ETV Bharat / state

ಜಲಾವೃತ ಭೀತಿಯಲ್ಲಿ ಕೊಳ್ಳೇಗಾಲದ 2 ಗ್ರಾಮಗಳು: ಮೇಕೆದಾಟು, ಭೀಮೇಶ್ವರಿಗೆ ಪ್ರವೇಶ ನಿಷೇಧ

author img

By

Published : Aug 11, 2019, 1:08 PM IST

ಕೊಳ್ಳೇಗಾಲ ತಾಲೂಕಿನಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಕೆಲವು ಗ್ರಾಮಗಳ ಗ್ರಾಮಸ್ಥರನ್ನು ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.

ಜಲಾವೃತ ಹಂತದಲ್ಲಿ ಕೊಳ್ಳೇಗಾಲದ 2 ಗ್ರಾಮಗಳು

ಚಾಮರಾಜನಗರ: ನಾಡಿದ ಜೀವನದಿ ಕಾವೇರಿ ಮೈದುಂಬಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು ಕೊಳ್ಳೇಗಾಲ ತಾಲೂಕಿನ ಹರಳೆ ಮತ್ತು ದಾಸನಪುರ ಗ್ರಾಮಗಳು ಜಲಾವೃತ ಹಂತ ತಲುಪಿವೆ.

ಜಲಾವೃತ ಹಂತದಲ್ಲಿ ಕೊಳ್ಳೇಗಾಲದ 2 ಗ್ರಾಮಗಳು

ಎರಡು ಗ್ರಾಮದ ನೂರಾರು ಎಕರೆ ಜೋಳದ ಫಸಲು ನೀರು ಪಾಲಾಗಿದ್ದು, ಹನೂರು ಪಟ್ಟಣ ಸೇರಿದಂತೆ 7 ಗ್ರಾಮ ಪಂಚಾಯಿತಿಗಳಿಗೆ ಕುಡಿಯುವ ನೀರು ಒದಗಿಸುವ ಹರಳೆ ಪಂಪ್ ಹೌಸ್ ಸುತ್ತ ನೀರು ತುಂಬಿದ್ದರಿಂದ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಈಗಾಗಲೇ ದಾಸನಪುರ ಗ್ರಾಮಸ್ಥರನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಬರಲು ಒಪ್ಪದವರನ್ನು ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಮನವೊಲಿಸುತ್ತಿದ್ದಾರೆ.

ಕಾವೇರಿ ನದಿಪಾತ್ರದಲ್ಲಿ ಬರುವ ಮೇಕೆದಾಟು, ಭೀಮೇಶ್ವರಿ, ಸಂಗಮ, ಹೊಗೆನಕಲ್ ಪ್ರವಾಸಿ ಸ್ಥಳಗಳಿಗೆ ಪ್ರವಾಸಿಗರನ್ನು ನಿರ್ಬಂಧಿಸುವಂತೆ ಕಾವೇರಿ ವನ್ಯಜೀವಿಧಾಮದ ಸಿಎಫ್ಒ ರಮೇಶ್ ಆದೇಶಿದ್ದಾರೆ.

ಕಳೆದ ಬಾರಿ ಕೊಚ್ಚಿ ಹೋಗಿದ್ದ ವೆಸ್ಲಿ ಸೇತುವೆ ಬಳಿ ರಭಸವಾಗಿ ನೀರು ಬರುತ್ತಿರುವುದರಿಂದ ಸೇತುವೆ ಸಮೀಪ ನಿಷೇಧಾಜ್ಞೆ ಹೊರಡಿಸಿದ್ದು, ಯಾರೂ ಸೇತುವೆ ಬಳಿ ಸುಳಿಯದಂತೆ ಕಟ್ಟೆಚ್ಚರ ವಹಿಸಲಾಗಿದೆ.

Intro:ಜಲಾವೃತ ಹಂತದಲ್ಲಿ ಕೊಳ್ಳೇಗಾಲದ ೨ ಗ್ರಾಮಗಳು: ಮೇಕೆದಾಟು, ಭೀಮೇಶ್ವರಿಗೆ ನೋ ಎಂಟ್ರಿ!

ಚಾಮರಾಜನಗರ: ಹೆಚ್ಚುತ್ತಿರುವ ಕಾವೇರಿ ಆರ್ಭಟಕ್ಕೆ ಕೊಳ್ಳೇಗಾಲ ತಾಲೂಕಿನ ಹರಳೆ ಮತ್ತು ದಾಸನಪುರ ಗ್ರಾಮಗಳು ಜಲಾವೃತ ಹಂತ ತಲುಪುತ್ತಿದೆ.

Body:ಈಗಾಗಲೇ ಎರಡು ಗ್ರಾಮದ ನೂರಾರು ಎಕರೆ ಜೋಳದ ಫಸಲು ನೀರುಪಾಲಾಗಿದ್ದು ಹನೂರು ಪಟ್ಟಣ ಸೇರಿದಂತೆ ೭ ಗ್ರಾಪಂ ಗಳಿಗೆ ಕುಡಿಯುವ ನೀರು ಒದಗಿಸುವ ಹರಳೆ ಪಂಪ್ ಹೌಸ್ ಸುತ್ತ ನೀರು ತುಂಬಿದ್ದರಿಂದ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ.

ಈಗಾಗಲೇ ದಾಸನಪುರ ಗ್ರಾಮಸ್ಥರನ್ನು ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸುವ ಪ್ರಕ್ರಿಯೆ ನಡೆಯುತ್ತಿದ್ದು ಬರಲು ಒಪ್ಪದವರನ್ನು ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಮನವೊಲಿಸುತ್ತಿದ್ದಾರೆ.

ಈಗಾಗಲೇ ಕಾವೇರಿ ನದಿಪಾತ್ರದಲ್ಲಿ ಬರುವ ಮೇಕೆದಾಟು, ಭೀಮೇಶ್ವರಿ, ಸಂಗಮ, ಹೊಗೆನಕಲ್ ಪ್ರವಾಸಿ ಸ್ಥಳಗಳಿಗೆ ಪ್ರವಾಸಿಗರನ್ನು ನಿರ್ಭಂಧಿಸುವಂತೆ ಕಾವೇರಿ ವನ್ಯಜೀವಿಧಾಮದ ಸಿಎಫ್ಒ ರಮೇಶ್ ಆದೇಶಿದ್ದಾರೆ.

Conclusion:ಕಳೆದ ಬಾರಿಗೆ ಕೊಚ್ಚಿ ಹೋಗಿದ್ದ ವೆಸ್ಲಿ ಸೇತುವೆ ಬಳಿ ರಭಸವಾಗಿ ನೀರು ಬರುತ್ತಿರುವುದರಿಂದ ವೆಸ್ಲಿ ಸೇತುವೆ ಸಮೀಪ ನಿಷೇಧಾಜ್ಞೆ ಹೊರಡಿಸಿದ್ದು ಯಾರೂ ಸೇತುವೆ ಬಳಿ ಸುಳಿಯದಂತೆ ಕಟ್ಟೆಚ್ಚರ ವಹಿಸಲಾಗಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.