ಚಾಮರಾಜನಗರ: ಕೆಳಗೆಲ್ಲೂ ಜಾಗ ಸರಿಯಿಲ್ಲವೆಂದು ಮನೆ ಛಾವಣಿ ಹತ್ತಿದ್ದ ಕಳ್ಳನನ್ನು ಕೊನೆಗೂ ಸೆರೆ ಹಿಡಿದು ಕಾಡಿಗೆ ಬಿಟ್ಟಿರುವ ಘಟನೆ ಹನೂರಿನಲ್ಲಿ ನಡೆದಿದೆ.
ಹನೂರು ಪಟ್ಟಣದ ಅಂಬೇಡ್ಕರ್ ಕಾಲೊನಿಯ ರಮೇಶ್ ಎಂಬವವರು, ಸರಸರ ಎಂದು ಸದ್ದಾಗುತ್ತಿದ್ದನ್ನು ಗಮನಿಸಿ ಮೇಲೆ ನೋಡಿದಾಗ ಬರೋಬ್ಬರಿ ಆರು ಅಡಿ ಉದ್ದದ ಕೇರೆ ಹಾವು ಕಂಡು ಹೌಹಾರಿದ್ದಾರೆ. ಕೂಡಲೇ ಅರಣ್ಯ ಇಲಾಖೆಗೆ ಈ ವಿಷಯ ತಿಳಿಸಿದ್ದು, ಅರಣ್ಯ ಇಲಾಖೆಯಲ್ಲಿ ಚಾಲಕರಾಗಿರುವ ಉರಗ ಪ್ರೇಮಿ ಪ್ರಭು ಕೂಡಲೇ ಸ್ಥಳಕ್ಕೆ ದೌಡಾಯಿಸಿ ಮನೆ ಮೇಲೇರಿದ್ದ ಖದೀಮನನ್ನು ಸೆರೆ ಹಿಡಿದು ರಕ್ಷಿಸಿದ್ದಾರೆ.
ಬರೋಬ್ಬರಿ 6 ಅಡಿ ಉದ್ದದ ಕೇರೆ ಹಾವು ಮನೆ ಛಾವಣಿಯನ್ನು ಹೇಗೆ ಏರಿತು ಎಂಬುದೇ ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ.