ETV Bharat / state

ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ₹17.75 ಕೋಟಿ ಬಿಡುಗಡೆ: ಸಂಸದ ಶ್ರೀನಿವಾಸ್​​​ ಪ್ರಸಾದ್ - MLA D.K.Shivakumar

ಶಾಸಕ ಡಿ.ಕೆ.ಶಿವಕುಮಾರ್ ತಿಹಾರ್ ಜೈಲಿನಿಂದ ಬಂದ ನಂತರ ಸಂಬಂಧವಿಲ್ಲದಂತೆ ಮಾತನಾಡುತ್ತಿದ್ದಾರೆ. ಏಸು ಪ್ರತಿಮೆ ನಿರ್ಮಿಸದಿದ್ದರೆ ಏನಾಗಲ್ಲ ಎಂದು ಸಂಸದ ಶ್ರೀನಿವಾಸ್​​ ಪ್ರಸಾದ್​ ಹೇಳಿದರು.

MP V Srinivas Prasad
ಸಂಸದ ಶ್ರೀನಿವಾಸ್​​​ ಪ್ರಸಾದ್
author img

By

Published : Jan 14, 2020, 7:03 AM IST

ಚಾಮರಾಜನಗರ: ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗೆ ಕೇಂದ್ರ ಸರ್ಕಾರದಿಂದ ₹ 12.75 ಕೋಟಿ ಬಿಡುಗಡೆಯಾಗಿದೆ. ಈ ತಿಂಗಳ ಕೊನೆಯಲ್ಲಿ ಟೆಂಡರ್ ಕರೆದು ರಸ್ತೆ ಅಭಿವೃದ್ಧಿಪಡಿಸಲಾಗುವುದು ಎಂದು ಸಂಸದ ವಿ.ಶ್ರೀನಿವಾಸ್​​​ ಪ್ರಸಾದ್ ತಿಳಿಸಿದರು.

ಅನುದಾನ ಬಿಡುಗಡೆಯಾದ ಹಿನ್ನೆಲೆಯಲ್ಲಿ ಗುಣಮಟ್ಟದ ರಸ್ತೆ ನಿರ್ಮಾಣವಾಗಲಿದೆ. ಮಾದಾಪುರ, ವೆಂಕಟಯ್ಯನ ಛತ್ರ, ಇನ್ನಿತರ ಕಡೆ ರಸ್ತೆ ವಿಸ್ತರಣೆ ಕಾರ್ಯ ಪ್ರಗತಿಯಲ್ಲಿದೆ. ಯಾವುದೇ ಅನುದಾನದ ಕೊರತೆ ಇಲ್ಲ. ಎಲ್ಲ ರಸ್ತೆಗಳ ಕಾಮಗಾರಿಗಳು ಶೀಘ್ರವೇ ನಡೆಯಲಿವೆ ಎಂದರು.

ಜಿಲ್ಲೆಯ ಚಾಮುಲ್‌ನಲ್ಲಿ ಹುದ್ದೆಗಳ ನೇಮಕದಲ್ಲಿ ಭ್ರಷ್ಟಾಚಾರ ಹಾಗೂ ಸ್ವಜನ ಪಕ್ಷಪಾತ ನಡೆದಿದೆ. ಈ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಇದೊಂದು ತಲೆ ತಗ್ಗಿಸುವ ಕೆಲಸ. ನೇಮಕಾತಿ ಕ್ರಮಬದ್ದವಾಗಿಲ್ಲ. ವರದಿ ಬಂದ ನಂತರ ಸಿಓಡಿ ತನಿಖೆಗೆ ವರ್ಗಾಹಿಸಲಾಗುವುದು ಎಂದು ಹೇಳಿದರು.

ಬಿಜೆಪಿ ಸರ್ಕಾರದಲ್ಲಿ ಅಭಿವೃದ್ಧಿ ಕಾರ್ಯಗಳು ಜರುತ್ತಿಲ್ಲ ಎಂಬ ಕಾಂಗ್ರೆಸ್ ಟೀಕೆ ಕುರಿತು ಮಾತನಾಡಿ, ಹಂತ ಹಂತವಾಗಿ ಅಭಿವೃದ್ಧಿ ಕಾರ್ಯಕ್ರಮಗಳು ನಡೆಯಲಿವೆ. 14 ತಿಂಗಳು ಮೈತ್ರಿ ಸರ್ಕಾರ ಅಧಿಕಾರದಲ್ಲಿತ್ತು. ಯಾವ ಅಭಿವೃದ್ಧಿ ಮಾಡಿತ್ತು. ಸಮನ್ವಯ ಸಮಿತಿ ಮಾಡಿಕೊಂಡು ಸಿದ್ದರಾಮಯ್ಯ ಅವರನ್ನ ಅಧ್ಯಕ್ಷರಾಗಿ ಮಾಡಿದ್ದರೂ ಸಮನ್ವಯತೆ ಸಾಧಿಸಲಿಲ್ಲ. ಸಮನ್ವಯತೆ ಸಾಧಿಸಿದ್ದರೆ 17 ಶಾಸಕರು ಕಾಂಗ್ರೆಸ್-ಜೆಡಿಎಸ್​ ಬಿಟ್ಟು ಏಕೆ ಬರುತ್ತಿದ್ದರು ಎಂದು ಪ್ರಶ್ನಿಸಿದರು.

