ಚಾಮರಾಜನಗರ : ಕಾಡು ಹಾದಿಯಲ್ಲಿ ಪ್ರತ್ಯಕ್ಷವಾದ ಆನೆಗಳು ಒಂದು ತಾಸು ಸಫಾರಿ ಜೀಪನ್ನು ಅಡ್ಡ ಹಾಕಿದ್ದ ಘಟನೆ ಚಾಮರಾಜನಗರದ ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶದ ಕೆ.ಗುಡಿ ಸಫಾರಿಯಲ್ಲಿ ನಡೆದಿದೆ.
ಇಂದು ಬೆಳಗ್ಗಿನ ಜಂಗಲ್ ಲಾಡ್ಜ್ ಸಫಾರಿಯಲ್ಲಿ ಸ್ಥಳದಲ್ಲಿ ಎರಡು ಮರಿಯಾನೆಗಳು, ಮೂರು ದೊಡ್ಡ ಆನೆಗಳು ಸಫಾರಿಗೆ ಬಂದಿದ್ದ ವಾಹನಕ್ಕೆ ದಾರಿ ಕೊಡದೇ ಒಂದು ತಾಸು ರಸ್ತೆ ಮಧ್ಯದಲ್ಲೇ ನಿಂತು ಪ್ರವಾಸಿಗರಿಗೆ ದರ್ಶನ ಕೊಟ್ಟಿವೆ.
ಇದನ್ನೂ ಓದಿ: ಉತ್ತರಕನ್ನಡಕ್ಕೆ ಬರುವ ಪ್ರವಾಸಿಗರಿಗೆ ಪ್ರವಾಸಿ ತಾಣಗಳ ಸಮಗ್ರ ಮಾಹಿತಿ ನೀಡಲಿದೆ ಈ ವೆಬ್ಸೈಟ್..
ಜನರನ್ನು ಕಂಡರೆ ಆನೆ ದಾಳಿ ಮಾಡಲು ಮಂದಾಗುವುದು, ಜೀಪನ್ನು ಕೆಡವಲು ಪ್ರಯತ್ನ ಮಾಡುತ್ತವೆ. ಆದರೆ, ಈ ಗಜಪಡೆ ಮಾತ್ರ ಸಫಾರಿ ವಾಹನ ಕಂಡು ಬಂದರೂ ಏನೂ ಮಾಡದೇ ಸೌಮ್ಯವಾಗಿ ನಡೆದುಕೊಂಡಿವೆ.
ಈ ವೇಳೆ ಪ್ರವಾಸಿಗರು ವಿಡಿಯೋ ಮಾಡಿ, ಫೋಟೋ ಕ್ಲಿಕ್ಕಿಸಿ ಸಂಭ್ರಮಿಸಿದ್ದಾರೆ. ಕೆ.ಗುಡಿಯಲ್ಲಿ ಈ ಹಿಂದೆ ಇದೇ ರೀತಿ ಆನೆಗಳು ಸಫಾರಿ ಜೀಪಿಗೆ ಅಡ್ಡಗಟ್ಟಿ ತೊಂದರೆ ಉಂಟು ಮಾಡಿದ್ದವು.
ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