ಚಾಮರಾಜನಗರ: ಇಂದು ಜಿಲ್ಲೆಯಲ್ಲಿ 24 ಮಂದಿಗೆ ಕೋವಿಡ್ ತಗುಲಿರುವುದು ದೃಢಪಡುವ ಮೂಲಕ ಸೋಂಕಿತರ ಸಂಖ್ಯೆ 2039ಕ್ಕೆ ಏರಿಕೆಯಾಗಿದೆ ಮತ್ತು ಮೂವರು ಬಲಿಯಾಗಿದ್ದಾರೆ.
ಚಾಮರಾಜನಗರದ 60 ವರ್ಷದ ವ್ಯಕ್ತಿಯೊಬ್ಬರು ಸೋಂಕಿಗೊಳಗಾಗಿ ಕಳೆದ 17 ರಂದು ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕಾಳನಹುಂಡಿ ಗ್ರಾಮದ 65 ವರ್ಷದ ವೃದ್ಧೆ, ಕೊಳ್ಳೇಗಾಲದ 60 ವರ್ಷದ ವೃದ್ಧೆ ಇಂದು ಮೃತಪಟ್ಟಿದ್ದಾರೆ. ಮೂವರ ಅಂತ್ಯಸಂಸ್ಕಾರವನ್ನು ಪಿಎಫ್ಐ ಸಂಘಟನೆಯ ಕಾರ್ಯಕರ್ತರು ಗೌರವಯುತವಾಗಿ ನೆರವೇರಿಸಿದ್ದಾರೆ.
ಇನ್ನೂ 59 ಮಂದಿ ಸೋಂಕಿನಿಂದ ಗುಣಮುಖರಾಗಿ ಇಂದು ಮನೆಗೆ ಮರಳಿದ್ದು ಸಕ್ರಿಯ ಪ್ರಕರಣಗಳ ಸಂಖ್ಯೆ 456ಕ್ಕೆ ಇಳಿದಿದೆ. 207 ಮಂದಿ ಹೋಂ ಐಸೋಲೇಷನ್ ನಲ್ಲಿದ್ದು, 396 ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಮೇಲೆ ಆರೋಗ್ಯ ಇಲಾಖೆ ನಿಗಾ ಇಟ್ಟಿದೆ.
ಇಂದು ಗುಣಮುಖರಾದ 59 ಮಂದಿಯಲ್ಲಿ 11, 12, 10 ವರ್ಷದ ಮಕ್ಕಳಿದ್ದಾರೆ. 85 ವರ್ಷದ ವೃದ್ಧನೂ ಸೇರಿದಂತೆ 60 ವರ್ಷ ಮೇಲ್ಪಟ್ಟ 5 ಮಂದಿ ಮನೆಗೆ ಮರಳಿದ್ದಾರೆ.