ಶಾಸಕ ಡಿ.ಕೆ.ಶಿವಕುಮಾರ್ ತಿಹಾರ್ ಜೈಲಿನಿಂದ ಬಂದ ನಂತರ ಸಂಬಂಧವಿಲ್ಲದಂತೆ ಮಾತನಾಡುತ್ತಿದ್ದಾರೆ. ಏಸು ಪ್ರತಿಮೆ ನಿರ್ಮಿಸದಿದ್ದರೆ ಏನಾಗಲ್ಲ. ಸೇವೆ ಕ್ರೈಸ್ತ ಧರ್ಮದ ಮುಖ್ಯ ಉದ್ದೇಶ. ಸೇವೆ ಮಾಡಬೇಕೆಂದು ಬಯಸುವವರು ಕ್ರೈಸ್ತ ಧರ್ಮದವರು. ಪ್ರತಿಮೆಗಳನ್ನು ಸ್ಥಾಪಿಸಬೇಕು ಎಂಬುದನ್ನು ಬಯಸುವವರು ಕ್ರೈಸ್ತ ಧರ್ಮದವರಲ್ಲ ಎಂದು ಹೇಳಿದರು.

ಡಿಕೆಶಿ ಸಾವಿರಾರು ಕೋಟಿ ಒಡೆಯ ಎಂದು ಘೋಷಿಸಿಕೊಂಡಿದ್ದು, ಗೋಮಾಳ ಜಾಗ ಬಿಟ್ಟು ಬೇರೆಡೆ ಪ್ರಾರ್ಥನ ಮಂದಿರ ಹಾಗೂ ಪ್ರತಿಮೆ ಕಟ್ಟಿಕೊಡಲಿ. ಗೋಮಾಳ ಸರ್ಕಾರದ ಆಸ್ತಿ. ಸರ್ಕಾರದ ಆಸ್ತಿಯಲ್ಲಿ ಪ್ರತಿಮೆ ನಿರ್ಮಿಸಲು ಯಾರಿಗೂ ಹಕ್ಕಿಲ್ಲ ಎಂದರು.

Intro:ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ 17.75 ಕೋಟಿ ರೂ. ಬಿಡುಗಡೆ: ಸಂಸದ ವಿ.ಶ್ರೀ

ಚಾಮರಾಜನಗರ:
ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗೆ ಕೇಂದ್ರ ಸರ್ಕಾರದಿಂದ ೧೨.೭೫ ಕೋಟಿ ರೂ. ಬಿಡುಗಡೆಯಾಗಿದ್ದು, ಈ ತಿಂಗಳ ಕೊನೆಯಲ್ಲಿ ಟೆಂಡರ್ ಕರೆದು ರಸ್ತೆಯನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್ ತಿಳಿಸಿದರು.

Body:ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿ,
ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗುತ್ತಿರುವ ಹಿನ್ನಲೆಯಲ್ಲಿ ಗುಣಮಟ್ಟದ ರಸ್ತೆ ನಿರ್ಮಾಣವಾಗಲಿದೆ, ಉಳಿದಂತೆ ಮಾದಾಪುರ, ವೆಂಕಟಯ್ಯನ ಛತ್ರ ಇನ್ನಿತರ ಕಡೆ ರಸ್ತೆ ಅಗಲೀಕರಣ ಕಾರ್ಯ ಪ್ರಗತಿಯಲ್ಲಿದೆ. ಯಾವುದೇ ಅನುದಾನದ ಕೊರತೆ ಇಲ್ಲ. ಎಲ್ಲಾ ರಸ್ತೆ ಕಾಮಗಾರಿಗಳು ನಡೆಯಲಿವೆ ಎಂದು ಹೇಳಿದರು.

ಜಿಲ್ಲೆಯ ಚಾಮುಲ್‌ನಲ್ಲಿ ಹುದ್ದೆಗಳ ನೇಮಕಾತಿಯಲ್ಲಿ ಭಾರಿ ಭ್ರಷ್ಟಚಾರ ಹಾಗೂ ಸ್ವಜನ ಪಕ್ಷಪಾತ ನಡೆದಿದ್ದು, ಈ ಬಗ್ಗೆ ಜಿಲ್ಲಾಧಿಕಾರಿ ಬಳಿ ಮಾತನಾಡಿದ್ದು, ಇದೊಂದು ತಲೆ ತಗ್ಗಿಸುವಂತ ಕೆಲಸವಾಗಿದೆ.
ನೇಮಕಾತಿ ಕ್ರಮಬದ್ದವಾಗಿಲ್ಲ. ಈ ಕುರಿತು ಜಿಲ್ಲಾಧಿಕಾರಿಯಿಂದ ವರದಿ ಬಂದ ನಂತರ ಸಿಓಡಿ ತನಿಖೆಗೆ ವರ್ಗಾಹಿಸಲಾಗುವುದು ಎಂದರು.

