ETV Bharat / state

19 ಷರತ್ತು ಪಾಲಿಸಿದರಷ್ಟೇ ಸಪ್ತಪದಿ ತುಳಿಯಲು ಅವಕಾಶ!

ಕೊರೊನಾ ಲಾಕ್​ಡೌನ್ ಬಳಿಕ ಎಲ್ಲಾ ಶುಭ ಸಮಾರಂಭಗಳಿಗೂ ಬ್ರೇಕ್​ ಹಾಕಲಾಗಿತ್ತು. ಅಲ್ಲದೆ ಕೆಲವು ಸರಳವಾಗಿ ನಡೆದರೆ, ಇನ್ನೂ ಕೆಲವು ಮುಂದೂಡಲ್ಪಟ್ಟಿದ್ದವು. ಆದರೆ ಲಾಕ್​ಡೌನ್ ಸಡಿಲಿಕೆಯಾಗಿರುವ ಹಿನ್ನೆಲೆ ವಿವಾಹ ಸಮಾರಂಭ ಸೇರಿ ಕೆಲ ಶುಭ ಕಾರ್ಯಗಳಿಗೆ ಅನುಮತಿ ನೀಡಲಾಗಿದೆ. ಆದರೆ ಕೆಲವು ಷರತ್ತುಗಳನ್ನು ಕಡ್ಡಾಯ ಪಾಲಿಸಬೇಕಾಗಿದೆ.

author img

By

Published : May 19, 2020, 4:57 PM IST

19 Conditions apply for a wedding ceremony In Lockdown
19 ಷರತ್ತು ಪಾಲಿಸಿದರಷ್ಟೇ ಸಪ್ತಪದಿ ತುಳಿಯಲು ಅವಕಾಶ..!

ಚಾಮರಾಜನಗರ: ಹಲವು ತಿಂಗಳ ಯೋಜನೆ, ಸಂಭ್ರಮ-ಸಡಗರದ ವಿವಾಹ ಸಮಾರಂಭಕ್ಕೆ ಕೊರೊನಾ ತಣ್ಣೀರು ಎರಚಿದ್ದು, ಲಾಕ್​​ಡೌನ್​ 4.Oನಲ್ಲಿ ವಿವಾಹವಾಗುವವರು 19 ಕಂಡೀಷನ್​ಗಳನ್ನು ಪಾಲಿಸಲೇಬೇಕಿದೆ.

19 ಷರತ್ತು ಪಾಲಿಸಿದರಷ್ಟೇ ಸಪ್ತಪದಿ ತುಳಿಯಲು ಅವಕಾಶ!

ಈ ಹಿಂದೆ ವರನ ಕಡೆಯವರು ಇಲ್ಲವೇ ವಧುವಿನ ಕಡೆಯವರು ಕೆಲವು ಕಂಡೀಷನ್ಸ್​​ ಹಾಕಿ ಮದುವೆ ಮಾಡಿಕೊಡುತ್ತಿದ್ದುದು ಸಾಮಾನ್ಯವಾಗಿತ್ತು. ‌ಆದರೆ ಕೊರೊನಾ ಕರಿಛಾಯೆಯಿಂದ ಮದುವೆ ಸಮಾರಂಭಕ್ಕೆ ಜಿಲ್ಲಾಡಳಿತ ಬರೋಬ್ಬರಿ 19 ಷರತ್ತುಗಳನ್ನು ವಿಧಿಸಿದ್ದು, ಸಪ್ತಪದಿ ತುಳಿಯಲು ಇದರ ಪಾಲನೆ ಕಡ್ಡಾಯವಾಗಿದೆ.

