಿವಾಹವಾಗಿದ್ದರು. ಆನಂದ್ ಕಾಂಬ್ಳೆ ಹನೂರು ತಾಲೂಕಿನ ಶಾಗ್ಯ ಗ್ರಾಮ ಪಂಚಾಯತ್​ ಪಿಡಿಒ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಈ ದಂಪತಿ ಕೊಳ್ಳೇಗಾಲ ಸಮೀಪದ ಬಸ್ತೀಪುರದ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದು, ನಿನ್ನೆ ವಿದ್ಯಾಶ್ರೀ ಮನೆಯ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

Suicide of a housewife
ವಿದ್ಯಾಶ್ರೀ

ಈ ಬಗ್ಗೆ ವಿದ್ಯಾಶ್ರೀ ತಂದೆ ಚಿದಾನಂದ ಕಾಂಬ್ಳೆ ಮಾತನಾಡಿ, ನನ್ನ ಅಳಿಯ ಆನಂದ್ ಕಾಂಬ್ಳೆ ನನ್ನ ಮಗಳಿಗೆ ವರದಕ್ಷಿಣೆ ಹಿಂಸೆ ಹಾಗೂ ಶೀಲ‌ ಶಂಕಿಸಿ ಕಿರುಕುಳ ನೀಡುತ್ತಿದ್ದ. ಗಂಡನ ಹಿಂಸೆ ತಾಳದೆ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಿದ್ದಾರೆ.

ಸ್ಥಳಕ್ಕೆ ಡಿವೈಎಸ್​ಪಿ ನಾಗರಾಜು ಹಾಗೂ ಸಕ೯ಲ್ ಇನ್ಸ್ ಪೆಕ್ಟರ್ ಮುಧೋಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತಳ ತಂದೆ ಚಿದಾನಂದ ಕಾಂಬ್ಳೆ ನೀಡಿದ ದೂರಿನನ್ವಯ ಪಿ.ಡಿ.ಓ ಆನಂದ್ ಕಾಂಬ್ಳೆ ಹಾಗೂ ಅತನ ತಂದೆ ಶ್ಯಾಮ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ಯುವಕನಿಂದ ಮೋಸಕ್ಕೊಳಗಾಗಿ ಮಗುವಿಗೆ ತಾಯಿಯಾದ 11 ವರ್ಷದ ಬಾಲಕಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.