ಇದೇ ವೇಳೆ , ಬಿಜೆಪಿ ಸರ್ಕಾರದಲ್ಲಿ ಯಾವುದೇ ಅಭಿವೃದ್ಧಿಯಾಗುತ್ತಿಲ್ಲ ಎಂಬ ಕಾಂಗ್ರೆಸ್ ಟೀಕೆ ಕುರಿತು ಮಾತನಾಡಿ, ಹಂತ ಹಂತವಾಗಿ ಅಭಿವೃದ್ಧಿ ಯೋಜನೆಗಳು ಬರುತ್ತವೆ, ೧೫ ತಿಂಗಳು ಅಧಿಕಾರದಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರ ಇತ್ತು ಯಾವ ಅಭಿವೃದ್ಧಿ ಮಾಡಿದ್ರು, ಸಮನ್ವಯ ಸಮಿತಿ ಮಾಡಿಕೊಂಡು ಸಿದ್ದರಾಮಯ್ಯ ಅವರನ್ನ ಅಧ್ಯಕ್ಷರಾಗಿ ಮಾಡಿದ್ರೂ ಸಮನ್ವಯತೆ ಸಾಧಿಸಲಿಲ್ಲ. ಸಮನ್ವಯತೆ ಸಾಧಿಸಿದ್ರೆ ೧೫ ಮಂದಿ ಶಾಸಕರು ಏಕೆ ಕಾಂಗ್ರೆಸ್ ಬಿಟ್ಟು ಬರುತ್ತಿದ್ದರು. ೧೫ ತಿಂಗಳು ಅಭಿವೃದ್ಧಿ ಮಾಡದೇ ಅಸಹ್ಯವಾದ ಸರ್ಕಾರವಾಗಿತ್ತು ಎಂದು ಟೀಕಿಸಿದರು.

ಏಸು ಪ್ರತಿಮೆ ವಿಚಾರ ಕುರಿತು ಮಾತನಾಡಿ,
ಮಾಜಿ ಸಚಿವ ಡಿ.ಕೆ. ಶಿವಕುಮಾರ್ ತ್ರಿಹಾರ್ ಜೈಲಿಗೆ ಹೋಗಿ ಬಂದ ಮೇಲೆ ಒಂದಕ್ಕೊಂದು ಸಂಬಂಧವಿಲ್ಲದಂತೆ ಮಾತನಾಡುತ್ತಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು.

Conclusion:ಏಸು ಪ್ರತಿಮೆ ಮಾಡದಿದ್ದರೆ ಏನು ಆಗಲ್ಲ. ಪ್ರಪಂಚದಲ್ಲಿ ದೊಡ್ಡ ಧರ್ಮವಾಗಿರುವ ಕ್ರೈಸ್ತ ಧರ್ಮದ ಮುಖ್ಯ ಉದ್ದೇಶ ಸೇವೆ. ಸೇವೆ ಮಾಡಬೇಕೆಂದು ಬಯಸುವವರು ಕ್ರೈಸ್ತ ಧರ್ಮದವರು. ಪ್ರತಿಮೆಗಳನ್ನು ಸ್ಥಾಪನೆ ಮಾಡಬೇಕು ಎಂಬುದನ್ನು ಬಯಸುವವರು ಕ್ರೈಸ್ತ ಧರ್ಮದವರಲ್ಲ. ಅವರಿಗೆ ಪ್ರಪಂಚದಲ್ಲಿ ಸುಖ, ಶಾಂತಿ ಸ್ಥಾಪನೆಯಾಗಿಲಿ ಎಂದು ಪ್ರಾರ್ಥಿಸಲು ಸ್ಥಳ ಬೇಕು ಎಂದಷ್ಟೇ ಕೇಳುತ್ತಾರೆ. ಡಿಕೆಶಿ ಸಾವಿರಾರು ಕೋಟಿ ಒಡೆಯ ಎಂದು ಘೋಷಣೆ ಮಾಡಿಕೊಂಡಿದ್ದು, ಗೋಮಾಳ ಬಿಟ್ಟು ಬೇರೆಡೆ ಪ್ರಾರ್ಥನ ಮಂದಿರ ಹಾಗೂ ಪ್ರತಿಮೆಯನ್ನು ಕಟ್ಟಿಕೊಡಬೇಕು. ಗೋಮಾಳ ಸರ್ಕಾರದ ಆಸ್ತಿ ಗೋಮಾಳವನ್ನು ಪ್ರತಿಮೆ ಮಾಡುವ ಉದ್ದೇಶಕ್ಕೆ ಸರ್ಕಾರ ಯಾರಿಗೂ ನೀಡಲ್ಲ ಎಂದರು.

Bite illaaa
ETV Bharat Logo

Copyright © 2025 Ushodaya Enterprises Pvt. Ltd., All Rights Reserved.