ಚಾಮರಾಜನಗರ: 8 ಅಡಿ ಉದ್ದದ ಹೆಬ್ಬಾವನ್ನು ರಕ್ಷಿಸಿ ಕಾಡಿಗೆ ಬಿಟ್ಟಿರುವ ಘಟನೆ ಚಾಮರಾಜನಗರ ತಾಲೂಕಿನ ಜ್ಯೋತಿಗೌಡನಪುರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರಾಜೇಶ್ ಎಂಬುವವರ ಜಮೀನಿನಲ್ಲಿ ಈ ಘಟನೆ ನಡೆದಿದ್ದು, ಹಾಗಲಕಾಯಿ ಕೀಳುತ್ತಿದ್ದ ವೇಳೆ ಕಾಲು ಜಾರಿ ನೆಲದ ಮೇಲೆ ರೈತ ಬಿದ್ದಿದ್ದಾನೆ. ತಕ್ಷಣ ನೆಲ ನೋಡಿದಾಗ ತಾನು ಹೆಬ್ಬಾವಿನ ಮೇಲೆ ನಿಂತಿರುವುದನ್ನು ಕಂಡು ಗಾಬರಿಗೊಂಡಿದ್ದಾರೆ. ಕೂಡಲೇ ಸ್ಥಳೀಯರಿಗೆ ರೈತ ಮಾಹಿತಿ ನೀಡಿದ್ದು, ಕೂಡಲೇ ಸ್ಥಳಕ್ಕಾಗಮಿಸಿದ ಉರಗಪ್ರೇಮಿ ಸ್ನೇಕ್ ಚಾಂಪ್ ಹಾವನ್ನು ರಕ್ಷಿಸಿ ಕೆ.ಗುಡಿ ಅರಣ್ಯಕ್ಕೆ ಬಿಟ್ಟಿದ್ದಾರೆ.
ಈ ಹೆಬ್ಬಾವು ಅಂದಾಜು 8 ಅಡಿ ಉದ್ದದ ಭಾರಿ ಗಾತ್ರ ಹೊಂದಿದ್ದು, ಒಂದು ತಿಂಗಳ ಹಿಂದೆಯಷ್ಟೇ ಇವರ ಜಮೀನಿನಲ್ಲಿ ನವಿಲನ್ನು ನುಂಗಿತ್ತು ಎಂದು ತಿಳಿದು ಬಂದಿದೆ.