ಷರತ್ತುಗಳು

1. ವಿವಾಹ ಸಮಾರಂಭಕ್ಕೆ ಜಿಲ್ಲಾಡಳಿತದ ಅನುಮತಿ ಕಡ್ಡಾಯ

2. ಸಮಾರಂಭದಲ್ಲಿ ಭಾಗಿಯಾಗುವವರು ಮಾಸ್ಕ್ ಧರಿಸುವುದು ಕಡ್ಡಾಯ

3. ವಧು-ವರ ಸೇರಿದಂತೆ ಅತಿಥಿಗಳ‌ ಸಂಖ್ಯೆ ಗರಿಷ್ಠ 50 ಮಂದಿ ಮಾತ್ರ ಭಾಗಿಯಾಗಬೇಕು

4. ಎ/ಸಿ ಬಳಸುವಂತಿಲ್ಲ, ಸೂಕ್ತ ಗಾಳಿ- ಬೆಳಕು ಇರಲೇಬೇಕು

5. ಕಂಟೇನ್ಮೆಂಟ್ ವಲಯದ ವ್ಯಕ್ತಿಗಳು ಸಮಾರಂಭದಲ್ಲಿ ಪಾಲ್ಗೊಳ್ಳುವಂತಿಲ್ಲ

6. 65 ವರ್ಷ ಮೇಲ್ಪಟ್ಟವರು, ಗರ್ಭಿಣಿಯರು ಹಾಗೂ 10 ವರ್ಷದ ಮಕ್ಕಳು ಭಾಗವಹಿಸಲು ನಿರ್ಬಂಧ

7. ಸಮಾರಂಭದಲ್ಲಿ ಭಾಗಿಯಾಗುವವರಿಗೆ ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ

8. ಜ್ವರ, ಶೀತ, ಕೆಮ್ಮು ಇರುವವರು ಭಾಗಿಯಾಗುವಂತಿಲ್ಲ

9. ಅತಿಥಿಗಳು 1 ಮೀ. ದೈಹಿಕ ಅಂತರ ಕಾಪಾಡಬೇಕು

10. ಹ್ಯಾಂಡ್ ವಾಶ್, ಟಿಶ್ಯು ಪೇಪರ್, ಸಾಬೂನು, ನೀರಿನ ವ್ಯವಸ್ಥೆ ಕಲ್ಪಿಸಬೇಕು

11. ತಂಬಾಕು, ಗುಟ್ಕಾ, ಚೂಯಿಂಗ್ ಗಮ್ ಬಳಸುವಂತಿಲ್ಲ

12. ಸಮಾರಂಭದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉಗುಳುವಂತಿಲ್ಲ

13. ಸ್ವಚ್ಛತೆ, ನೈರ್ಮಲ್ಯ ಕಾಪಾಡುವುದು ಕಡ್ಡಾಯ

14. ಕಲ್ಯಾಣ ಮಂಟಪಗಳಲ್ಲಿ ಸಿಸಿಟಿವಿ ಅಳವಡಿಕೆ ಕಡ್ಡಾಯ

15. ಹೊರ ರಾಜ್ಯ, ಹೊರ ಜಿಲ್ಲೆಯಿಂದ ಬರುವವರು ಅನುಮತಿ ಪಡಯಬೇಕು ಬರಬೇಕು

16. ದೇವಾಲಯಗಳಲ್ಲಿ ವಿವಾಹ ಸಮಾರಂಭ ನಡೆಸುವಂತಿಲ್ಲ

17. ಸಮಾರಂಭಕ್ಕೆ ಆಗಮಿಸುವ ವಾಹನಗಳಿಗೆ ಕಡ್ಡಾಯ ರಾಸಾಯನಿಕ ಸಿಂಪಡಣೆ

18. ವಿವಾಹ ಸಮಾರಂಭದಲ್ಲಿ ಭಾಗವಹಿಸುವವರ ಹೆಸರು, ಮೊಬೈಲ್ ಸಂಖ್ಯೆ ಕಡ್ಡಾಯವಾಗಿ ದಾಖಲಿಸಬೇಕು

19. ವಿವಾಹ ಸಮಾರಂಭಕ್ಕೆ ಆಗಮಿಸುವವರು ಕಡ್ಡಾಯವಾಗಿ ಆರೋಗ್ಯ ಸೇತು ಆ್ಯಪ್ ಇನ್​​ಸ್ಟಾಲ್​​ ಮಾಡಿಕೊಳ್ಳುವುದು ಕಡ್ಡಾಯ.

ಹೀಗೆ 19 ಷರತ್ತುಗಳನ್ನು ವಿಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದ್ದು, ಉಲ್ಲಂಘನೆ ಮಾಡಿದವರ ವಿರುದ್ಧ ಕ್ರಮಕ್ಕೂ ಜಿಲ್ಲಾಡಳಿತ ಮುಂದಾಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.