ETV Bharat / state

ಕೊಳ್ಳೇಗಾಲದಲ್ಲಿ ಮುಂದುವರೆದ ಕೊರೊನಾ ಅಟ್ಟಹಾಸ: ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ 4 ಮಂದಿ ದಾಖಲು - Kollegala corona updates

ನಾಲ್ವರಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಸೋಂಕಿತರನ್ನು ಅಂಬ್ಯುಲೆನ್ಸ್ ಮೂಲಕ ಜಿಲ್ಲಾ ಕೋವಿಡ್ ಐಸಿಯು ಘಟಕಕ್ಕೆ ರವಾನಿಸಲಾಗಿದ್ದು, ಸೋಂಕಿತರಿದ್ದ ಬಡಾವಣೆಗಳನ್ನು ಔಷಧಿ ಸಿಂಪಡಿಸುವ ಮೂಲಕ ಸ್ವಚ್ಛಗೊಳಿಸಿ, ಸಿಲ್ ಡೌನ್ ಮಾಡಲಾಗಿದೆ.

Kollegala corona case
Kollegala corona case
author img

By

Published : Jun 27, 2020, 11:38 PM IST

ಕೊಳ್ಳೇಗಾಲ( ಚಾ. ನಗರ) : ಇಂದು ನಾಲ್ವರಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಸದ್ಯ ಅವರನ್ನು ಕೋವಿಡ್ ಐಸಿಯು ಘಟಕಕ್ಕೆ ರವಾನಿಸಲಾಗಿದೆ.

ತಮಿಳುನಾಡಿನ ಮಧುರೈಗೆ ಕೆಲಸದ ನಿಮ್ಮಿತ್ತ ಹೋಗಿ ಬಂದಿದ್ದ ಆರ್.ಎಂ ಚೌಟ್ರಿ ಸಮೀಪದ ನಿವಾಸಿ 29 ವರ್ಷದ ಯುವಕ, ನೂರ್ ಮೋಹಾಲ್ಲಾ 6ನೇ ಕ್ರಾಸ್ ನ ಹೋಮ್ ಕ್ವಾರೆಂಟೈನ್ ನಲ್ಲಿದ್ದ ತನ್ನ ಅಜ್ಜಿ ಮನೆಗೆಂದು ಪೋಷಕರ ಜೊತೆ ಬೆಂಗಳೂರಿನಿಂದ ಆಗಮಿಸಿದ್ದ 18 ವರ್ಷದ ಯುವತಿ, ಬೆಂಗಳೂರಿನಿಂದ ಬೂದಿತಿಟ್ಟು ಬಡಾವಣೆಗೆ ತನ್ನ ಭಾವನ ಮನೆಗೆ ಆಗಮಿಸಿದ್ದ ಇಬ್ಬರು ಅಕ್ಕ-ತಂಗಿಯರಲ್ಲಿ ಸೋಂಕು ಕಾಣಿಸಿಕೊಂಡಿದೆ.

ಈ ನಾಲ್ಕು ಕೊರೊನಾ ಸೋಂಕಿತರನ್ನು ಅಂಬ್ಯುಲೆನ್ಸ್ ಮೂಲಕ ಜಿಲ್ಲಾ ಕೋವಿಡ್ ಐಸಿಯು ಘಟಕಕ್ಕೆ ರವಾನಿಸಲಾಗಿದ್ದು, ಸೋಂಕಿತರಿದ್ದ ಬಡಾವಣೆಗಳನ್ನು ಔಷಧಿ ಸಿಂಪಡಿಸುವ ಮೂಲಕ ಸ್ವಚ್ಛಗೊಳಿಸಿ, ಸಿಲ್ ಡೌನ್ ಮಾಡಲಾಗಿದೆ.

ಸೋಂಕಿತರು ವಾಸವಿದ್ದ ಸ್ಥಳಕ್ಕೆ ತಹಶೀಲ್ದಾರ್ ಕುನಾಲ್ ಹಾಗೂ ಸರ್ಕಲ್ ಇನ್ಸ್‌ಪೆಕ್ಟರ್ ಶ್ರೀಕಾಂತ್ ಭೇಟಿ ನೀಡಿ, ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಮೂಲಕ ಧೈರ್ಯ ತುಂಬುವ ಕೆಲಸ ಮಾಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.